ದೇಶದ ಬಗ್ಗೆ ರಾಹುಲ್ ಗಾಂಧಿಯ ಯಾವ ಬಗೆಯ ಬದ್ಧತೆ?- ಬೊಮ್ಮಾಯಿ ವ್ಯಂಗ್ಯ

Public TV
1 Min Read
BASAVARAJ BOMMAI

ಹುಬ್ಬಳಿ: ರಾಹುಲ್ ಗಾಂಧಿ (Rahul Gandhi) ದೇಶದ ಬಗ್ಗೆ ಅಪಾರ ಗೌರವ ಹೊಂದಿದವರು. ಆದರೆ ಅವರು ವಿದೇಶಕ್ಕೆ ಹೋದಾಗ ದೇಶದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುತ್ತಾರೆ. ಇದು ದೇಶದ ಬಗ್ಗೆ ಇರುವ ಯಾವ ಬಗೆಯ ಬದ್ಧತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಸೋಲುವ ಹತಾಶೆಯಲ್ಲಿ ಬೋಗಸ್ ಕಾರ್ಡ್‍ನ ಸರಣಿ ನಡೆಸಿದೆ. ಇದೀಗ ತನ್ನ ನಾಲ್ಕನೇ ಬೋಗಸ್ ಕಾರ್ಡ್ ಬಿಡುಗಡೆ ಮಾಡಿದೆ. ಇದಕ್ಕೆ ನಾಡಿನ ಜನರು ಮರಳಾಗುವುದಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದವನ ಪ್ರಶ್ನೆ ಮಾಡಿದ ಸಂಬಂಧಿಯನ್ನೇ ಕೊಂದ- ಮತ್ತೋರ್ವನಿಗೆ ಗಾಯ

Rahul gandhi Cambridge

ರಾಜಸ್ಥಾನ, ಛತ್ತೀಸಗಢ ಸೇರಿದಂತೆ ಒಟ್ಟು ನಾಲ್ಕು ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಪದವೀಧರರಿಗೆ ಮಾಶಾಸನ ಕೊಡತ್ತೇವೆ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಎಲ್ಲಿಯೂ ಏನೂ ಕೊಟ್ಟಿಲ್ಲ ಎಂದಿದ್ದಾರೆ.

ಬರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‍ಗೆ ಗೊತ್ತಾಗಿದೆ. ಅದಕ್ಕಾಗಿಯೇ ಸುಳ್ಳು ಭರವಸೆ ನೀಡಿ ಜನರನ್ನು ಮೋಸ ಮಾಡಲು ತಯಾರಾಗಿದ್ದಾರೆ. 2010 ರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) 10 ಕೆಜಿ ಕೊಡುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಚುನಾವಣೆ ಬಂದಾಗ 7 ಕೆಜಿಗೆ ಏರಿಸಿದ್ದರು. ಚುನಾವಣೆಗಾಗಿ ಯೋಜನೆ ಮಾಡುವುದು, ಬೋಗಸ್ ಕಾರ್ಡ್ ಬಿಡುಗಡೆ ಮಾಡುವುದು ಕಾಂಗ್ರೆಸ್ ಗುಣಧರ್ಮ ಎಂದು ವಾಗ್ದಾಳಿ ನಡೆಸಿದ್ದಾರೆ.

ಉರಿಗೌಡ (Uri Gowda), ನಂಜೆಗೌಡ (Nanje Gowda) ಆಧಾರ್ ಕಾರ್ಡ್ ಮಾಡಿ ಸಿಟಿ ರವಿ ತಂದೆ, ಅಶ್ವಥ್ ನಾರಾಯಣ ತಾಯಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಶೋಧನೆಯಿಂದ ಸತ್ಯ ಹೊರಗಡೆ ಬರಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

Share This Article
Leave a Comment

Leave a Reply

Your email address will not be published. Required fields are marked *