ಹಾವೇರಿ: ಪಬ್ಲಿಕ್ ಟಿವಿ ಸಂದರ್ಶನದ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದಂತೆ ಇಂದು ಶಿಗ್ಗಾಂವಿಯ ಅಜ್ಜಿ ಮನೆಗೆ ಜಿಲ್ಲಾಧಿಕಾರಿ ಸಂಜಯ್ ಶೇಟ್ಟೆಣ್ಣವರ್ ಭೇಟಿ ನೀಡಿ 3 ತಿಂಗಳಲ್ಲಿ ಅಜ್ಜಿಗೆ ಮನೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದ್ದಾರೆ.
Advertisement
ಶುಕ್ರವಾರ ನಡೆದ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಗ್ಗಾಂವಿಯ 70 ವರ್ಷದ ಅಜ್ಜಿ ಕಮಲಮ್ಮ ತಿಮ್ಮನಗೌಡರ ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಅಲ್ಲದೆ ಕಾರ್ಯಕ್ರಮದಲ್ಲೇ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣವರ್ ಅವರನ್ನು ಸಂಪರ್ಕಿಸಿ ಸಿಎಸ್‍ಆರ್ ಫಂಡ್ ಅಡಿಯಲ್ಲಿ ಕಮಲಮ್ಮನವರಿಗೆ ಮನೆ ಕಟ್ಟಿಸಿಕೊಡುವ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದರು. ಅದರಂತೆ ಇಂದು ಜಿಲ್ಲಾಧಿಕಾರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಂಚಿನಕೊಪ್ಪ ಗ್ರಾಮದ ಕಮಲಮ್ಮನವರ ಮನೆಗೆ ಭೇಟಿ ನೀಡಿ 3 ತಿಂಗಳಲ್ಲಿ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ
Advertisement
Advertisement
ಈ ಹಿಂದೆ ಸಿಎಂ ಭೇಟಿಯಾಗಲು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಂಚಿನಕೊಪ್ಪ ಗ್ರಾಮದ ವಯೋವೃದ್ಧೆ ಕಮಲಮ್ಮನವರು ಹೂಗುಚ್ಚ ಹಿಡಿದು ಪರದಾಡಿದ್ದರು. ಆದರೆ ಶುಕ್ರವಾರ ಮುಖ್ಯಮಂತ್ರಿಯವರು ಪಬ್ಲಿಕ್ ಟಿವಿ ಕಾರ್ಯಕ್ರಮದಲ್ಲಿ ಅಜ್ಜಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಇಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್, ಸಿಇಓ ಮಹಮ್ಮದ್ ರೋಷನ್ ಹಾಗೂ ಎಸಿ ಅನ್ನಪೂರ್ಣ ಮುದಕಮ್ಮನವರ ಭೇಟಿ ನೀಡಿ ಕಮಲಮ್ಮನವರ ಸಮಸ್ಯೆ ಆಲಿಸಿ, ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು. ಹ್ಯಾಬಿಟೈಟ್ ಕಂಪನಿಯ ಮೂಲಕ ಅಜ್ಜಿಗೆ ಹೊಸ ಮನೆ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ. ಎರಡ್ಮೂರು ತಿಂಗಳಲ್ಲಿನಲ್ಲಿ ಮನೆ ನಿರ್ಮಾಣ ಭರವಸೆಯನ್ನು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ನೀಡಿದ್ದಾರೆ.
Advertisement
ಮಕ್ಕಳು ತೀರಿಕೊಂಡರೂ ನಿಮ್ಮ ಇನ್ನೊಬ್ಬ ಮಗ ನಾನಿದ್ದೇನೆ. ನಾನು ನಿಮಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದರು. ಅದರಂತೆ ಇಂದು ಜಿಲ್ಲಾಧಿಕಾರಿಗಳು ಆಗಮಿಸಿ, ಮನೆ ಕಟ್ಟಿಸಿಕೊಡುತ್ತೇನೆಂದು ಭರವಸೆ ನೀಡಿದ್ದಾರೆ. ನನಗೆ ನಾಲ್ಕು ಮೊಮ್ಮಕ್ಕಳು ಇದ್ದಾರೆ. ಅವರ ಜವಾಬ್ದಾರಿ ನನ್ನ ಮೇಲಿದೆ. ಮನೆ ಕಟ್ಟಿಸಿಕೊಡುತ್ತಿರುವುದಕ್ಕೆ ಸಿಎಂಗೆ ಒಳ್ಳೆಯದಾಗಲಿ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಕಮಲಮ್ಮ ಭಾವುಕರಾದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣನವರ್, ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಸಿಎಂ ಅವರು ಕಮಲಮ್ಮ ಅವರ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಲು ಸೂಚಿಸಿದ್ದರು. ಇಂದು ಎಲ್ಲವೂ ಪರಿಶೀಲನೆ ನಡೆಸಿದ್ದೇವೆ. ಒಂದು ತಿಂಗಳಿನಲ್ಲಿ ಹೊಸ ಮನೆ ನಿರ್ಮಾಣ ಮಾಡಿ ಕೊಡುತ್ತೇವೆ. ಈಗಿನ ಮನೆ ಸಂಪೂರ್ಣ ದುರಸ್ಥಿಯಲ್ಲಿದೆ. ಹೀಗಾಗಿ, ಮನೆ ಬೀಳಿಸಿ, ಹೊಸ ಮನೆ ನಿರ್ಮಿಸುತ್ತೇವೆ. ಒಂದು ತಿಂಗಳ ಮಟ್ಟಿಗೆ ಬೇರೆ ವ್ಯವಸ್ಥೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.