– ಎಮರ್ಜೆನ್ಸಿ ವೇಳೆ ನಾನು ಹುಬ್ಬಳ್ಳಿಯಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಯಾಗಿದ್ದೆ
– ಎಮರ್ಜೆನ್ಸಿ ನಮ್ಮ ಸಂವಿಧಾನಕ್ಕೆ, ದೇಶಕ್ಕೆ ಸವಾಲಾಗಿತ್ತು
– ಭಾರತ ಒಂದೇ ಪ್ರಬಲ ಪ್ರಜಾಪ್ರಭುತ್ವ ಇಟ್ಟುಕೊಂಡು ಮುಂದೆ ಸಾಗುತ್ತಿದೆ
ಬೆಂಗಳೂರು: ಎಮರ್ಜೆನ್ಸಿ ವಿರೋಧಿಸಿ ಪ್ರತಿಭಟನೆ ಮಾಡ್ತಿದ್ದಾಗ ಪೊಲೀಸರನ್ನ ನೋಡಿ ಓಡಿ ಹೋಗಿದ್ವಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತುರ್ತು ಪರಿಸ್ಥಿತಿ ಸಮಯವನ್ನು ನೆನಪಿಸಿಕೊಂಡರು.
Advertisement
ಚಾಲುಕ್ಯ ವೃತ್ತದಲ್ಲಿರುವ ಬಸವ ಸಮಿತಿ ಭವನದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕರಾಳ ದಿನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬೊಮ್ಮಾಯಿ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಸಂಸದರಾದ ಡಿವಿಎಸ್, ಪಿ.ಸಿ.ಮೋಹನ್ ಭಾಗಿಯಾಗಿದ್ದರು.
Advertisement
Advertisement
ಈ ವೇಳೆ ತುರ್ತು ಪರಿಸ್ಥಿತಿ ಕುರಿತು ಮಾತನಾಡಿದ ಸಿಎಂ, ಇಂದಿರಾಗಾಂಧಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿದ್ರು. ಎಮರ್ಜೆನ್ಸಿ ವೇಳೆ ಅವರು ಮಾಡಬಾರದ್ದನ್ನು ಮಾಡಿದರು. ಎಲ್ಲ ರಾಜಕೀಯ ನಾಯಕರು, ಹಲವು ಸಂಘಟನೆಗಳ ನಾಯಕರನ್ನು ಜೈಲಿನಲ್ಲಿಟ್ಟಿದ್ರು. ಅವರದ್ದೇ ಪಕ್ಷದಲ್ಲಿ ಎಮರ್ಜೆನ್ಸಿ ಸರಿಯಿಲ್ಲ ಅಂದವರನ್ನೂ ಜೈಲಿಗಟ್ಟಿದ್ರು ಎಂದು ಕಿಡಿಕಾರಿದರು. ಇದನ್ನೂ ಓದಿ: ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು
Advertisement
ಎಮರ್ಜೆನ್ಸಿ ವೇಳೆ ನಾನು ಸೆಕೆಂಡ್ ಪಿಯುಸಿ
ಎಮರ್ಜೆನ್ಸಿ ವೇಳೆ ನಾನು ಹುಬ್ಬಳ್ಳಿಯಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಅನಂತ್ ಕುಮಾರ್ ನನ್ನ ಕ್ಲಾಸ್ ಮೇಟ್ ಆಗಿದ್ರು. ರಾತ್ರಿ ಆಯ್ತು ಅಂದ್ರೆ ಕರಪತ್ರಗಳನ್ನು ಹಂಚ್ತಿದ್ರು. ನಮ್ಮ ಊರಿನಲ್ಲಿ ಏನೂ ಆಗ್ತಿಲ್ವಲ್ಲ ಅಂತ ಎನಿಸಿತ್ತು. ಆಗ ಎಲ್ಲ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದೆವು. ಅದು ಬಹಳ ದೊಡ್ಡ ಸುದ್ದಿ ಆಯ್ತು. ಆಗ ಪೊಲೀಸರು ಬಂದ್ರು ನಾವೆಲ್ಲ ಓಡಿ ಹೋದೆವು. ಬಂಧಿಸಿದವರನ್ನು ರಕ್ಷಿಸಲು ಅನಂತ್ ಕುಮಾರ್ ಹೋದರು. ನಾನು ಹೋಗಬೇಡ, ನಿನ್ನನ್ನೂ ಬಂಧಿಸ್ತಾರೆ ಅಂದೆ. ಅನಂತ್ ಕುಮಾರ್‌ನನ್ನು ಬಂಧಿಸಿ ನಾಲ್ಕು ತಿಂಗಳು ಜೈಲಲ್ಲಿದ್ರು ಎಂದು ಎಮರ್ಜೆನ್ಸಿ ದಿನಗಳ ಬಗ್ಗೆ ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.
ದೇಶ ಒಂದಾಗಿತ್ತು
ಎಮರ್ಜೆನ್ಸಿ ವೇಳೆ ಇಡೀ ದೇಶ ಒಂದಾಗಿತ್ತು. ಜಾತಿ, ಮತ, ಪಂಥ ಮರೆತು ದೇಶ ಒಂದಾಗಿತ್ತು. ಕೆಲವರು ಕಾಂಗ್ರೆಸ್ ಬಗ್ಗೆ ಈಗ ಬಹಳ ಮಾತಾಡ್ತಾರೆ. ಕಾಂಗ್ರೆಸ್ ಬಗ್ಗೆ ಮೆಚ್ಚುಗೆ ಮಾತಾಡೋರೂ ಎಮರ್ಜೆನ್ಸಿ ವಿರೋಧಿಸಿದ್ರು. ಆತ್ಮವಂಚನೆ ಮಾಡಿಕೊಂಡು ಈಗ ಕಾಂಗ್ರೆಸ್‍ನ ಹೊಗಳ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‍ನ ಹಲವು ವಲಸಿಗ ನಾಯಕರಿಗೆ ಕಾಲೆಳೆದರು.
ಎಮರ್ಜೆನ್ಸಿ ನಮ್ಮ ಸಂವಿಧಾನಕ್ಕೆ, ದೇಶಕ್ಕೆ ಸವಾಲಾಗಿತ್ತು. ಜನಶಕ್ತಿಯೇ ಗೆಲ್ಲುತ್ತದೆ ಅಂತ ಜೆಪಿ ಹೇಳಿದ್ರು. ದೈತ್ಯ ಶಕ್ತಿ ಎದುರು ಜನಶಕ್ತಿ ಗೆಲ್ಲುತ್ತೆ ಅಂದಿದ್ರು. ಆಗ ಎಲ್ಲ ಯುವಕರೂ ಸಿಡಿದೆದ್ದಿದ್ರು. ಸ್ವತಂತ್ರ ಕಾಲದ ಕಿಚ್ಚು ಜನತೆಯಲ್ಲಿ ಇತ್ತು. ಪ್ರಜಾಪ್ರಭುತ್ವದಲ್ಲಿ ಜನಶಕ್ತಿಯೇ ಗೆಲ್ಲೋದು. ಇಂಥ ಕರಾಳ ಶಾಸನ, ದಿನಗಳು ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಜೈಲಿನಲ್ಲಿ ಇದ್ದರು. ಅನೇಕರನ್ನು ಜೈಲಿಗೆ ಹಾಕಿದ್ದರು. ಆದರೂ ಯಾರೂ ಧೃತಿಗೆಡಲಿಲ್ಲ. ಎಲ್ಲರಿಗೂ ಅದಮ್ಯವಾದ ವಿಶ್ವಾಸವಿತ್ತು. ದೇಶದ ಪ್ರಜಾಪ್ರಭುತ್ವದ ದೊಡ್ಡ ಪ್ರಮಾಣದ ಬದಲಾವಣೆ ಕರಾಳ ದಿನದಿಂದ ಬಂದಿದೆ. ಜನಶಕ್ತಿಯೇ ಇದಕ್ಕೆ ಮುಖ್ಯ ಕಾರಣ. ಇದನ್ನು ಸಂಭ್ರಮಿಸೋದಲ್ಲ ಆದರೆ ಇಂಥ ದಿನ ಇತ್ತು ಅಂತ ತೋರಿಸುವುದು ಮುಖ್ಯ ಎಂದರು.
ಪ್ರಜಾಪ್ರಭುತ್ವದ ಮಹತ್ವ ತಿಳಿಯಬೇಕು
ಆಗಿನ ಯುವಕರು ದೇಶಕ್ಕಾಗಿ ಏನು ಮಾಡ್ತೀಯಾ ಅಂದರೆ ಪ್ರಾಣ ಕೊಡ್ತೀನಿ ಅಂತಿದ್ರು. ಆದರೆ ಈಗ ಕೇಳಿದ್ರೆ ದೇಶ ಕಟ್ಟಬೇಕು, ದೇಶಕ್ಕಾಗಿ ಬದುಕ್ತೀನಿ ಅನ್ನೋ ರೀತಿ ಇರಬೇಕು. ಪ್ರಜಾಪ್ರಭುತ್ವದ ಮಹತ್ವ ತಿಳಿಯಬೇಕು ಅಂದರೆ ಇವರನ್ನು ನೋಡಬೇಕು. ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಬ್ರಿಟನ್‍ನಲ್ಲಿ ಲಿಖಿತ ಸಂವಿಧಾನವಿಲ್ಲ. ನಮ್ಮ ಸಂವಿಧಾನ ಬದಲಾದ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳುವ ಸಂವಿಧಾನವಾಗಿದೆ. ಎಲ್ಲರ ರಕ್ಷಣೆ, ಎಲ್ಲರ ಸ್ವಾಭಿಮಾನ ರಕ್ಷಣೆ ಅದರಲ್ಲಿ ಇದೆ ಎಂದು ಹೆಮ್ಮೆ ಪಟ್ಟರು.
ಪ್ರಜಾಪ್ರಭುತ್ವ ಉಳಿಸಬೇಕು ಅಂದರೆ ಅದರ ಹಾಗುಹೋಗುವಿನಲ್ಲಿ ಭಾಗಿಯಾಗಬೇಕು. ಅನೇಕ ಬದಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಆದರೆ ಅವರ ಮೇಲೆಯೇ ಅನೇಕರು ಆರೋಪಗಳನ್ನು ಮಾಡುತ್ತಿದ್ದಾರೆ. 32% ಆದಾಯವನ್ನು 42% ಬರುವಂತೆ ಮಾಡಿದ್ರು ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ
ಟೀಕೆ ಮಾಡ್ತಾರೆ, ಮಾಡಲಿ
ಸ್ವಚ್ಛ ಭಾರತ ಮಾಡಿದ್ದು ನರೇಂದ್ರ ಮೋದಿಯವರು. ನೇರವಾಗಿ ಖಾತೆಗೆ ಹಣ ಹಾಕುವ ವ್ಯವಸ್ಥೆ ಮಾಡಿದ್ದು ಮೋದಿ. ಮನೆ ಮನೆಗೆ ನೀರು ಕೊಡುವ ಯೋಜನೆ ಮಾಡಿದ್ದು ಮೋದಿ. ಆದರೆ ಅವರನ್ನೇ ಟೀಕೆ ಮಾಡ್ತಾರೆ, ಮಾಡಲಿ. ಯುವಕರೇ ಜೀವನ ನಿರ್ಮಿಸಿಕೊಳ್ಳಿ, ತರಬೇತಿ ತೆಗೆದುಕೊಳ್ಳಿ ಅಂದರೆ ಅದಕ್ಕೂ ಟೀಕೆ. ಆದರೆ ಒಂದೊಳ್ಳೆ ಯೋಜನೆ ಮಾಡಬೇಕಾದ್ರೆ ಹೀಗೆಲ್ಲಾ ಆಗುತ್ತದೆ ಎಂದು ವಿವರಿಸಿದರು.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸಿನಿಮಾ ಟ್ರೈಲರ್ ಇದ್ದಂಗೆ. ಅಮೆರಿಕಾದಲ್ಲೂ ಪ್ರಜಾಪ್ರಭುತ್ವ ಈಗ ಅಲ್ಲಾಡುತ್ತಿದೆ. ಭಾರತ ಒಂದೇ ಪ್ರಬಲ ಪ್ರಜಾಪ್ರಭುತ್ವ ಇಟ್ಟುಕೊಂಡು ಮುಂದೆ ಸಾಗುತ್ತಾ ಇರೋದು. ಇದು ನಮ್ಮ ನಾಯಕತ್ವ, ನರೇಂದ್ರ ಮೋದಿ ಅವರ ನಾಯಕತ್ವ ಎಂದು ಸಂತೋಷ ವ್ಯಕ್ತಪಡಿಸಿದರು.