ಬೆಂಗಳೂರು: ಭಾರತೀಯ ಬಳಕೆದಾರರು ಖಾಸಗಿತನದ ಬಗ್ಗೆ, ಡೇಟ ಸುರಕ್ಷತೆಯ ಬಗ್ಗೆ ಚರ್ಚಿಸುತ್ತಲಿರುವಾಗ ಹಾಗೂ ಇವುಗಳಿಗೆ ಸ್ವದೇಶದಲ್ಲೇ ಪರ್ಯಾಯವನ್ನು ಅರಸುತ್ತಿರುವ ಸಂದರ್ಭದಲ್ಲಿ, ಸಿಎಂ ಬಸವರಾಜ ಬೊಮ್ಮಾಯಿಯವರು (Basavaraj Bommai) ಜಾಗತಿಕ ಆಧ್ಯಾತ್ಮಿಕ ನಾಯಕರಾದ ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ (Ravishankar Guruji) ಅವರ ಉಪಸ್ಥಿತಿಯಲ್ಲಿ ಪ್ರಸಿದ್ಧ ಸಾಮಾಜಿಕ ಮಾಧ್ಯಮದ ಆ್ಯಪ್ ಎಲಿಮೆಂಟ್ಸ್‌ನ (Elements App) ಕನ್ನಡದ ಆವರ್ತನವನ್ನು ಬಿಡುಗಡೆ ಮಾಡಿದರು.
ಎಲಿಮೆಂಟ್ಸ್ ಆ್ಯಪ್‌ನ ಕನ್ನಡದ ಆವರ್ತನ ಬಿಡುಗಡೆಯೊಂದಿದೆ ರಾಷ್ಟ್ರೀಯ ಮಟ್ಟದ ಮಾನಸಿಕ ಆರೋಗ್ಯದ ಯೋಜನೆಯನ್ನೂ ಸಹ ಉದ್ಘಾಟಿಸಲಾಯಿತು. ನಗರದ ಹಾಗೂ ಪಟ್ಟಣಗಳಲ್ಲಿ ವಾಸ ಮಾಡುತ್ತಿರುವ ಯುವಕರಿಗೆ ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಿ, ಅವರ ಉತ್ತಮ ಆರೋಗ್ಯಕ್ಕಾಗಿ ಧ್ಯಾನವನ್ನು ಒಂದು ಸಾಧನವಾಗಿ ಅವರನ್ನು ಸಬಲೀಕರಣಗೊಳಿಸುವುದೇ ಈ ಯೋಜನೆಯ ಗುರಿಯಾಗಿದೆ.
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ನಮ್ಮ ಬಳಿಯಿರುವುದು ನಾಗರಿಕತೆ ಮತ್ತು ನಾವೇನು ಆಗಿರುವೆವೋ ಅದು ಸಂಸ್ಕೃತಿ. ಸಾಮಾನ್ಯವಾಗಿ ನಾವೆಲ್ಲರೂ ಯಾಂತ್ರಿಕವಾಗಿ ಜೀವಿಸುವುದಕ್ಕೆ ಒಗ್ಗಿ ಹೋಗಿದ್ದೇವೆ. ರವಿಶಂಕರ್ ಅವರು ಆರ್ಟ್ ಆಫ್ ಲಿವಿಂಗ್‌ನ ಮೂಲಕ ಜೀವನದ ಮೂಲಭೂತ ತತ್ವಗಳನ್ನು ಬೋಧಿಸುತ್ತಿದ್ದಾರೆ. ಮುಗ್ಧರಾದ ಇವರು, ಜಗತ್ತಿನ 154 ದೇಶಗಳಲ್ಲೂ ಭಕ್ತರನ್ನು ಹೊಂದಿದ್ದಾರೆ. ಇದಕ್ಕೆ ಕಾರಣ, ಆರ್ಟ್ ಆಫ್ ಲಿವಿಂಗ್‌ನ ಭಾಷೆ ವೈಶ್ವಿಕವಾದದ್ದು, ನಿಯಮರಹಿತ ಪ್ರೇಮದ ಭಾಷೆಯಾಗಿರುವುದು ಎಂದರು. ಇದನ್ನೂ ಓದಿ: ಎಷ್ಟು ದಿನ ಪ್ರಧಾನಿ ಹುದ್ದೆಯಲ್ಲಿರ್ತಾರೆ? – ಸುನಾಕ್ ಬಗ್ಗೆ ಬ್ರಿಟನ್ ಪತ್ರಿಕೆಗಳ ಅಸಮಾಧಾನ
Advertisement
Advertisement
ನಿಜವಾದ ಭಕ್ತರು ಸುಲಭವಾಗಿ ಆರ್ಟ್ ಆಫ್ ಲಿವಿಂಗ್ ಅನ್ನು ಅರ್ಥಮಾಡಿಕೊಳ್ಳಬಹುದು. ಮಾನವರು ತಮ್ಮ ಎಲ್ಲಾ ಗುರುತುಗಳನ್ನೂ, ಪದವಿಗಳ ಬಯಕೆಯನ್ನೂ ತ್ಯಜಿಸಿ, ದೈವದೊಡನೆ ಮಿಳಿತವಾಗುವ ಬದಲಿಗೆ, ಇನ್ನೂ ಹೆಚ್ಚು ಗುರುತುಗಳನ್ನು, ಪಟ್ಟಿಗಳನ್ನು ಪಡೆದುಕೊಳ್ಳುವ ಸಲುವಾಗಿ ಓಡುತ್ತಿದ್ದಾರೆ ಎಂದರು.
ಈ ವೇಳೆ ಉಪಸ್ಥಿತರಾಗಿದ್ದ ರಾಕ್ ಲೈನ್ ವೆಂಕಟೇಶ್ ಅವರು, ಭಾರತದಲ್ಲೇ ತಯಾರಾದ ಸಾಮಾಜಿಕ ಮಾಧ್ಯಮದ ಎಲಿಮೆಂಟ್ಸ್ ಆ್ಯಪ್ ಬಹಳ ಹೆಮ್ಮೆಯ ವಿಷಯ. ಎಲಿಮೆಂಟ್ಸ್ ಚಾಟ್ ಹಾಗೂ ಕರೆಗಳಿಗಾಗಿ ಮಾಡಲಾದ ಆ್ಯಪ್. ಜಗತ್ತಿಗಾಗಿ ಭಾರತದಲ್ಲಿ ಮಾಡಲಾಗಿದೆ. ಇದರ ಅತೀ ಉತ್ತಮವಾದ ಅಂಶವೆಂದರೆ, ನಿಮ್ಮ ಡೇಟಾ ಭಾರತದಲ್ಲೇ ಉಳಿಯುತ್ತದೆ ಮತ್ತು ಅದನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದೀಗ ಮೊಟ್ಟಮೊದಲ ಬಾರಿಗೆ ಇದು ಕನ್ನಡದಲ್ಲಿ ಲಭ್ಯವಾಗಿದೆ. ಕನ್ನಡದ ಬಳಕೆದಾರರಿಗಾಗಿಯೇ ಸಂಪೂರ್ಣವಾಗಿ ಆಪ್ಟಿಮೈಸ್ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಂಪೇಗೌಡ ಕಂಚಿನ ಪ್ರತಿಮೆಗೆ ಪವಿತ್ರ ಮಣ್ಣು ಸಂಗ್ರಹ – ಅಭಿಯಾನಕ್ಕೆ ಮಂಗಳೂರಿನಲ್ಲಿ ಚಾಲನೆ
ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಸುರಕ್ಷಿತವಾಗಿ ಚಾಟ್ ಮಾಡಬಹುದು. 300 ಜನರನ್ನು ಒಳಗೊಂಡ ಚಾಟ್ ಗುಂಪುಗಳನ್ನು ಮಾಡಬಹುದು. ಹೆಚ್‌ಡಿ ಗುಣಮಟ್ಟದ ಆಡಿಯೋ/ವೀಡಿಯೊ ಕರೆಗಳು, ವಾಯ್ಸ್ ನೋಟ್ಸ್, ಜಿಫ್‌ಗಳನ್ನು ಮತ್ತು ಇತರ ಮೀಡಿಯಾ ಫೈಲ್ಸ್‌ಗಳನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಬಹುದು. ಈ ಆ್ಯಪ್ ಅನ್ನು ಸುಮಾರು 1,000 ಜನ ಐಟಿ ತಜ್ಞರು ಬೆಳೆಸಿದ್ದಾರೆ. ಭಾರತದ ಮಾಲೀಕತ್ವವನ್ನೇ ಹೊಂದಿ, ಭಾರತದಲ್ಲೇ ನಡೆಸಲಾಗುವ ಉದ್ದೇಶವನ್ನು ಹೊಂದಿದ್ದಾರೆ. ದೇಶದ ನುರಿತ ತಜ್ಞರು ಈ ಆ್ಯಪ್‌ನ ವಿನ್ಯಾಸಕರಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಹೇಳಿದರು.
ಎಲಿಮೆಂಟ್ಸ್ ಆ್ಯಪ್ ಯೋಜನೆಯ ಮುಖ್ಯಸ್ಥ ರಾಜೇಶ್ ಕೃಷ್ಣಮೂರ್ತಿ ಮಾತನಾಡಿ, ಭಾರತೀಯ ಸೈಬರ್ ಸ್ಪೇಸ್‌ನ ಸಾರ್ವಭೌಮತ್ವ ಅತೀ ಮುಖ್ಯ. ಬಳಕೆದಾರರ ಖಾಸಗಿತನವು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತಿರುವ ಈ ಸಮಯದಲ್ಲಿ, ಎಲ್ಲಾ ಡೇಟಾ ಭಾರತದಲ್ಲೇ ಉಳಿಯುವಂತೆ ಮಾಡಿದ್ದೇವೆ ಎಂದರು.
ರವಿಶಂಕರ್ ಗುರೂಜಿ ಅವರು ಹರ್ ಘರ್ ಧ್ಯಾನ್ ಯೋಜನೆಯನ್ನೂ ಉದ್ಘಾಟಿಸಿದರು. ಇದೊಂದು ಮಾನಸಿಕ ಆರೋಗ್ಯದ ಯೋಜನೆಯಾಗಿದ್ದು, ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕರು ಧ್ಯಾನದ ಮಾರ್ಗದರ್ಶಕರಾಗಿ, ಸಂಸ್ಥೆಗಳ ಪ್ರತಿನಿಧಿಗಳಾಗಿ ಆಸಕ್ತ ಸಾರ್ವಜನಿಕ ವ್ಯಕ್ತಿಗಳಾಗಿ, ನಗರದ ಜನತೆಯ ಬಳಿ, ವಿಶೇಷವಾಗಿ ಯುವಕರ ಬಳಿಗ ಧ್ಯಾನದ ದೂತರಾಗಿ ತಲುಪಲಿದ್ದಾರೆ. ಇದು ಜನ್ ಭಾಗೀಧಾರೀ ಮಾದರಿಯ ಭಾಗವಾಗಿದ್ದು, ಈ ಯೋಜನೆಯು ನಗರದ ಯುವಕರಿಗೆ ಉತ್ತಮ ಆರೋಗ್ಯ ದೊರಕುವಂತೆ ಅವರನ್ನು ಸಬಲೀಕರಿಸುತ್ತದೆ. ರಾಷ್ಟ್ರದ ಸುಭದ್ರ ಭವಿಷ್ಯವನ್ನೂ ಸೃಷ್ಟಿಸುತ್ತದೆ. ಈ ಯೋಜನೆಯನ್ನು ಅನೇಕ ಹಂತಗಳಲ್ಲಿ ಜಾರಿಗೆ ತರಲಾಗುತ್ತದೆ ಮತ್ತು ದೇಶದ ರಾಜಧಾನಿಯಿಂದ ಆರಂಭವಾಗಲಿದೆ. ಈ ಯೋಜನೆಯನ್ನು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯವು ಬೆಂಬಲಿಸುತ್ತಿದೆ ಮತ್ತು 2023ರ ಸ್ವಾತಂತ್ರ‍್ಯ ದಿನೋತ್ಸವದಂದು ಕೊನೆಗೊಳ್ಳಲಿದೆ ಎಂದರು.