ಚಿಕ್ಕಬಳ್ಳಾಪುರ: ಈ ಹಿಂದೆ ಪುಟ್ಟಪರ್ತಿಯಲ್ಲಿ ಸತ್ಯಸಾಯಿ ದರ್ಶನ ಪಡೆದು, ಪುಸ್ತಕವೊಂದನ್ನು ಓದಿದ್ದೆ. ಆಗಿನಿಂದ ನಾನು ಮಾಂಸಾಹಾರ ತಿನ್ನುವುದನ್ನು ಬಿಟ್ಟೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Advertisement
ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆ ಲೋಕಾರ್ಪಣೆ ಮಾಡಿ ಪ್ರೇಮಾಮೃತಂ ಮಹಲ್ ನಲ್ಲಿ ಮಾತನಾಡಿದ ಅವರು, ಅಧ್ಯಾತ್ಮಿಕ ಹಾಗೂ ಭಾವನಾತ್ಮಕ ನುಡಿಗಳನ್ನಾಡಿದ್ದಾರೆ. ನಾನು 1998 ರಲ್ಲಿ ವೈಟ್ ಫೀಲ್ಡ್ ನಲ್ಲಿ ಸತ್ಯಸಾಯಿ ದರ್ಶನ ಪಡಿದಿದ್ದೆ. ಆಗ ಭಕ್ತರೊಬ್ಬರು ಎರಡು ಗಂಟೆಗಳ ಕಾಲ ಪುಸ್ತಕ ಒದುತ್ತಿದ್ದರು. ನಾನು ಸಹ ಆ ಪುಸ್ತಕ ಒದಿದೆ. ಅದರಲ್ಲಿ ಮಾಂಸಾಹಾರ , ಸಸ್ಯಾಹಾರ ಹಾಗೂ ವೈಜ್ಞಾನಿಕತೆ, ಅಧ್ಯಾತ್ಮಿಕತೆ ಬರೆಯಲಾಗಿತ್ತು. ಆ ಪುಸ್ತಕವನ್ನು ಓದಿ, ಆಗಲೇ ನಾನು ಮಾಂಸಾಹಾರ ತ್ಯಜಿಸಿದೆ. ಅದರಲ್ಲಿ ಬಾಬಾರ ಸಂದೇಶವಿತ್ತು. ಹೀಗಾಗಿ ನಾನು ನಾನ್ ವೆಜ್ ಬಿಟ್ಟೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಸ್ಕಾನ್‍ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ
Advertisement
Advertisement
ನಮ್ಮ ತಾಯಿಗೆ ಆರೋಗ್ಯ ಸಮಸ್ಯೆ ಆದಾಗ ಸತ್ಯಸಾಯಿ ಬಾಬಾರನ್ನು ನೆನೆಸಿಕೊಂಡು ಪೂಜೆ ಮಾಡಿದ್ದೆ. ನಾನು ಹೋಟೆಲ್ ಇಂದ ಆಸ್ಪತ್ರೆಗೆ ಹೋಗೋಷ್ಟರಲ್ಲಿ ನಮ್ಮ ತಾಯಿ ಎದ್ದು ಕೂತಿದ್ದರು. ನಂಬಿಕೆ, ಭಕ್ತಿಯಲ್ಲಿ ದೈವತ್ವ ಇರುತ್ತದೆ. ಗುರುವಿನಲ್ಲಿ ನಾವು ಲೀನವಾಗಬೇಕು, ಕರಗಿ ಲೀನವಾದರೆ ದೈವತ್ವದ, ಗುರುವಿನ ರಕ್ಷಣೆ ನಮಗೆ ಸಿಗುತ್ತದೆ. ಇಲ್ಲಿಗೆ ಬಂದವರಿಗೆ ಸೇವಾ ಮನೋಭಾವ ಮೂಡುತ್ತದೆ. ಬಡವರಿಗೆ ಸಹಾಯ ಮಾಡುವುದು ಇದರ ಮೂಲ ಉದ್ದೇಶ. ಹೀಗಾಗಿ ನಾನು ಸಹ ಇಲ್ಲಿಗೆ ಬಂದು ಬಡವರಿಗೆ ಸಹಾಯ ಮಾಡುವುದನ್ನು ಕಲಿತು ಹೋಗುತ್ತಿದ್ದು, ರಾಜ್ಯದ ಜನರ ಸೇವೆ ಮಾಡುವಾಗ ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರದ ಬೆಂಬಲ: ಬೊಮ್ಮಾಯಿ
Advertisement
ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮಕ್ಕೆ ಬಂದರೆ ಭಗವಂತವನನ್ನು ಕಂಡ ಅನುಭವ ಆಗುತ್ತೆ. ದ್ವಾಪರ ಯುಗದಲ್ಲಿ ಒಂದೇ ಆತ್ಮ, ಭಗವಂತ ಎಲ್ಲ ಕಡೆ ಇದ್ದ, ಪರಮಾತ್ಮ ಏಕ ಆತ್ಮ ಒಂದೇ ಇತ್ತು. ದ್ವಾಪರ ಯುಗದಲ್ಲಿ ಅಮೃತ ವಾತಾವರಣದ ಘಳಿಗೆ ಇತ್ತು. ಅದನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದನ್ನ ಈಗ ನಾವು ಅನುಭವಿಸಲು ಸಾಧ್ಯವೂ ಇಲ್ಲ. ಅದರ ಬಗ್ಗೆ ನಾವು ಭಾವನೆ, ಊಹೆಗಳನ್ನು ಮಾತ್ರ ಇಟ್ಟುಕೊಳ್ಳಲು ಸಾಧ್ಯ. ಮುಂದೆ ತ್ರೇತಾಯಗದಲ್ಲಿ ಪರಮಾತ್ಮ ಹಾಗೂ ಆತ್ಮ ಆಯಿತು. ಪರಮಾತ್ಮನೇ ಬೇರೆ ಬೇರೆ ರೂಪಗಳ ತಾಳಿ ದರ್ಶನ ಕೊಟ್ಟ. ಆಗ ದೈವತ್ವ ದೇವರ ದರ್ಶನ ಆಯಿತು. ಈಗ ಕಲಿಯುಗ ಬಂದಿದೆ ಪರಮಾತ್ಮ, ಆತ್ಮದ ಜೊತೆಗೆ ಮನುಷ್ಯಾತ್ಮ ಸಹ ಇದೆ. ಮನುಷ್ಯಾತ್ಮನಿಗೆ ಸುಲಭವಾಗಿ ಏನೂ ಅರ್ಥ ಆಗುವುದಿಲ್ಲ. ಮನುಷ್ಯಾತ್ಮ ಆಸೆ, ಆಕಾಂಕ್ಷೆಗಳಿಂದ ಮುಳುಗಿದ್ದಾನೆ. ಕಲಿಯುಗದಲ್ಲಿ ಗುರುವಿನ ಮೂಲಕ ಪರಮಾತ್ಮ ಬಂದ. ಮನುಷ್ಯನಿಗೆ ತಿಳಿ ಹೇಳುವ ಶಕ್ತಿ ಪರಮಾತ್ಮನ ಪ್ರತಿನಿಧಿ ಗುರು. ಕಲಿಯುಗದಲ್ಲಿ ಸತ್ಯಸಾಯಿ ಗುರುವಾಗಿ ಬಂದಿದ್ದರು. ಅವರು ಇದ್ದ ಕಾಲದಲ್ಲಿ ನಾವೂ ಇದ್ದೆವು ಎನ್ನುವುದೇ ಪುಣ್ಯ ಎಂದು ಸತ್ಯ ಸಾಯಿಬಾಬಾರನ್ನ ನೆನೆಪಿಸಿಕೊಂಡರು.
ಸರ್ಕಾರದಿಂದ ಹಲವು ಆಸ್ಪತ್ರೆಗಳನ್ನು ಕಟ್ಟುತ್ತೇವೆ. ವೈದ್ಯರಿಗೆ ಲಕ್ಷಾಂತರ ಸಂಬಳ ಕೊಡುತ್ತೇವೆ. ಇತ್ತೀಚೆಗೆ 4 ಸಾವಿರ ವೈದ್ಯರ ನೇಮಕ ಮಾಡಿ ಕೆಲಸ ಕೊಟ್ಟಿದ್ದೇವೆ. ಆದರೆ ಕೆಲಸಕ್ಕೆ ಬಂದಿದ್ದು 2,500 ಮಂದಿ ವೈದ್ಯರು ಮಾತ್ರ. 1,500 ಮಂದಿ ವೈದ್ಯರು ಅಪಾಯಿಂಟ್ ಮೆಂಟ್ ಪಡೆದು ಕೆಲಸಕ್ಕೆ ಬರಲಿಲ್ಲ. ವಿದೇಶಗಳಿಂದ ಬಂದು ಇಲ್ಲಿ ವೈದ್ಯರು ಉಚಿತ ಸೇವೆ ಮಾಡುತ್ತಿದ್ದಾರೆ. ವಿದೇಶಗಳಲ್ಲಿನ ಪದವಿ ಬಿಟ್ಟು ಇಲ್ಲಿ ಸೇವೆ ಮಾಡಲು ಬಂದಿದ್ದಾರೆ. ಅವರ ಸೇವೆಗೆ ಯಾವ ಶಕ್ತಿ ಕಾರಣ ಎಂಬುದನ್ನು ಯೋಚನೆ ಮಾಡಬೇಕು. ಇದೆಲ್ಲವೂ ಸತ್ಯ ಸಾಯಿ ಬಾಬಾರ ಶಕ್ತಿ ಲೀಲೆ. ಈ ಶಕ್ತಿ ಎಲ್ಲ ಕಡೆ ಇರಬೇಕು. ಆಗ ಮಾತ್ರ ಈ ಕಲಿಯುಗ ಕನಿಷ್ಟ ತ್ರೇತಾಯುಗ ಆಗಲು ಸಾಧ್ಯ. ಇಲ್ಲದಿದ್ದರೆ ಕಲ್ಕಿ ಯುಗ ಬರುವ ಹೊತ್ತಿಗೆ ನಾವು ಸುವ್ಯವಸ್ಥೆಯಿಂದ ಅವ್ಯವಸ್ಥೆ ಕಡೆಗೆ ಹೋಗಲಿದ್ದೇವೆ ಎಂದರು.
ಮನುಷ್ಯನ ನೋವನ್ನು ಕಡಿಮೆ ಮಾಡುವ ಶಕ್ತಿ ವೈದ್ಯರಿಗಿದೆ. ಇಲ್ಲಿ ಅಂತರಾಷ್ಟ್ರೀಯ ಮೆಡಿಕಲ್ ಕಾಲೇಜು ಆಗಬೇಕು ಎಂಬುದು ಸದ್ಗುರು ಇಚ್ಛೆ. ನಾವು ಅದಕ್ಕೆ ಬೇಕಾದ ಎಲ್ಲ ಸಹಕಾರ ಕೊಡಲಿದ್ದೇವೆ. ಇದರಿಂದ ಬಡವರಿಗೆ ದೊಡ್ಡ ಸಹಾಯ ಆಗಲಿದೆ. ಇಲ್ಲಿ ಆರಂಭವಾಗುವ ಮೆಡಿಕಲ್ ಕಾಲೇಜಲ್ಲಿ ಕಲಿಯುವವರಿಗೂ ಬೇರೆ ಕಡೆ ಕಲಿಯುವವರೆಗೆ ವ್ಯತ್ಯಾಸ ಇರುತ್ತೆ. ಇಲ್ಲಿ ಕಲಿಯವವರಿಗೆ ಸೇವೆ, ಸಹಾಯ ಮನೋಭಾವ ಸಮಾಜಕ್ಕೆ ಕೊಡುಗೆ ಕೊಡುತ್ತಾರೆ. ಬೇರೆ ಕಾಲೇಜುಗಳಲ್ಲಿ ಕಲಿಯುವವರಿಗೆ ಪ್ರೋಫೆಷನಲ್ಸ್ ಆಗುತ್ತಾರೆ. ಹೀಗಾಗಿ ಮೆಡಿಕಲ್ ಕಾಲೇಜು ಕೆಲಸ ಇಲ್ಲಿ ಆಗಲಿ ಎಂದರು.