ಬೆಳಗಾವಿ: ಗಡಿ ಜಿಲ್ಲೆ, ಕರ್ನಾಟಕ ಹೆಬ್ಬಾಗಿಲು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಚಿತ್ರೀಕರಿಸಿ ಕನ್ನಡ ಸೌಧದಿಂದ ತೆರಳುತ್ತಿದ್ದಾಗ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಅಪಘಾತಕ್ಕಿಡಾಗಿ ತಲೆಗೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿ ಕೆಎಲ್‍ಇ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ತರುತ್ತಿದ್ದಂತೆ ಕೂಡಲೇ ಮನವಿಗೆ ಸಿಎಂ ಸ್ಪಂದಿಸಿ ಔದಾರ್ಯ ಮೆರೆದಿದ್ದಾರೆ.
Advertisement
ಖಾಸಗಿ ವಾಹಿನಿ ಕ್ಯಾಮೆರಾಮೆನ್ ಸಚಿನ್ ಅಪಘಾತಕ್ಕಿಡಾಗಿ ತಲೆಗೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿ ಕೆಎಲ್‍ಇ ಆಸ್ಪತ್ರೆಗೆ ದಾಖಲಾಗಿದ್ದರು. ಸಚಿನ್ ಆರ್ಥಿಕ ಸ್ಥಿತಿ ಕಷ್ಟಕರವಾಗಿದ್ದು ಆಸ್ಪತ್ರೆಯ ಚಿಕಿತ್ಸೆಗೆ ಸಮಸ್ಯೆ ಉಂಟಾಗಿದೆ. ಈ ವೇಳೆ ಸಚಿನ್ ಸಹಾಯ ಕೋರಿದ್ದರು. ಸಂಘದ ಜಿಲ್ಲಾಧ್ಯಕ್ಷರಾದ ಭೀಮಶಿ ಜಾರಕಿಹೊಳಿ, ಜಾರಕಿಹೊಳಿ ನಿರ್ದೇಶನದಂತೆ ಸಂಘದ ಪ್ರಧಾನ್ ಕಾರ್ಯದರ್ಶಿ ದೀಲಿಪ್ ಕುರಂದವಾಡೆ ಹಾಗೂ ದೃಶ್ಯ ಮಾಧ್ಯಮದ ವರದಿಗಾರರು ಸೇರಿ ವಿಟಿಯು ಅಥಿತಿ ಗೃಹದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಹಾಯಕ್ಕಾಗಿ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಹೈಡ್ರಾಮಾ ಮಾಡುತ್ತಿದ್ದ ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡಿದ ಆಶಾ ಕಾರ್ಯಕರ್ತೆಯರು
Advertisement
Advertisement
ಮಾಧ್ಯಮ ಪ್ರತಿನಿಧಿಗಳ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚಗಳು ಸರ್ಕಾರ ಭರಿಸಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು. ಮುಖ್ಯಮಂತ್ರಿಗಳ ಈ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಎಲ್ಲಾ ಸದ್ಯಸರು ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಸಿಕ್ತು ಗುಡ್ ನ್ಯೂಸ್ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ
Advertisement