ಬೆಂಗಳೂರು: ರೈತರ ಭಾವನೆಗಳಿಗೆ ಬೆಲೆ ಕೊಟ್ಟಿದ್ದು, ಇದಕ್ಕೂ ಪಂಚರಾಜ್ಯ ಚುನಾವಣೆಗಳಿಗೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೃಷಿ ಕಾಯ್ದೆ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯುಪಿಎ ಅವಧಿಯಲ್ಲಿ ಜಾಗತೀಕರಣ, ಉದಾರೀಕರಣ ಆದ ಮೇಲೆ ಹೊಸ ಕಾಯ್ದೆ ಬಂದಿವೆ. ಯುಪಿಎ ಸರ್ಕಾರದಲ್ಲಿ ಕರಡು ಇತ್ತು. ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು ಜಾರಿ ಮಾಡಲಾಗಿತ್ತು. ಪಂಜಾಬ್, ಹರಿಯಾಣದ ರೈತರು ವಿರೋಧ ಮಾಡಿದ್ರು. ಪ್ರಧಾನಿಗಳು ಈಗ ಕಾಯ್ದೆ ವಾಪಸ್ ಪಡೆಯುತ್ತೇವೆ ಅಂತ ಹೇಳಿದ್ದಾರೆ. ಇದು ಸ್ಪಂದನಾಶೀಲ ಸರ್ಕಾರ ಇದು. ಹೀಗಾಗಿ ರೈತರ ಭಾವನೆಗೆ ಬೆಲೆ ಕೊಟ್ಟಿದ್ದೇವೆ. ಇದಕ್ಕೂ ಪಂಚರಾಜ್ಯ ಚುನಾವಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಆ ಮೂರು ವಿವಾದಿತ ಕೃಷಿ ಕಾಯ್ದೆ ಯಾವುದು?- ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದೇಗೆ?
Advertisement
Advertisement
ದೇಶದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದೆ. ಹೀಗಾಗಿ ಚುನಾವಣೆ ದೃಷ್ಟಿಯಿಂದ ಪ್ರಧಾನಿಗಳು ಈ ನಿರ್ಧಾರ ಮಾಡಿಲ್ಲ. ರೈತರಿಗೆ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿಯವರು ಮಾಡಿದರು. ಆದರೆ ಅದು ಹೋರಾಟ ಮಾಡೋರಿಗೆ ಅರ್ಥ ಆಗಿರಲಿಲ್ಲ. ಹೀಗಾಗಿ ವಿಶ್ವಾಸ ಬರಬೇಕು ಅನ್ನೋ ದೃಷ್ಟಿಯಿಂದ ಈ ಕಾಯ್ದೆ ವಾಪಸ್ ಪಡೆದಿದ್ದಾರೆ ಎಂದರು.
Advertisement
ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆ ವಾಪಸ್ ಪಡೆಯೋದಾಗಿ ಪಿಎಂ ಹೇಳಿದ್ದಾರೆ. ಮೋದಿ ಸರ್ಕಾರ ಸ್ಪಂದನಶೀಲ ಸರ್ಕಾರವಾಗಿದ್ದು, ಹೀಗಾಗಿ ರೈತರ ಮಾತಿಗೆ ಬೆಲೆ ಕೊಟ್ಟಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ