– 2021ರಲ್ಲಿ ಕರ್ನಾಟಕದಲ್ಲಿ 855 ವಿದ್ಯಾರ್ಥಿಗಳು ಆತ್ಮಹತ್ಯೆ – ಎನ್‌ಸಿಆರ್‌ಬಿ ವರದಿ ಪ್ರಸ್ತಾಪ
ಜೈಪುರ: ಕೋಟಾದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ (Students Suicide Case) ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot), ಸಾವುಗಳ ಪ್ರಮಾಣ ತಡೆಯಲು ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.
ಕೋಚಿಂಗ್ ಹಬ್‌ನಲ್ಲಿ (Coaching Hub) ಐಐಟಿ ಮತ್ತು ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ ಪ್ರಕರಣಗಳ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಾನು ಸಮಿತಿಯನ್ನ ರಚಿಸುವುದಾಗಿ ಘೋಷಿಸಿದ್ದೇನೆ. ಇದರಲ್ಲಿ ಅಧಿಕಾರಿಗಳು, ಪೋಷಕರು ಹಾಗೂ ಕೋಚಿಂಗ್ ಸಂಸ್ಥೆ ಪ್ರತಿನಿಧಿಸುವ ವ್ಯಕ್ತಿಗಳು ಇರಲಿದ್ದು, 15 ದಿನಗಳಲ್ಲಿ ತನ್ನ ವರದಿಯನ್ನ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.
Advertisement
Advertisement
9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ (SSLC Students) ಮೇಲೆಯೂ ಹೊರೆ ಹಾಕಲಾಗುತ್ತಿದೆ. ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳಿಗೆ ಸೇರಿಸುವ ಮೂಲಕ ಪೋಷಕರು ಅಪರಾಧ ಮಾಡುತ್ತಿದ್ದೀರಿ, ಬೋರ್ಡ್ ಪರೀಕ್ಷೆಗಳಲ್ಲಿ (Board Exams) ತೇರ್ಗಡೆಯಾಗುವ ಮತ್ತು ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವ ಹೊರೆಯನ್ನ ವಿದ್ಯಾರ್ಥಿಗಳು ಎದುರಿಸುತ್ತಾರೆ. ಇದು ಸುಧಾರಣೆಯ ಸಮಯ, ನಾವು ಯುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಲಾಗುವುದಿಲ್ಲ. ಒಂದು ಮಗುವಿನ ಸಾವು ಪೋಷಕರಿಗೆ ದೊಡ್ಡ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರದ ಎಲ್ಲ ಸಂಸ್ಥೆಗಳಲ್ಲೂ RSS ತನ್ನ ಜನರನ್ನಿರಿಸಿದೆ – ರಾಹುಲ್ ಗಾಂಧಿ ಆರೋಪ
Advertisement
Advertisement
ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ 22 ವಿದ್ಯಾರ್ಥಿಗಳು ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 15 ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣದ ರಾಜ್ಯ ಸಚಿವೆ ಜಾಹಿದಾ ಖಾನ್ ಅವರು ಕೋಚಿಂಗ್ ಸಂಸ್ಥೆಗಳು “ಹಣ ಮಾಡುವ ಯಂತ್ರ”ಗಳಾಗಿ ಬದಲಾಗಬಾರದು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ ಸ್ಪೋರ್ಟ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ- ಬಗೆಹರಿಸುವ ಭರವಸೆ ನೀಡಿದ ಸಂಸ್ಥೆ
ಸಭೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶಗಳ ಬಗ್ಗೆ ಚರ್ಚಿಸಲಾಯಿತು. ಎನ್‌ಸಿಆರ್‌ಬಿ ಪ್ರಕಾರ, 2021 ರಲ್ಲಿ ಸುಮಾರು 13,000 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರವು 1,834 ಸಾವುಗಳೊಂದಿಗೆ ಗರಿಷ್ಠ ಸಂಖ್ಯೆಯ ಆತ್ಮಹತ್ಯೆಗಳನ್ನು ದಾಖಲಿಸಿದೆ. ಮಧ್ಯಪ್ರದೇಶದಲ್ಲಿ 1,308, ತಮಿಳುನಾಡಿನಲ್ಲಿ 1,246, ಕರ್ನಾಟಕದಲ್ಲಿ 855 ಮತ್ತು ಒಡಿಶಾದಲ್ಲಿ 834 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಕೊಂಡಿರುವುದಾಗಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
Web Stories