ಬೆಂಗಳೂರು: ಕಾಂಗ್ರೆಸ್ (Congress) ಭಯೋತ್ಪಾದಕರ ಪರವೋ ಅಥವಾ ದೇಶವನ್ನ ಉಳಿಸೋ ದೇಶಭಕ್ತರ ಪರವಾಗಿ ಇದ್ದಾರೋ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಖಾರವಾಗಿ ಪ್ರಶ್ನಿಸಿದರು.
ವಿಜಯ್ ದಿವಸ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಸಿಎಂ ಗೌರವ ಸಲ್ಲಿಸಿದರು. ಬಳಿಕ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರಬಲ್ ಶೂಟರ್‌ಗೆ ಈಗ ಟ್ರಬಲ್ – `ಕುಕ್ಕರ್ ಬ್ಲಾಸ್ಟ್’ ವಿವಾದದಲ್ಲಿ ಡಿಕೆಶಿ ಏಕಾಂಗಿ?
ಭ್ರಷ್ಟಾಚಾರ ಪ್ರಾರಂಭ ಆಗಿದ್ದೇ ಕಾಂಗ್ರೆಸ್‌ನಿಂದ. ಶಾರಿಕ್‌ಗೆ (Shariq) ಮಂಗಳೂರಿನಲ್ಲಿ ಬ್ಲಾಸ್ಟ್ ಮಾಡೋ ಉದ್ದೇಶ ಪಕ್ಕಾ ಇತ್ತು. ಅದಕ್ಕೆ ಎಲ್ಲಾ ತಯಾರಿ ಮಾಡಿದ್ರು. ಡಿ.ಕೆ.ಶಿವಕುಮಾರ್ ಆಕಸ್ಮಿಕ ಅಂತಾರೆ. ಇದು ಅವರಿಗೆ ಶೋಭೆ ತರೋದಿಲ್ಲ. ಚುನಾವಣೆಯ ತುಷ್ಠೀಕರಣದ ತಂತ್ರ ಇದು. ಇದು ಕಾಂಗ್ರೆಸ್‌ನ ಹಳೆಯ ತಂತ್ರ. ಈಗ ಇದೆಲ್ಲ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸೋನಿಯಾ, ರಾಹುಲ್, ಖರ್ಗೆ ಅವರು ಉತ್ತರ ಕೊಡಬೇಕು. ಕಾಂಗ್ರೆಸ್ ಯಾರ ಪರ ಅಂತ ಮೊದಲು ಹೇಳಲಿ. ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಾಗ ಆ ಪ್ರಕ್ರಿಯೆಯನ್ನ ಪ್ರಶ್ನೆ ಮಾಡೋದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಸೋನಿಯಾ ಗಾಂಧಿ, ರಾಹುಲ್, ಖರ್ಗೆ ಮಾತಾಡಲಿ. ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಪರವೇ ಎಂಬುದಕ್ಕೆ ಮೊದಲು ಅವರು ಉತ್ತರ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ ʼನಮ್ಮ ಬ್ರದರ್ಸ್ʼ ಎನ್ನಬೇಕಿತ್ತೇ – ಬಿಜೆಪಿ
ಒಬ್ಬ ವ್ಯಕ್ತಿ ಬಾಂಬ್‌ಗೆ ಬೇಕಾದ ವಸ್ತುಗಳನ್ನು ಕುಕ್ಕರ್‌ನಲ್ಲಿ ಹಾಕಿಕೊಂಡು ಹೋಗುವಾಗ ಸ್ಪೋಟವಾಗಿದೆ. ಮಂಗಳೂರಿನಲ್ಲಿ ಸ್ಪೋಟ ಮಾಡೋ ಉದ್ದೇಶ ಸ್ಪಷ್ಟವಾಗಿದೆ. ಅವನು ಹತ್ತು ಹಲವು ಹೆಸರು ಬದಲಾವಣೆ ಮಾಡಿದ್ದ. ಹಿಂದೆ 2-3 ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅವನು ಭಯೋತ್ಪಾದಕ ಸಂಪರ್ಕ ಇರೋದು ಸಾಬೀತಾಗಿದೆ. ಭಯೋತ್ಪಾದಕರ ಜೊತೆ ಲಿಂಕ್ ಇರೋದು ಸ್ಪಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷರು ಆಕಸ್ಮಿಕ, ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕಲು ಹೀಗೆ ಮಾಡಿದ್ದಾರೆ ಅನ್ನೋದು ಸರಿಯಲ್ಲ. ಇದು ಅವರಿಗೆ ಶೋಭೆ ತರಲ್ಲ. ಇದು ಕಾಂಗ್ರೆಸ್‌ನ ನೀತಿ ಆಗಿದೆ. ಭಯೋತ್ಪಾದಕ ಪ್ರಕರಣಗಳನ್ನು ಕ್ಷುಲ್ಲಕವಾಗಿ ನೋಡೋದು, ಅದಕ್ಕೆ ಬೆಂಬಲ ಕೊಡೋದು ಕಾಂಗ್ರೆಸ್ ಪ್ರವೃತ್ತಿ. ಚುನಾವಣೆಯ ತುಷ್ಠೀಕರಣ ತಂತ್ರ ಇದು. ಹೀಗೆ ಮಾತನಾಡಿದರೆ ಅವರಿಗೆ ಅಲ್ಪಸಂಖ್ಯಾತರ ಮತ ಬರುತ್ತೆ ಅನ್ನೋ ಹಳೆ ತಂತ್ರ ಇದು. ಅದನ್ನ ಬಳಕೆ ಮಾಡಿದ್ದಾರೆ. ಆದರೆ ಜನ ಜಾಗೃತರಾಗಿದ್ದಾರೆ, ಇದನ್ನ ನಂಬೋದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ದೇಶದ ನೈತಿಕತೆ ಕಡಿಮೆ ಮಾಡೋದು, ಪೊಲೀಸರ ನೈತಿಕತೆ ಕಡಿಮೆ ಮಾಡೋದು, ಹೀಗೆ ಮಾತಾಡೋದು ದೇಶಭಕ್ತನ ಕೆಲಸ ಅಲ್ಲ. ಕಾಂಗ್ರೆಸ್ ಪಕ್ಷ ತನ್ನ ನಿಲುವು ಸ್ಪಷ್ಟವಾಗಿ ಹೇಳಲಿ. ಜನರು ಅವರ ಬಗ್ಗೆ ತೀರ್ಮಾನ ಮಾಡ್ತಾರೆ. ಒಂದು ಸಮುದಾಯವನ್ನ ಒಲೈಕೆ ಮಾಡುವ ಕೆಲಸ ಮಾಡ್ತಿದ್ದಾರೆ. ಸಾಕ್ಷಿ ಸಮೇತ ಸಿಕ್ಕಾಗ ತನಿಖೆಯನ್ನ ಪ್ರಶ್ನೆ ಮಾಡೋದು, ಭಯೋತ್ಪಾದಕ ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ ಹಾಗೆ ಆಗುತ್ತೆ. ಕಾಂಗ್ರೆಸ್ ಈ ಬಗ್ಗೆ ತನ್ನ ನಿಲುವು ಹೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ