Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

Exclusive | ಮುಡಾ ಕೇಸ್‌ನಲ್ಲಿ ಸಿಎಂ & ಕುಟುಂಬಸ್ಥರೇ ಸಂತ್ರಸ್ತರು – ನಟೇಶ್‌ ಪ್ರಮುಖ ಆರೋಪಿ ಎಂದ ʻಲೋಕಾʼ

Public TV
Last updated: February 9, 2025 9:36 am
Public TV
Share
2 Min Read
Siddaramaiah 2 3
SHARE

– ಸಿಎಂ ಪ್ರಭಾವ ಬಳಸಿಲ್ಲ; ಲೋಕಾ ಅಂತಿಮ ವರದಿಯಲ್ಲಿ ಉಲ್ಲೇಖ
– ಪಾರ್ವತಿ ಅವ್ರ ಗಮನಕ್ಕೆ ಬಾರದೇ ಕೆಲವೊಂದು ಪತ್ರ ವ್ಯವಹಾರ

ಬೆಂಗಳೂರು/ಮೈಸೂರು: ಸಿಎಂ ಮತ್ತು ಕುಟುಂಬದ ವಿರುದ್ಧದ ಮುಡಾ ಪ್ರಕರಣಕ್ಕೆ (MUDA Case) ಸಂಬಂಧಿಸಿದಂತೆ ಲೋಕಾಯುಕ್ತ ಅಂತಿಮ ವರದಿ ತಯಾರಿಸಿದ್ದು, ಇದರಲ್ಲಿನ ಸ್ಫೋಟಕ ಅಂಶಗಳು ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ. ವರದಿಯಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್‌ಚಿಟ್‌ ಕೊಡುವ ಜೊತೆಗೆ ಸಿಎಂ ಕುಟುಂಬವೇ ಸಂತ್ರಸ್ತರು ಎಂದು ಲೋಕಾಯುಕ್ತ (Lokayukta) ಉಲ್ಲೇಖಿಸಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

natesh MUDA

ಹೌದು. ಮೈಸೂರಿನ (Mysuru) ಕೆಸರೆಯಲ್ಲಿನ ತಮ್ಮ ಜಮೀನಿಗೆ ಬದಲಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿಧ ಅಳತೆಯಲ್ಲಿ ಸಿಎಂ ಕುಟುಂಬಕ್ಕೆ 14 ನಿವೇಶನಗಳನ್ನ ಹಂಚಿಕೆ ಮಾಡಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂದು ಪ್ರಕರಣ ದಾಖಲಾದ ಬಳಿಕ ಹೈಕೋರ್ಟ್‌ ಲೋಕಾಯುಕ್ತ ತನಿಖೆಗೆ ನೀಡಿತ್ತು. ಇದೀಗ ತನಿಖೆ ನಡೆಸಿದ ʻಲೋಕಾʼ ಅಂತಿಮ ವರದಿ ತಯಾರಿಸಿದ್ದು, ಸಿಎಂ ಕುಟುಂಬವೇ ಸಂತ್ರಸ್ತರು ಎಂದು ಉಲ್ಲೇಖಿಸಿದೆ ಎನ್ನಲಾಗಿದೆ.

MUDA ED Raid

ಮುಡಾ ಮಾಜಿ ಆಯುಕ್ತ ಪ್ರಮುಖ ಆರೋಪಿ:
ಮುಡಾದ ಮಾಜಿ ಆಯುಕ್ತ ನಟೇಶ್ ಈ ಪ್ರಕರಣ ಪ್ರಮುಖ ಆರೋಪಿ. ಭೂ ಮಾಲೀಕ ಎನ್ನಲಾದ ದೇವರಾಜು ಭೂಮಿ ಮಾರುವಾಗ ಸಾಕಷ್ಟು ಮಾಹಿತಿ ಮುಚ್ಚಿಟ್ಟಿದ್ರು. ಭೂಮಿಯನ್ನು ಮುಡಾ ವಶಕ್ಕೆ ಪಡೆದಿದ್ದ ಮಾಹಿತಿಯನ್ನೂ ಮುಚ್ಚಿಟ್ಟಿದ್ರು. ಈ ವಿಷಯ ತಿಳಿಯದೇ ಮಲ್ಲಿಕಾರ್ಜುನ್ ದೇವರಾಜು ಬಳಿಯಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಆದ್ರೆ ಅಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಸರ್ಕಾರದ ನಡಾವಳಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಲೋಕಾಯುಕ್ತ ವರದಿಯಲ್ಲಿನ ಸ್ಫೋಟಕ ಅಂಶಗಳೇನು?
ಸಿಎಂ ಮತ್ತು ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದಾರೆ. ಭೂಮಿ ಖರೀದಿ ಮಾಡುವಾಗ ಆಗಲಿ, ದಾನ ಮಾಡುವಾಗ ಆಗಲಿ ಯಾವುದೇ ಪ್ರಭಾವ ಬೀರಿಲ್ಲ. ಸಿಎಂ ಸಿದ್ದರಾಮಯ್ಯ ಸಹ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಾಗಲಿ ಪ್ರಭಾವ ಬೀರಿರುವುದಾಗಲಿ ಸಾಕ್ಷ್ಯ ಸಿಕ್ಕಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯೂ ಪ್ರಭಾವ ಬೀರಿರೋದಕ್ಕೆ ಸಾಕ್ಷ್ಯಗಳು ಇಲ್ಲ ಎಂದು ಹೇಳಿದೆ.

MUDA 1

2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ತೊಡಕು ಇರಲಿಲ್ಲ. 5 ಲಕ್ಷದ 95,000 ರೂಪಾಯಿ ಹಣಕ್ಕೆ 3 ಎಕರೆ 26 ಗುಂಟೆ ಜಮೀನು ಖರೀದಿ ಮಾಡಿದ್ದಾರೆ. 3 ಎಕರೆ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ಬಾಹಿರ, ನೊಂದಣಿ ಶುಲ್ಕದಲ್ಲಿ ಮೋಸ ಮಾಡಿಲ್ಲ. 2010 ರಲ್ಲಿ ಕೂಡ ದಾನ ಪತ್ರ ನೀಡುವಾಗ ಕೂಡ ಕಾನೂನಾತ್ಮವಾಗಿದೆ. ಕೆಸರೆಯ ಜಮೀನನ್ನು ಮುಡಾ ವಶಕ್ಕೆ ಪಡೆಯುವಾಗ ನಿಯಮ ಪ್ರಕಾರವೇ ಇದೆ. ಆದ್ರೆ 14 ಸೈಟುಗಳನ್ನ ಮರು ಹಂಚಿಕೆ ಮಾಡುವಾಗ ಕಾನೂನು ಬಾಹಿರ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಸಿಎಂ ಅವರ ಪತ್ನಿ ಇದೇ ಜಾಗದಲ್ಲಿ ಸೈಟ್ ಬೇಕು ಅಂತ ಮನವಿ ಮಾಡಿಲ್ಲ. ಮುಡಾ ಅಧಿಕಾರಿಗಳ ಜೊತೆ ನಡೆದಿರೋ ಪತ್ರ ವ್ಯವಹಾರದಲ್ಲಿ ಕೆಲವೊಂದು ಲೋಪಗಳು ಇದ್ದಾವೆ. ಆದ್ರೆ ಪಾರ್ವತಿ ಅವರ ಗಮನಕ್ಕೆ ಬಾರದಂತೆ ಕೆಲವೊಂದು ಪತ್ರ ವ್ಯವಹಾರ ನಡೆದಿದೆ. ಮುಡಾದ ಆಯುಕ್ತರು ಮತ್ತು ಅಧಿಕಾರಿಗಳಿಂದ ನಡಾವಳಿಯ ದುರ್ಬಳಕೆ ಆಗಿದೆ. ಮುಡಾದ ಮಾಜಿ ಆಯುಕ್ತ ನಟೇಶ್ ಕೇವಲ 14 ಸೈಟ್‌ಗಳಲ್ಲಿ ಮಾತ್ರವಲ್ಲ ಸಾಕಷ್ಟು ಪ್ರಕರಣಗಳಲ್ಲಿ ಅಕ್ರಮ ಮಾಡಿದಂತೆ ಇದೆ. ಅದರ ಮುಂದುವರಿದ ತನಿಖೆ ಆಗಬೇಕಿದೆ ಎಂದು ಲೋಕಾಯುಕ್ತ ತನ್ನ ಅಂತಿಮ ವರದಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ.

TAGGED:lokayuktaMUDAMUDA Casemysurusiddaramaiahಮುಡಾಮುಡಾ ಕೇಸ್‌ಮೈಸೂರುಲೋಕಾಯುಕ್ತಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema Updates

Pavithra Gowda 1
ಇಂದು ಜಾಮೀನು ಭವಿಷ್ಯ; ಕೋರ್ಟ್‌ ತೀರ್ಪಿಗೂ ಮುನ್ನವೇ ರಾಯರ ಮೊರೆ ಹೋದ ಪವಿತ್ರಾಗೌಡ
Bengaluru City Cinema Latest Sandalwood Top Stories
darshan renukaswamy pavithra gowda
`ಡಿ’ ಗ್ಯಾಂಗ್‍ಗೆ ಢವಢವ – ದರ್ಶನ್ ಸೇರಿ 7 ಮಂದಿ ಜಾಮೀನು ಭವಿಷ್ಯ ಇಂದು?
Cinema Court Karnataka Latest Main Post Sandalwood States Top Stories
Harshika Poonacha Bhuvan Ponnanna toured 3 countries with Tridevi 1
ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್
Cinema Latest Sandalwood
Darshan Thailand
ಥಾಯ್ಲೆಂಡ್‌ನಿಂದ ದರ್ಶನ್ ವಾಪಸ್ ಬರೋ ದಿನಾಂಕ ಫಿಕ್ಸ್
Cinema Latest Sandalwood Top Stories
B Saroja Devi
ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ
Cinema Latest

You Might Also Like

Enforcement Directorate
Latest

ED ಭರ್ಜರಿ ಬೇಟೆ – ಟಿಎಂಸಿ ಮಾಜಿ ಸಂಸದನ ಪುತ್ರನಿಗೆ ಸೇರಿದ 127 ಕೋಟಿ ಮೌಲ್ಯದ ಷೇರು ಜಪ್ತಿ

Public TV
By Public TV
26 minutes ago
DK Shivakumar 2 3
Districts

ಸಿಎಂ ಕುರ್ಚಿ ಕದನದ ಮಧ್ಯೆ ಡಿಕೆಶಿ ಟೆಂಪನ್‌ ರನ್‌ – ನಾಗೇಶ್ವರ ದೇವಾಲಯಕ್ಕೆ ದಿಢೀರ್ ಭೇಟಿ

Public TV
By Public TV
28 minutes ago
Nandini Shop in Metro Stations
Bengaluru City

ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

Public TV
By Public TV
48 minutes ago
AshokNagara Police
Bengaluru City

ಇನ್‌ಸ್ಟಾದಲ್ಲಿ ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ – ಕಾಮುಕ ಅರೆಸ್ಟ್

Public TV
By Public TV
1 hour ago
Lokayukta
Bengaluru City

ಸಚಿವ ಬೈರತಿ ಸುರೇಶ್ ಪಿಎಸ್ ಮನೆ ಮೇಲೆ ʻಲೋಕಾʼ ದಾಳಿ – ಭಾರೀ ಪ್ರಮಾಣದ ಆಸ್ತಿ ದಾಖಲೆ ವಶಕ್ಕೆ

Public TV
By Public TV
2 hours ago
bjp flag
Latest

ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?