ಬೆಂಗಳೂರು: ಓಮಿಕ್ರಾನ್ ಕಾಣಿಸಿಕೊಂಡಿರುವ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೋವಿಡ್‍ನ ಓಮಿಕ್ರಾನ್ ತಳಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ತಳಿ ಓಮಿಕ್ರಾನ್ ಬಹಳ ವೇಗವಾಗಿ ಹರಡುತ್ತೆ. ಈ ಹಿನ್ನೆಲೆ ಭಾರತದಾದ್ಯಂತ ಕಟ್ಟೆಚ್ಚರ ವಹಿಸಲಾಗ್ತಿದೆ. ನಮ್ಮಲ್ಲಿಯೂ ಸಹ ಬಹಳ ಎಚ್ಚರವನ್ನು ವಹಿಸಿದ್ದೇವೆ. ನಮ್ಮಲ್ಲಿ ಈ ಸೋಂಕು ಕಂಡುಬಂದಿಲ್ಲ. ಮೈಸೂರಿನಲ್ಲಿ ಕಂಟೈನ್ಮೆಂಟ್ ಝೋನ್ ಮಾಡಿ ನಿಗಾ ಇಡಲಾಗಿದೆ. ಹೊಸ ತಳಿಯ ಮೇಲೆ ಗಮನ ಇಟ್ಟಿದ್ದೇವೆ ಎಂದು ಹೇಳಿದರು.
Advertisement
Advertisement
ರಾಜ್ಯದಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಟೆಸ್ಟ್ ಗಳನ್ನು ಹೆಚ್ಚು ಮಾಡಲು ಸೂಚಿಸಲಾಗಿದೆ. ಏರ್‌ಪೋರ್ಟ್ ಗಳಲ್ಲಿ ಹಲವು ಕಟ್ಟೆಚ್ಚರವನ್ನು ವಹಿಸಲಾಗಿದೆ. ವಿದೇಶಿ ಪ್ರಜೆಗಳಿಗೆ ನೆಗೆಟಿವ್ ಬಂದ್ರೆ ಮಾತ್ರ ದೇಶದ ಒಳಗೆ ಬಿಡ್ತೇವೆ. ಓಮಿಕ್ರಾನ್ ಇರೋ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಋಣ ತೀರಿಸಲು ಮುಂದಾದ್ರಾ ಸುಮಲತಾ?
Advertisement
ಸಂಭ್ರಮಕ್ಕೆ ನಿರ್ಬಂಧ?: ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆ ಸಂಭ್ರಮಗಳಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಕೋವಿಡ್ ಬೆಳವಣಿಗೆ ಹೇಗಿರುತ್ತೆ ಎಂಬುದನ್ನು ನೋಡಿಕೊಂಡು ನಿರ್ಧಾರ ಮಾಡ್ತೇವೆ ಎಂದರು.
Advertisement
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ ಅನೋ ಸಂದರ್ಭದಲ್ಲಿ ಓಮಿಕ್ರಾನ್ ಬೆಳವಣಿಗೆ ಆಗಿದೆ. ಸೌತ್ ಆಫ್ರಿಕಾ, ಹಾಂಕಾಂಗ್ ದೇಶಗಳಲ್ಲಿ ಈ ವೈರಸ್ ಕಂಡುಬಂದಿದೆ. ಇದು ಯಾವ ರೀತಿ ಪರಿಣಾಮ ಆಗುತ್ತೆ ಅಂತ ಗೊತ್ತಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತೆ. ಭಾರತದಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ನಿನ್ನೆ ಸಭೆಯನ್ನ ಮಾಡಿದ್ದಾರೆ. ನಮ್ಮಲ್ಲಿ ಧಾರವಾಡ, ಬೆಂಗಳೂರು ಹಾಸ್ಟೆಲ್ ಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಹಾಸ್ಟೆಲ್ ಗಳನ್ನ ಕಂಟೈನ್ಮೆಂಟ್ ಝೋನ್ ಆಗಿ ಮಾಡಲಾಗಿದೆ. ಪಾಸಿಟಿವ್ ಬಂದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮಲ್ಲಿ 80 ಲಕ್ಷ ಡೋಸ್ ಲಸಿಕೆ ಲಭ್ಯ ಇದೆ. ನಮ್ಮ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ರಾಜ್ಯದಲ್ಲಿ ಫಸ್ಟ್ ಡೋಸ್ ವ್ಯಾಕ್ಸಿನೇಷನ್ ಶೇ.91 ರಷ್ಟಾಗಿದೆ. ಸೆಕೆಂಡ್ ಡೋಸ್ ಶೇ.58 ಆಗಿದೆ. ಸೆಕೆಂಡ್ ಡೋಸ್ ಹೆಚ್ಚಿಸಲು ಸೂಚಿಸಲಾಗಿದೆ. ಡಿಸೆಂಬರ್ ಒಳಗೆ ಸೆಕೆಂಡ್ ಡೋಸ್ ಶೇ.70ರ ಗುರಿ ತಲುಪಲು ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‍ಮೇಲ್ – ನಕಲಿ ಎಸಿಬಿ ಅಧಿಕಾರಿ ಅರೆಸ್ಟ್
ಹೆಲ್ತ್ ವರ್ಕರ್ಸ್‍ಗೆ ಬೂಸ್ಟರ್ ಡೋಸ್ ಕೊಡಲು ಕೇಂದ್ರದಿಂದ ಅನುಮತಿ ಕೇಳಿದ್ದೇವೆ. ಕೇರಳದಿಂದ ಬಂದವರಿಗೆ ಮರು ಪರೀಕ್ಷೆಗೆ ಸೂಚನೆ ಮಾಡಲಾಗಿದೆ ಎಂದರು.