ಬೆಂಗಳೂರು: ನಿಸರ್ಗ ಕಾಳಜಿ ಉದ್ದೇಶದಿಂದ ‘ಗಂಧದ ಗುಡಿ’ (Gandhadagudi) ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಣೆ ಮಾಡಿದರು.
Advertisement
ಅರಮನೆ ಮೈದಾನದಲ್ಲಿ ನಡೆಯುತ್ತಿರುವ `ಪುನೀತ ಪರ್ವ’ (Puneetha Parva) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಅಪ್ಪು ಎಲ್ಲರಿಗೂ ಪ್ರಿಯವಾಗಿರೋರು. ಅವರ ಪ್ರಯೋಗ ಇಂದು ನನಸಾಗುತ್ತಿದೆ. ಅಪ್ಪು ಅವರಂತಹ ವ್ಯಕ್ತಿತ್ವಕ್ಕೆ ದೇವರು ಶಾಂತಿ ನೀಡಲಿ. ಸಣ್ಣ ವಯಸ್ಸಿನಲ್ಲೇ ಬಣ್ಣ ಹಚ್ಚಿರೋ ಖ್ಯಾತಿ ಅಪ್ಪು ಅವರದ್ದು. ಅವರ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಜೀವಂತ ಎಂದು ಸ್ಮರಿಸಿದರು.
Advertisement
Advertisement
ಇದೇ ವೇಳೆ ಗಂಧದ ಗುಡಿ ಚಿತ್ರಕ್ಕೆ (Cinema) ತೆರಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ನಿಸರ್ಗದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸೋ ಕೆಲಸದ ಅಗತ್ಯವಿದೆ. ಹಾಗಾಗಿ ಗಂಧದ ಗುಡಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.