– ತ್ಯಾಗದ ಹಿಂದೆ ಇದೆಯಾ ಪುತ್ರನ ಭವಿಷ್ಯದ ಆಲೋಚನೆ?
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಯಿ ಸಂಪುಟ ರಚನೆ ಕಸರತ್ತು ನಡೆದಿದ್ದು, ಬಿಜೆಪಿಯ 2.ಓ ಸರ್ಕಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸಚಿವರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪನವರು ರಾಜ್ಯಪಾಲ ಹುದ್ದೆಯನ್ನ ತಿರಸ್ಕರಿಸಿದ್ದಾರೆ. ಇತ್ತ ಹೈಕಮಾಂಡ್ ಆರ್‍ಎಸ್‍ಎಸ್ ಮುಖಂಡರ ಮೂಲಕವೂ ಯಡಿಯೂರಪ್ಪನವರ ಮನವೊಲಿಕೆಗೆ ಮುಂದಾಗಿತ್ತು ಎನ್ನಲಾಗಿದೆ. ಆದ್ರೆ ಯಡಿಯೂರಪ್ಪ ಮಾತ್ರ ರಾಜ್ಯದಲ್ಲಿದ್ದು, ಪಕ್ಷ ಸಂಘಟನೆಯನ್ನು ತೊಡಗಿಕೊಳ್ಳುವದಾಗಿ ಹೇಳುತ್ತಿರುವ ಹಿಂದಿನ ರಹಸ್ಯ ಇಲ್ಲಿದೆ.
Advertisement
Advertisement
‘ವಿಜಯ’ ಪ್ರಸ್ತಾಪ:
ಈಗಾಗಲೇ ಸಿಎಂ ಬೊಮ್ಮಾಯಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ನಾಯಕರ ಪಟ್ಟಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಇದೇ ಪಟ್ಟಿಯಲ್ಲಿ ಬಿಎಸ್‍ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಆಗಿರುವ ಬಿ.ವೈ.ವಿಜಯೇಂದ್ರ ಹೆಸರಿದೆ ಎನ್ನಲಾಗಿದೆ. ಬೊಮ್ಮಾಯಿ ಲಿಸ್ಟ್ ನಲ್ಲಿ ವಿಜಯೇಂದ್ರ ಹೆಸರು ಸೇರಿಸಿ ಯಡಿಯೂರಪ್ಪ ಮೌನವಾಗಿದ್ದರಿಂದ ಸಂಪುಟ ರಚನೆ ಕಗ್ಗಂಟಾಗಿದೆ ಎಂಬ ಚರ್ಚೆಗಳು ಕಮಲ ಪಾಳಯದಲ್ಲಿ ಆರಂಭಗೊಂಡಿವೆ. ಇದನ್ನೂ ಓದಿ: ಇನ್ಮೇಲೆ ನಾನು ಸೂಪರ್ ಸಿಎಂ ಅಲ್ಲ: ವಿಜಯೇಂದ್ರ
Advertisement
Advertisement
ಕೇಂದ್ರ ಸಂಪುಟದಲ್ಲಿಯೂ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸ್ಥಾನ ಸಿಗಲಿಲ್ಲ. ಹಾಗಾಗಿ ರಾಜ್ಯದಲ್ಲಿಯಾದ್ರೂ ಮತ್ತೊಬ್ಬ ಪುತ್ರನಿಗೆ ಸಚಿವ ಸ್ಥಾನ ಸಿಗಲಿ ಅನ್ನೋದು ಯಡಿಯೂರಪ್ಪನವರ ಲೆಕ್ಕಾಚಾರ ಎನ್ನಲಾಗ್ತಿದೆ. ಪುತ್ರರ ಭವಿಷ್ಯಕ್ಕಾಗಿಯೇ ರಾಜ್ಯಪಾಲ ಹುದ್ದೆಯನ್ನು ಯಡಿಯೂರಪ್ಪನವರು ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಇದನ್ನೂ ಓದಿ: ಯಾರಿಗೆ ಕೊಕ್ ನೀಡ್ತಾರೆ ಗೊತ್ತಿಲ್ಲ, ನಾನ್ ಮಾತ್ರ ಸಂಪುಟದಲ್ಲಿ ಇರ್ತೀನಿ: ಎಂಟಿಬಿ ನಾಗರಾಜ್
ಯಡಿಯೂರಪ್ಪ ಅವರ ಗೌರವದ ನಿರ್ಗಮನದ ಬಗ್ಗೆ ಮಾತಾಡುವ ಹೈಕಮಾಂಡ್ ಸಿಎಂ ಬೊಮ್ಮಾಯಿ ನೀಡಿದ ಪಟ್ಟಿಗೆ ಸಮ್ಮತಿ ನೀಡಬೇಕಾ ಅಥವಾ ಬೇಡ್ವಾ ಅನ್ನೋದರ ಬಗ್ಗೆ ಚರ್ಚೆ ನಡೆಸುತ್ತಿದೆ. ಬೊಮ್ಮಾಯಿ ಕೊಟ್ಟಿರುವ ಲಿಸ್ಟ್ ನಂತೆ ವಿಜಯೇಂದ್ರಗೂ ಮಣೆ ಹಾಕುತ್ತಾ ಅನ್ನೋದು ಇಂದು ಸಂಜೆ ರಿವೀಲ್ ಆಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಕಗ್ಗಂಟಾಗ್ತಿದೆ ಕ್ಯಾಬಿನೆಟ್ ಜೇನುಗೂಡು- ದೆಹಲಿ ಮಟ್ಟದಲ್ಲಿ ಹಿರಿಯ ನಾಯಕರ ಲಾಬಿ
CM Basavaraj Bommai Says High Command Will Decide On #Vijayendra's Inclusion In The Cabinethttps://t.co/HF2lPrKbTr#CMBommai #BasavarajBommai #BommaiCabinet #BJP #KarnatakaBJP #KarnatakaPolitics #KannadaNews #JPNadda #AmitShah #PMModi pic.twitter.com/NHBmgMwiwJ
— PublicTV (@publictvnews) August 2, 2021
ಯಾರಿಗೆ ಕೊಕ್ ಕೊಡುತ್ತೆ ಹೈಕಮಾಂಡ್?
2-3 ಬಾರಿ ಸಚಿವರಾದವರನ್ನು ಮತ್ತು ಇಲಾಖೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸದ ವೀಕ್ ರಿಪೋರ್ಟ್ ಕಾರ್ಡ್ ಹೊಂದಿರೋ ಯಡಿಯೂರಪ್ಪ ಟೀಂ ಮಂತ್ರಿಗಳಿಗೆ ಗೇಟ್ ಪಾಸ್ ಸಿಗುವ ಸಾಧ್ಯತೆಗಳಿವೆ. ಒಂದೇ ಜಿಲ್ಲೆಯಲ್ಲಿ 2 ಕ್ಕಿಂತ ಹೆಚ್ಚು ಸಚಿವರು ಇದ್ದರೆ ಅಲ್ಲಿಯೂ ಕತ್ತರಿ ಸಾಧ್ಯತೆ. ಸಚಿವ ಸ್ಥಾನದ ಜೊತೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರದ ಮಂತ್ರಿಗಳಿಗೆ ಮತ್ತು ವಿವಾದಗಳು, ಭ್ರಷ್ಟಾಚಾರ ಆರೋಪ ಹೊತ್ತವರಿಗೆ ಮಂತ್ರಿ ಸ್ಥಾನ ಸಿಗೋದು ಅನುಮಾನ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ – ಕ್ಯಾಬಿನೆಟ್ ಪಟ್ಟಿ ಫೈನಲ್‍ಗೆ ಕೌಂಟ್‍ಡೌನ್