– ಸಿಎಂ ಬೆನ್ನು ತಟ್ಟಿ ನಗು ಸೂಸಿದ ಸಿದ್ದರಾಮಯ್ಯ
ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣವು (Belagavi Airport) ಬುಧವಾರ ಅಪರೂಪದ ರಾಜಕೀಯ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು. ರಾಜ್ಯದ ಮಾಜಿ ಸಿಎಂ ಹಾಗೂ ಹಾಲಿ ಸಿಎಂಗಳಿಬ್ಬರು ಪರಸ್ಪರ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಅವರು ಬೇರ‍್ಯಾರೂ ಅಲ್ಲ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai).
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈ ಇಬ್ಬರೂ ನಾಯಕರು ಆಕಸ್ಮಿಕವಾಗಿ ಭೇಟಿಯಾದರು. ಈ ವೇಳೆ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರ ಕೈ ಕುಲುಕಿ ಕುಶಲೋಪರಿ ವಿಚಾರಿಸಿದರು. ಇಬ್ಬರೂ ಕೆಲ ಹೊತ್ತು ಮಾತನಾಡಿದರು. ಇದನ್ನೂ ಓದಿ: ರಕ್ತದಲ್ಲಿ ಬರೆದು ಕೊಡ್ತೀನಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ – ಡಿಕೆಶಿ
ಈ ವೇಳೆ ಸಿದ್ದರಾಮಯ್ಯ ಅವರು ನಗುತ್ತಲೇ ಸಲುಗೆಯಿಂದ ಬೊಮ್ಮಾಯಿ ಅವರ ಬೆನ್ನು ತಟ್ಟಿದರು. ನಂತರ ಇಬ್ಬರೂ ಒಟ್ಟಿಗೆ ಸ್ವಲ್ಪ ದೂರು ಸಾಗಿದರು. ನಾಯಕರಲ್ಲಿ ರಾಜಕೀಯ ಹಾಗೂ ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಸಹಜ. ಕೆಲವೊಮ್ಮೆ ಒಬ್ಬರನ್ನೊಬ್ಬರು ಟೀಕಿಸಿ ವಾಗ್ದಾಳಿ ನಡೆಸುವುದೂ ಸಾಮಾನ್ಯ. ಆದರೆ ವೈಯಕ್ತಿಕವಾಗಿ ರಾಜಕೀಯ ನಾಯಕರು ನಡೆದುಕೊಳ್ಳುವ ರೀತಿ ಗಮನ ಸೆಳೆಯುವಂತಿರುತ್ತದೆ.