ಬೆಂಗಳೂರು: ಸಿಎಂ ಬದಲಾವಣೆ ವಿಚಾರವೆಲ್ಲಾ, ಕಾಂಗ್ರೆಸ್ಸಿಗರ ಕುತಂತ್ರ. ನಾನು ಸ್ಥಿತ ಪ್ರಜ್ಞನಾಗಿದ್ದೇನೆ ಅಂತ ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಸಿಎಂ ಬದಲಾವಣೆ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.
ಕೋವಿಡ್‍ನಿಂದ ಗುಣಮುಖರಾದ ಬಳಿಕ ಇಂದು ನಿತ್ಯದ ಆಡಳಿತ ಕೆಲಸಗಳನ್ನ ಪ್ರಾರಂಭ ಮಾಡಿದ ಬೊಮ್ಮಾಯಿ ಅವರು, ಸಿಎಂ ಬದಲಾವಣೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೊನೆಗೂ ಮೌನ ಮುರಿದಿದ್ದಾರೆ. ಇದನ್ನೂ ಓದಿ: ನೈಟ್ ಕ್ಲಬ್ನಲ್ಲಿ ಯುವತಿಗೆಯೊಂದಿಗೆ ಅಸಭ್ಯ ವರ್ತನೆ – ಪ್ರಶ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಬೌನ್ಸರ್ಸ್ !
Advertisement
Advertisement
ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಟ್ವೀಟ್ ಮತ್ತು ನಾಯಕರ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬದಲಾವಣೆ ಅಂತ ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಅನೇಕ ಬಾರಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅವರ ಮನಸ್ಸಿನಲ್ಲಿ ಅತಂತ್ರ ಇದೆ. ಅದನ್ನು ರಾಜ್ಯದ ಜನತೆಗೆ ಹರಡುತ್ತಿದ್ದಾರೆ. ಆದರೆ ರಾಜ್ಯದ ಜನ ಅವರ ಮಾತು ನಂಬುವುದಿಲ್ಲ. ನಂಬುವ ಸ್ಥಿತಿಯಲ್ಲಿ ಜನರಿಲ್ಲ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಮೆಸ್ ಊಟ ಚೆನ್ನಾಗಿಲ್ಲ- ರಸ್ತೆಯಲ್ಲಿ ಊಟದ ತಟ್ಟೆ ಹಿಡಿದು ಅತ್ತ ಕಾನ್‍ಸ್ಟೇಬಲ್
Advertisement
ನಾನು ಸ್ಥಿತ ಪ್ರಜ್ಞಾನಾಗಿದ್ದೇನೆ. ಸತ್ಯ ಏನು ಅಂತ ನನಗೆ ಗೊತ್ತಿದೆ. ಕಾಂಗ್ರೆಸ್‍ನ ಯಾವುದೇ ಮಾತಿಗೆ ಆಧಾರವಿಲ್ಲ. ಇವೆಲ್ಲ ರಾಜಕೀಯ ಪ್ರೇರಿತವಾದದ್ದು. ಕಾಂಗ್ರೆಸ್ ನವರ ಇಂತಹ ಹೇಳಿಕೆಗೆ ನಾನು ವಿಚಲಿತನಾಗುವುದಿಲ್ಲ. ನಾನು ಸ್ಥಿತ ಪ್ರಜ್ಞನಾಗಿದ್ದೇನೆ. ಇದರಿಂದ ನನ್ನ ನಿರ್ಣಯ ಇನ್ನಷ್ಟು ಗಟ್ಟಿಯಾಗಲಿವೆ. ಇನ್ನು ಮುಂದೆ ಮತ್ತಷ್ಟು ಹೆಚ್ಚಿನ ಕೆಲಸ ಮಾಡುತ್ತೇನೆ. ಇನ್ನು ಎರಡು ಗಂಟೆ ಹೆಚ್ಚು ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
Advertisement
ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಮತ್ತು ಜನರ ಬಳಿ ಹೋಗುವ ಕೆಲಸ ದೊಡ್ಡ ಪ್ರಮಾಣದಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇನ್ನು ಮಾಜಿ ಶಾಸಕ ಸುರೇಶ್ ಗೌಡರ ಸಿಎಂ ಬದಲಾವಣೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.