ಬೆಂಗಳೂರು: ಅದೆಷ್ಟೇ ಬ್ಯುಸಿ ಶೆಡ್ಯೂಲ್ ಇರಲಿ ಅಥವಾ ಅದೇನೇ ಟೆನ್ಶನ್ ಇರಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತ್ರ ವಾಕಿಂಗ್ ಹೋಗೋದನ್ನು ಮಿಸ್ ಮಾಡೋದೇ ಇಲ್ಲ. ಬೆಳ್ಳಂಬೆಳಗೆ 7.30 ಅಥವಾ 8 ಗಂಟೆ ಸುಮಾರಿಗೆ ಸಿಎಂ ದವಳಗಿರಿ ನಿವಾಸದಿಂದ ಪಕ್ಕದ ಪಾರ್ಕ್ ನಲ್ಲಿ ಒಂದ್ ರೌಂಡ್ ಹೊಡೆಯುವ ಮೂಲಕವೇ ಅವರು ತಮ್ಮ ದಿನವನ್ನು ಆರಂಭಿಸುತ್ತಾರೆ.
ಈ ಹಿಂದೆ ಒಂದೆರಡು ದಿನ ಸಿಎಂ ಸೀಟಿನಲ್ಲಿ ಕೂತು ರಾಜೀನಾಮೆ ಕೊಟ್ರಲ್ಲ ಅಂದು ಕೂಡ ಸಿಎಂ ವಾಕಿಂಗ್ ಮಿಸ್ ಮಾಡಿಲ್ಲ. ಬಜೆಟ್ ಮಂಡನೆಯ ದಿನವೂ ಪಾರ್ಕಿಗೆ ಹೋಗಿ ಒಂದೆರಡು ರೌಂಡ್ ಹೊಡೆದು ರಿಲೀಫ್ ಆಗಿದ್ರು. ಮಂಡಿನೋವು ಶುಗರ್ ಇರೋದ್ರಿಂದ ವೈದ್ಯರ ಸೂಚನೆಯಂತೆ ನಿತ್ಯ ವಾಕಿಂಗ್ ಮಿಸ್ ಮಾಡಲ್ಲ.
Advertisement
Advertisement
ಆದರೆ ಇಂದು ಸಿಎಂ ಅದೆಷ್ಟರ ಮಟ್ಟಿಗೆ ಟೆನ್ಶನ್ ನಲ್ಲಿ ಇದ್ದರು ಅಂದ್ರೆ ವಾಕಿಂಗ್‍ಗೂ ಹೋಗದೇ ಟಿವಿ ಮುಂದೆ ಕುಂತುಬಿಟ್ಟಿದ್ದರು. ಉಪಚುನಾವಣೆ ಸಮರ ಏನಾಗುತ್ತೋ, ಎಲ್ಲಿ ತನ್ನ ಸಿಎಂ ಸೀಟಿಗೆ ಕುತ್ತು ಬರುತ್ತೋ ತನ್ನ ಅಧಿಕಾರ ಏನಾಗುತ್ತೋ ಅನ್ನುವ ಭೀತಿಗೆ ಉಸಿರು ಬಿಗಿ ಹಿಡಿದು ಸಿಎಂ ಬೆಳ್ಳಂಬೆಳಗ್ಗೆ ತನ್ನ ರೊಟೀನ್ ಲೈಫ್ ಗೆ ಬೈ ಬೈ ಹೇಳಿ ಟಿವಿ ಮುಂದೆ ಕುಳಿತು ಎಲೆಕ್ಷನ್ ರಿಸಲ್ಟ್ ವೀಕ್ಷಣೆ ಮಾಡಿದರು.