ಚಿಕ್ಕಬಳ್ಳಾಪುರ: ಸಿಎಂ ನೋಡಲು ಡೀಸೆಂಟ್ ಆದರೆ, ನಿರ್ಣಯಗಳು ತುಂಬಾ ಸ್ಟ್ರಾಂಗ್ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ವಿರೋಧ ಪಕ್ಷಗಳಿಗೆ ತಿರುಗೇಟು ಕೊಟ್ಟರು.
ಪ್ರವೀಣ್ ಹತ್ಯೆ ಮತ್ತು ಮಂಗಳೂರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳು ನೋವು ತಂದಿವೆ. ಅಶಾಂತಿ ಉಂಟು ಮಾಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್
Advertisement
Advertisement
ಕ್ರಮ ಎಷ್ಟು ತ್ವರಿತವಾಗಿ ಆಗಲಿದೆ ಎಂದು ರಾಜ್ಯದ ಜನ ನೋಡ್ತಾರೆ. ಮಂಗಳೂರಿಗೆ ಹೋಗಿ ಸೂಚನೆಗಳನ್ನ ಕೊಟ್ಟು ಸಿಎಂ ಬೊಮ್ಮಾಯಿ ಬಂದಿದ್ದಾರೆ. ಒಂದೆರೆಡು ದಿನದಲ್ಲಿ ಎಲ್ಲವೂ ಕೂಡ ಹೊರಗೆ ಬರಲಿದೆ. ಇದು ಪುನಾರಾವರ್ತನೆ ಆಗದಂತೆ ವಿಶೇಷ ತಂಡ ರಚನೆ ಮಾಡಲು ಚರ್ಚೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
Advertisement
Advertisement
22 ಜನರನ್ನ ಬಸವರಾಜ ಬೊಮ್ಮಾಯಿ ಅವರು ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ಸಿಎಂ ಬಹಳ ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿ. ನೋಡಲು ಸುಮ್ಮನೆ ಡಿಸೇಂಟ್ ಆಗಿದ್ದಾರೆ. ಆದರೆ ಅವರ ನಿರ್ಣಯಗಳು ತುಂಬಾ ಸ್ಟ್ರಾಂಗ್. ಸಿಎಂ ಆದವರು ಜೋರು ಮಾತನಾಡೋದಲ್ಲ, ವಿರೋಧ ಪಕ್ಷದ ನಾಯಕರು ಜೋರು ಮಾಡೋದಲ್ಲ. ಅವೇಷದಿಂದ ಮಾತಾಡಿದ್ರೆ ಏನೂ ಆಗಲ್ಲ. ಸಿಎಂ ಏನು ಮಾಡ್ತಾರೆ ಕಾದು ನೋಡಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸಿದ್ದು ಮೂಸೆ ವಾಲಾ ಮುಖವನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ತಂದೆ
ವಿಶೇಷ ಕಮಾಂಡೋ ಪಡೆ ರಚನೆ ಮಾಡಲು ಸಿಎಂ ತೀರ್ಮಾನ ಮಾಡಿದ್ದಾರೆ. ಯಾವುದೇ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ಶಾಂತಿ ಕಾಪಾಡಿ, ರಾಜ್ಯ ಸರ್ಕಾರ ಮೂಲಭೂತವಾದ ಸಂಘಟನೆಗಳ ಹೆಡೆಮುರಿ ಕಟ್ಟಲಿದೆ. ಫಾಝಿಲ್ ಕೊಲೆಗೆ ಕಾರಣ ಏನು ಎಂಬುದು ಕಾದು ನೋಡೋಣ ತನಿಖೆ ಆಗಲಿ. ಇನ್ನೂ ಪ್ರವೀಣ್ ಹತ್ಯೆ ನಂತರ ಬಿಜೆಪಿಯ ಕೆಲವು ಕಾರ್ಯಕರ್ತರು ಭಾವನಾತ್ಮಕವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಆದ್ರೆ ಅವರಿಗೆ ಗೊತ್ತಿದೆ ಬಿಜೆಪಿ ಪಕ್ಷ ಕಾರ್ಯಕರ್ತರ ಪರವಾಗಿದೆ ಎಂದು ವಿವರಿಸಿದರು.