ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ: ಸಿಎಂ

Public TV
1 Min Read
C M BOMMAI 1

ಬೆಂಗಳೂರು: ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶಿವನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ 655 ಮೀಟರ್ ಉದ್ದದ ಮೇಲ್ಸೆತುವೆ ಉದ್ಘಾಟನೆಯನ್ನು ಬೊಮ್ಮಾಯಿ ಅವರು ಮಾಡಿದರು. ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಾಜಿನಗರ, ಬಸವೇಶ್ವರನಗರ, ಶಿವನಗರ ಪ್ರದೇಶ ಅತಿ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶ. ಸಿಗ್ನಲ್ ಫ್ರೀ ಕಾರಿಡಾರ್ ನಿಂದ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. ತುಮಕೂರು, ಮೈಸೂರು ಹೆದ್ದಾರಿ ಸಂಚಾರ ದಟ್ಟಣೆ ಇದೆ. ಮೈಸೂರು ಸೋಪ್ ಕಾರ್ಖಾನೆ ಮೈಸೂರು ರಸ್ತೆ ವರಗೆ ಸಿಗ್ನಲ್ ಫೀ ಕಾರಿಡಾರ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಂದಗಿ ಕಾಂಗ್ರೆಸ್ಸಿನಲ್ಲಿ ಭುಗಿಲೆದ್ದ ಅಸಮಾಧಾನ

C M BOMMAI 3

ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ ಜನರ ಸಮಸ್ಯೆ ನಡುವೆ ಬದುಕುತ್ತಾರೆ. ಜನರ ಸಮಸ್ಯೆ ನಿವಾರಣೆಯಾದರೆ ಮಾತ್ರ ಜನಪರ ಸರ್ಕಾರವಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿ.ಬಿ.ಎಂ.ಪಿ. ಬೆಸ್ಕಾಂ ಮತ್ತು ಜಲಮಂಡಳಿ ಸಮನ್ವಯ ಇಲ್ಲದೇ ಇರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದರು.

C M BOMMAI 2

ಯೋಜನಾಬದ್ಧ ಯೋಜನೆಗಳನ್ನು ರೂಪಿಸಿ ಬೆಂಗಳೂರು ನಗರ ಅಭಿವೃದ್ದಿ ಪಡಿಸಲಾಗುವುದು. ಸರ್ಕಾರ ಮತ್ತು ಬಿಬಿಎಂಪಿ ಅಭಿವೃದ್ದಿ ಕೆಲಸಗಳಿಗೆ ಜನರ ಸಹಕಾರ ಮುಖ್ಯ ಮತ್ತು ಬೆಂಗಳೂರು ನಗರವನ್ನು ಸುಂದರ, ಸುರಕ್ಷಿತ, ಹಸಿರುಮಯ ನಗರ ಮಾಡುವುದು ನಮ್ಮ ಗುರಿ ಎಂದು ಹೇಳಿದರು. ಇದನ್ನೂ ಓದಿ:  40 ಅಲ್ಲ, 4 ಜನ ಶಾಸಕರನ್ನ ಕಾಂಗ್ರೆಸ್ ಸೆಳೆಯಲಿ ನೋಡೋಣ, ಸಾಯೋ ಪಾರ್ಟಿಗೆ ಯಾರು ಹೋಗ್ತಾರೆ?:ಈಶ್ವರಪ್ಪ

ವಸತಿ ಸಚಿವ ವಿ.ಸೋಮಣ್ಣ, ಅಬಕಾರಿ ಸಚಿವ ಗೋಪಾಲಯ್ಯ, ಸ್ಥಳೀಯ ಶಾಸಕ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್, ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಹನುಮಂತಯ್ಯ, ಮಾಜಿ ಮಹಾಪೌರ ಜಿ.ಪದ್ಮಾವತಿ, ಮಾಜಿ ಉಪಮಹಾಪೌರ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮಂಜುಳಾವಿಜಯಕುಮಾರ್, ಜಿ.ಕೃಷ್ಣಮೂರ್ತಿ, ಗಂಗಭೈರಯ್ಯ, ಮುನಿರಾಜು, ಮೋಹನ್ ಕುಮಾರ್, ದೀಪಾನಾಗೇಶ್, ರೂಪಲಿಂಗೇಶ್ವರ್ ಮತ್ತು ಜಯರತ್ನ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *