ಚಿಕ್ಕಬಳ್ಳಾಪುರ: ಅಲೆದಾಟ ಬೇಕಿಲ್ಲ. ಇಂದು, ನಾಳೆ ಎಂಬ ಸುತ್ತಾಟವಿಲ್ಲ. `ಕಂದಾಯ ದಾಖಲೆಗಳು ಮನೆ ಬಾಗಿಲಿಗೆ’ ಎಂಬ ಹೊಚ್ಚ ಹೊಸ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಇಂದು ಜಾರಿಗೆ ತಂದಿದೆ.
Advertisement
ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಿದರು. ಶನಿವಾರ ಗುಂಗಿರ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಎತ್ತಿನಗಾಡಿ ಮೂಲಕ ಆಗಮಿಸಿ, ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ
Advertisement
Advertisement
ಸಿಎಂ ಗ್ರಾಮದ ಹನುಮಪ್ಪ ಹಾಗೂ ದೊಡ್ಡಪ್ಪಯ್ಯನವರ ಮನೆ ಬಾಗಿಲಿಗೆ ತೆರಳಿ ಕಂದಾಯ ದಾಖಲೆ ಪತ್ರಗಳನ್ನು ವಿತರಿಸಿದರು. ಗ್ರಾಮದ ಅರಳಿಕಟ್ಟೆ ಮೇಲೆ ಕೂತು ಗ್ರಾಮಸ್ಥರ ಹಲವಾರು ಸಮಸ್ಯೆಗಳನ್ನು ಆಲಿಸಿದರು. ಸಿಎಂ ಬಸವರಾಜ ಬೊಮ್ಮಾಯಿಗೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸಾಥ್ ನೀಡಿ, ಗ್ರಾಮದ ಹೊರವಲಯದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಹೃದಯಸ್ಪರ್ಶಿ ಫೋಟೋ ಜೊತೆಗೆ ಭಗವಂತ ಮಾನ್‌ಗೆ ಶುಭಕೋರಿದ ಹರ್ಭಜನ್ ಸಿಂಗ್
Advertisement
ಕಂದಾಯ ದಾಖಲೆಗಳಾದ ಪಹಣಿ, ಆಟ್ಲಾಸ್ ಹಾಗೂ ಜಾತಿ ಆದಾಯ ಪ್ರಮಾಣ ಪತ್ರವನ್ನು ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದ ವತಿಯಿಂದಲೇ ಉಚಿತವಾಗಿ ವಿತರಣೆ ಮಾಡುವ ಮೂಲಕ ಸರ್ಕಾರಿ ಕಚೇರಿಗಳಿಗೆ ಜನ ಸಾಮಾನ್ಯರ ಅಲೆದಾಟ ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.