ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
Advertisement
ನಗರದಲ್ಲಿ ತಮ್ಮ ನಿವಾಸದ ಎದುರು ಮಾತನಾಡಿದ ಅವರು, ಗುಂಡು ಹಾಕಿದರೂ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆ ಮಾಡುತ್ತೇವೆ ಎಂಬ ಬಸನಗೌಡ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ಈ ಬಗ್ಗೆ ಅವರನ್ನೇ ಕೇಳಿ ಎಂದರು. ಇದನ್ನೂ ಓದಿ: ಗುಂಡು ಹೊಡೆಯೋದಾದ್ರೆ ಹೊಡಿರಿ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಸರ್ಕಾರಕ್ಕೆ ಸೆಡ್ಡು ಹೊಡೆದ ಯತ್ನಾಳ್
Advertisement
ಸೆ.3ರಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ನಿಯೋಗ ಪ್ರಧಾನಿಗಳ ಭೇಟಿಗೆ ಮುಂದಾಗಿರುವುದು ಅವರಿಗೆ ಬಿಟ್ಟ ವಿಚಾರ. ಈ ವಿಷಯ ಸದ್ಯ ನ್ಯಾಯಾಲಯದಲ್ಲಿದೆ, ಪ್ರಧಾನಿಗಳ ಭೇಟಿ ಮಾಡಲು ಅವರಿಗೆ ಅವಕಾಶವಿದೆ, ಭೇಟಿ ಮಾಡಲಿ ಎಂದರು. ಇದನ್ನೂ ಓದಿ: ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ: ಸಚಿವ ಸುನಿಲ್ ಕುಮಾರ್
Advertisement
ಗುಂಡು ಹೊಡೆಯೋದಾದ್ರೆ ಹೊಡಿರಿ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಸರ್ಕಾರಕ್ಕೆ ಸೆಡ್ಡು ಹೊಡೆದ ಯತ್ನಾಳ್
– ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ?https://t.co/40hu8hl2x5#BasavarajBommai #BasanagowdaPatilYatnal #BJP #Ganeshutsav #CoronaVirus #COVID19 #KannadaNews @CMofKarnataka @INCKarnataka
— PublicTV (@publictvnews) August 22, 2021
Advertisement
ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ
ಹುಬ್ಬಳ್ಳಿಯ ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ ಕಳೆಗಟ್ಟಿತ್ತು. ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಹೋದರಿಯರು ರಾಖಿ ಕಟ್ಟಿದರು. ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸಹೋದರಿಯರು ಸಹ ರಾಖಿ ಕಟ್ಟಿದರು. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.