ಸವದಿ ಬಿಜೆಪಿ ತೊರೆದ ವಿಚಾರ ತೀವ್ರ ದುಃಖ ತಂದಿದೆ: ಸಿಎಂ

Public TV
1 Min Read
Basavaraj Bommai 6

ಬೆಂಗಳೂರು: ಲಕ್ಷ್ಮಣ ಸವದಿ (Laxman Savadi) ಬಿಜೆಪಿ (BJP) ತೊರೆದ ವಿಚಾರದಿಂದ ಬಹಳ ದುಃಖ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವದಿ ಪಕ್ಷ ತೊರೆದು ಹೋಗಬೇಕು ಎಂದು ನಿರ್ಧಾರ ಮಾಡಿದ್ದಾರೆ, ಹೋಗಲಿ. ಅವರಿಗೆ ಕಾಂಗ್ರೆಸ್‍ನಲ್ಲಿ (Congress) ರಾಜಕೀಯ ಭವಿಷ್ಯ ಕಾಣಿಸುತ್ತಿರಬಹುದು. ಬಿಜೆಪಿ ಮೂರನೇ ಪಟ್ಟಿ ಶೀಘ್ರದಲ್ಲಿ ಬಿಡುಗಡೆ ಆಗಲು ತಯಾರಿ ನಡೆದಿತ್ತು. ಆದರೆ ಅವರು ಗುರುವಾರವೇ ರಾಜೀನಾಮೆ ಘೋಷಣೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗುವ ವಿಶ್ವಾಸವಿದೆ- ಪ್ರಹ್ಲಾದ್ ಜೋಶಿ

ಕಾಂಗ್ರೆಸ್‍ನಲ್ಲಿ 60 ಸೀಟು ಗೆಲ್ಲಲು ಗತಿ ಇಲ್ಲ. ಅದಕ್ಕಾಗಿಯೇ ಬೇರೆ ಪಕ್ಷಗಳಿಂದ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಆಡಳಿತ ಪಕ್ಷದಲ್ಲಿ ಸಹಜವಾಗಿ ಟಿಕೆಟ್ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಕೆಲವರು ಶಾಸಕರಾಗಲೇ ಬೇಕು ಎಂದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಯಾರೇ ತೊರೆದರೂ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ ಭರವಸೆ ಮಾತುಗಳನ್ನಾಡಿದ್ದಾರೆ.

ಶನಿವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಏ.17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಸುತ್ತೇನೆ: ಲಕ್ಷ್ಮಣ ಸವದಿ

Share This Article