ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸಲ್ಲಿ ಎ-1 ಆರೋಪಿಯಾಗಿದ್ದರೂ ಸಚಿವ ಕೆ.ಎಸ್ ಈಶ್ವರಪ್ಪ ತಲೆದಂಡಕ್ಕೆ ಮೀನಾಮೇಷ ಎಣಿಸುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
Advertisement
ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯಲು ಸಿಎಂ ಹಿಂದೇಟು ಹಾಕುತ್ತಿದ್ದು, ಹೈಕಮಾಂಡ್ ಸೂಚನೆ ಕೊಟ್ಟರೂ ಸಿಎಂ ಅವರು ಸಚಿವರ ತಲೆದಂಡಕ್ಕೆ ಮುಂದಾಗುತ್ತಿಲ್ಲ. ಬದಲಾಗಿ ಈಶ್ವರಪ್ಪ ಪರ ಸಮರ್ಥನೆಗೆ ಮುಂದಾಗುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವರದಿ ಬರಲಿ. ಆಮೇಲೆ ನೋಡೋಣ. ಪ್ರಾಥಮಿಕ ವರದಿ ಬರುವವರೆಗೂ ಯಾವುದೇ ಕ್ರಮವಿಲ್ಲ ಎಂದು ಸಿಎಂ ಹೆಳುವ ಮೂಲಕ ಈಶ್ವರಪ್ಪ ರಾಜೀನಾಮೆ ಸದ್ಯಕ್ಕಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. ಇದು ವಿರೋಧ ಪಕ್ಷದವರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಮಾತೆತ್ತಿದ್ದರೆ ಮೋದಿ, ಅಮಿತ್ ಶಾ ಖಡಕ್ ಅನ್ನೋರು ಈಗ ಎಲ್ಲೋದ್ರು? ಎ 1 ಆರೋಪಿ ಕ್ಯಾಬಿನೆಟ್ ನಲ್ಲಿ ಇದ್ದು ಸರ್ಕಾರ ನಡೆಸುವ ಪರಿ ಇದೇನಾ? ವಿರೋಧ ಪಕ್ಷದಲ್ಲಿದ್ದಾಗ ನೈತಿಕತೆ ಪ್ರಶ್ನೆ ಮಾಡುತ್ತಿದ್ದ ಬಿಜೆಪಿ ನೈತಿಕತೆ ಎಲ್ಲೋಯ್ತು?, ಕೇಸ್ ಸ್ಟಡೀಸ್ ಬಹಿರಂಗಗೊಳಿಸದೇ ಈ ಹಿಂದೆ 10% ಸರ್ಕಾರ ಎಂದವರ ಮೌನವೇಕೆ? ಈಗ 40% ಸರ್ಕಾರ್ ಆರೋಪಕ್ಕೆ ಸಂತೋಷ್ ಸಾವು ಕಣ್ಮುಂದೆ ಇಲ್ಲವಾ? ಆರೋಪಿ ಸ್ಥಾನದಲ್ಲಿರೋದು ಸರ್ಕಾರದಲ್ಲಿ ಹೇಗೆ ಇರುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ರಾಮನ ಭಜನೆ ಮಾಡೋರ ಹೃದಯ ಇಷ್ಟೊಂದು ಕಠೋರವಾಯ್ತಾ: ಲಕ್ಷ್ಮಿ ಹೆಬ್ಬಾಳ್ಕರ್
Advertisement
ಸಂತೋಷ್ ಆರೋಪ ಮಾಡಿದ್ರೂ ತನಿಖೆ ಕೊಡಲಿಲ್ಲ. ನಿಮ್ಮ ಸರ್ಕಾರದಲ್ಲಿ ವರ್ಕ್ ಆರ್ಡರ್ ಇಲ್ಲದೆ ಯಾರು ಬೇಕಾದ್ರೂ ಕೆಲಸ ಮಾಡಬಹುದಾ?, ವರ್ಕ್ ಆರ್ಡರ್ ಇಲ್ಲದೆ 100ಕ್ಕೂ ಹೆಚ್ಚು ಕಾಮಗಾರಿ ಮಾಡಲು ಹೇಗೆ ಬಿಟ್ಟಿದ್ದೀರಿ? ಅಷ್ಟೊಂದು ಕೆಲಸ ಮಾಡುತ್ತಿದ್ದಾಗ ಅಧಿಕಾರಿಗಳು, ಸಚಿವರ ಗಮನಕ್ಕೆ ಯಾಕೆ ಬರಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ. ಇದನ್ನೂ ಓದಿ: ಪ್ರಾಥಮಿಕ ತನಿಖೆ ಮುಗಿಯುವವರೆಗೆ ಈಶ್ವರಪ್ಪ ವಿರುದ್ಧ ಕ್ರಮವಿಲ್ಲ: ಸಿಎಂ
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಈಗ ಯಾರನ್ನ ಹೊಣೆ ಮಾಡುತ್ತೀರಿ? ಹಿರಿಯ ಸಚಿವ ಆರೋಪಿ ನಂಬರ್ 1, ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವೇ? ವಿರೋಧ ಪಕ್ಷದಲ್ಲಿದ್ದಾಗ ನೈತಿಕತೆ ಪ್ರಶ್ನೆ ಮಾಡುತ್ತಿದ್ದ ನಿಮಗೆ ಈಗ ನೈತಿಕತೆ ಇಲ್ಲವಾ? ಪ್ರಾಥಮಿಕ ತನಿಖೆ ಆಗುವ ತನಕ ಯಾವುದೇ ಕ್ರಮ ಇಲ್ಲ ಅಂತೀರಾ. ಇದೇನಾ ದಕ್ಷ ಆಡಳಿತನಾ ಎಂಬೆಲ್ಲ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.