ತುಮಕೂರು: ಪಟ್ಟಣದ ಗಾಜಿನ ಮನೆಯಲ್ಲಿಂದು ನಡೆಯುತ್ತಿರುವ ಭೋವಿ ಸಮಾಜದ ಜಾಗೃತಿ ಸಮಾವೇಶದಲ್ಲಿ ಚಿತ್ರದುರ್ಗ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ `ನಡೆದಾಡುವ ರಾಜದೇವರು’ ಎಂಬ ಬಿರುದನ್ನು ಪ್ರದಾನ ಮಾಡಿದ್ದಾರೆ.
Advertisement
ಸಮಾವೇಶದಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಬಸವರಾಜ ಬೊಮ್ಮಾಯಿ ಅವರನ್ನ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ- ಸಂತ್ರಸ್ತೆಯರ ಹೇಳಿಕೆ ಪಡೆದ ತನಿಖಾ ತಂಡ
Advertisement
ಮಂಜುನಾಥ್ ಪ್ರಸಾದ್ ಅವರನ್ನು ತಮ್ಮ ಪ್ರದಾನ ಕಾರ್ಯದರ್ಶಿ ಆಗಿ ಮಾಡಿದ್ದು, ಸಮಾಜಕ್ಕೆ ದೊಡ್ಡ ಗೌರವ. ಸಿಎಂಗೆ ಬೇರೆ-ಬೇರೆ ಅಧಿಕಾರಿಗಳನ್ನ ನೇಮಿಸಿಕೊಳ್ಳುವಂತೆ ಒತ್ತಡವಿತ್ತು. ಆದರೆ ಅವರು ಭೋವಿ ಜನಾಂಗಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
Advertisement
Advertisement
ಬೊಮ್ಮಾಯಿ ಅವರ ಮಾತು ಕೃತಿ ನಡೆ, ಕೋಪ ತಂದೆಯದ್ದು, ಅಷ್ಟೇ ಅಲ್ಲ ತಾಯಿ ಹೃದಯ, ವಾತ್ಸಲ್ಯ, ಮಿಡಿತ ಎಲ್ಲವೂ ಅವರಲ್ಲಿದೆ. ತಾಯಿ ತನ್ನ ಮಗುವನ್ನು ನೋಡಿಕೊಂಡಂತೆ ನಮ್ಮ ರಾಜ್ಯಕ್ಕೆ ಇಂತಹ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಇಂಥವರು ಸಿಕ್ಕಿರುವುದು ನಮ್ಮ ಹೆಮ್ಮೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ‘ಕೈ’ ನಾಯಕರು ಪಕ್ಷ ಬಿಟ್ಟು ಹೋಗಲು ನಾಯತ್ವದಲ್ಲಿರುವ ದುರಂಹಕಾರ ಕಾರಣ: ಪ್ರಹ್ಲಾದ್ ಜೋಶಿ
ಸಿಎಂ ಅತೀ ಸಣ್ಣ ಮಡಿವಾಳ ಸಮುದಾಯದವರನ್ನೂ ಗುರುತಿಸಿ ಸಹಾಯ ಮಾಡಿದ್ದಾರೆ. ಅಂಬೇಡ್ಕರರ ಸಂವಿಧಾನದ ಆಶಯದಂತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಲಿಂಗಾಯತ ಸಮುದಾಯದ ಅಧಿಕಾರಕ್ಕೆ ಬಂದರೆ ಬೇರೆ ಸಮುದಾದ ಜನ ಮಾತನಾಡಿಸೋದು ಕಷ್ಟ ಎಂದು ಹೇಳುತ್ತಾರೆ. ಆದರೆ ಬೊಮ್ಮಾಯಿ ಅವರಿಂದ ತಮ್ಮ ಸಮುದಾಯಕ್ಕಿಂತ ಬೇರೆ ಸಮುದಾಯದ ಜನರೇ ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.