ಬೆಂಗಳೂರು: ಮೂಲಭೂತ ಸೌಕರ್ಯಗಳನ್ನು ಪ್ರಶ್ನೆ ಮಾಡಿ ಉದ್ಯಮಿಗಳಿಗೆ ಆಹ್ವಾನ ನೀಡುತ್ತಿರುವ ತಮಿಳುನಾಡು, ತೆಲಂಗಾಣದ ರಾಜ್ಯಗಳ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು, ತೆಲಂಗಾಣದವರು ಬಹಳಷ್ಟು ಹತಾಶರಾಗಿದ್ದಾರೆ. ನಮ್ಮ ರಾಜ್ಯವನ್ನು ಕಂಪೇರ್ ಮಾಡೋಕೆ ಆಗೋದಿಲ್ಲ. ಇವಾಗ ಅವರ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ನಾನು ನನ್ನ ರಾಜ್ಯದಲ್ಲಿ ಏನು ಒಳ್ಳೆಯದು ಇದೆ ಅದನ್ನು ಹೇಳಿ ಬಂಡವಾಳ ಹೂಡಿಕೆ ಮಾಡಲು ಕರೆಯಬೇಕು. ನಾವು ಇನ್ನೊಂದು ರಾಜ್ಯವನ್ನು ತೆಗಳಿ ಕರೆಯುವ ಅವಶ್ಯಕತೆ ಇಲ್ಲ. ನಾನು ತಮಿಳುನಾಡು, ತೆಲಂಗಾಣದಲ್ಲಿ ಇರೋರನ್ನು ಇಲ್ಲಿಗೆ ಬನ್ನಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಅದೇ ನಮ್ಮ ಸ್ಟ್ರೆಂಥ್. ಅವರು ಪಕ್ಕದ ರಾಜ್ಯಕ್ಕೆ ಬನ್ನಿ ಅಂದರೆ ಅದರ ಅರ್ಥ ಅವರ ರಾಜ್ಯಕ್ಕೆ ಯಾರೂ ಬರ್ತಿಲ್ಲ ಅಂತಾ. ಅಂದರೆ ಅದು ಅವರ ವೀಕ್ನೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಾಂಬ್ ಬೆದರಿಕೆಯೊಡ್ಡಿರುವ ಆರೋಪಿಗಳ ವಿರುದ್ಧ ಶೀಘ್ರವೇ ಕ್ರಮ: ಸಿಎಂ
Advertisement
Advertisement
ಇದೇ ವೇಳೆ ನಮಗೆ ಅಂತಾರಾಷ್ಟ್ರೀಯ ಜನರು ಹೂಡಿಕೆ ಮಾಡಲು ಬರುತ್ತಿದ್ದಾರೆ. ಬರುವಂತ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೂಡಿಕೆ ರಾಜ್ಯಕ್ಕೆ ಬರುತ್ತದೆ. ಬಹಳಷ್ಟು ಪ್ರಫೋಸಲ್ ಕರ್ನಾಟಕಕ್ಕೆ ಬರುತ್ತಿರುವುದು ಸಾಕ್ಷಿ. ನಮ್ಮ ಶಕ್ತಿ, ಮೂಲಭೂತ ಸೌಕರ್ಯದ ಮೇಲೆ ಜನರು ಇಲ್ಲಿಗೆ ಬರುತ್ತಿದ್ದಾರೆ. ಯಾರು ಏನೇ ಹುನ್ನಾರ ಮಾಡಿದ್ರು ಕರ್ನಾಟಕ ಪ್ರಗತಿ ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಯಾರೇ ಏನೇ ಅಭಿಯಾನ ಮಾಡಿದ್ರು ಕರ್ನಾಟಕದ ಪ್ರಗತಿ ನಿರಂತರವಾಗಿ ಮುಂದುವರಿಯುತ್ತದೆ. ಮುಂದುವರಿಯುವ ನಿಟ್ಟಿನಲ್ಲಿ ನಾನು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಕಿತ್ತೊಗೆಯಲು ಕನ್ನಡಿಗರು ನನಗೆ ಸುಪಾರಿ ಕೊಟ್ಟಿದ್ದಾರೆ: ಹೆಚ್‌ಡಿಕೆ
Advertisement
ಇದೇ ವೇಳೆ ಬೆಂಗಳೂರು ರಸ್ತೆಗಳ ಹಾಳಾಗಿರುವ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ವಿಚಾರವಾಗಿ ಸಿಎಂ ಪ್ರತಿಕ್ರಿಯಿಸಿ, ಬೆಂಗಳೂರಿನ ರಸ್ತೆಗಳು ಎಲ್ಲವೂ ಅಭಿವೃದ್ಧಿಯಾಗುತ್ತಿದೆ. ಮಳೆಗಾಲದಿಂದ ಸ್ವಲ್ಪ ತೊಂದರೆ ಆಗಿತ್ತು. ಮುಂದಿನ ದಿನಗಳಲ್ಲಿ ಎಲ್ಲ ರಸ್ತೆಗಳು ಅಭಿವೃದ್ಧಿ ಹೊಂದಲಿವೆ. ಮೋಹನ್ ದಾಸ್ ಪೈ ಆತಂಕ ಪಡುವಂತದ್ದು ಇಲ್ಲಿ ಏನು ಆಗಿಲ್ಲ. ಅವರ ಜೊತೆಗೂ ನಾನು ವೈಯುಕ್ತಿಕವಾಗಿ ಮಾತನಾಡುತ್ತೇನೆ ಎಲ್ಲ ವಿವರ ಕೂಡ ಸಾರ್ವಜನಿಕರಿಗೆ ಇದೆ. ನಗರೋತ್ಥಾನ, ಬಿಬಿಎಂಪಿಗೆ ಹಣ ಬಿಡುಗಡೆ ಮಾಡಿದ್ದೇನೆ. ಬರುವಂತಹ ದಿನಗಳಲ್ಲಿ ರಸ್ತೆಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿವೆ ಎಂದು ಸಿಎಂ ಭರವಸೆ ನೀಡಿದ್ದಾರೆ.