ಮಂಗಳೂರು: ಆಗಸ್ಟ್ 29ರಂದು ಜರುಗಿದ ಉಲ್ಲಂಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ (Prathibha Karanji Competition) ಅನುದಾನಿತ ಶ್ರೀ ದುರ್ಗಾಪರಮೇಶ್ವರಿ ಹಿ.ಪ್ರಾ.ಶಾಲೆ ಕಟೀಲು ಇಲ್ಲಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ 6, ದ್ವಿತೀಯ ಸ್ಥಾನ 3 ಹಾಗೂ ತೃತೀಯ ಸ್ಥಾನ 6 ಹೀಗೆ ಒಟ್ಟು 15 ಬಹುಮಾನಗಳನ್ನು ಗಳಿಸಿದ್ದಾರೆ.
ಕಿರಿಯರ ವಿಭಾಗ: ಕಥೆ ಹೇಳುವ ಸ್ಪರ್ಧೆ ಮತ್ತು ಆಶುಭಾಷಣದಲ್ಲಿ ಶ್ರೀಜಲ್, ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ಧೆ ರಿಷಿಕ್ ಕೆ, ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ವಿಶ್ವನಾಥ ಬಹುಮಾನ ಗೆದ್ದಿದ್ದಾರೆ.
ಹಿರಿಯರ ವಿಭಾಗ: ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಮನೀಷ್, ಕವನವಾಚನ ಸ್ಪರ್ಧೆಯಲ್ಲಿ ಪುಣ್ಯಶ್ರೀ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಕಟೀಲು ಇಲ್ಲಿಯ ವಿದ್ಯಾರ್ಥಿಗಳು 6 ಪ್ರಥಮ, 5 ದ್ವಿತೀಯ ಹಾಗೂ 7 ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್
ಏಳಿಂಜೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯ ಹಿರಿಯ ವಿಭಾಗ (5 ರಿಂದ 7)ದಲ್ಲಿ ಲಘು ಸಂಗೀತದಲ್ಲಿ ಸಾನ್ವಿ ಡಿ ರಾವ್ (7ನೇ ತರಗತಿ) ಪ್ರಥಮ ಸ್ಥಾನ, ಕನ್ನಡ ಕಂಠ ಪಾಠದಲ್ಲಿ ಅನಿರುದ್ಧ್ (7ನೇ ತರಗತಿ) ಪ್ರಥಮ, ಧಾರ್ಮಿಕ ಪಠಣದಲ್ಲಿ ಕ್ಷಿತಿಜ್ (5ನೇ ತರಗತಿ) ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ಹೆಜೆಲ್ ನೇಹಾ ಕೌಂಡ್ಸ್ (6ನೇ ತರಗತಿ) ದ್ವಿತೀಯ, ಹಿಂದಿ ಕಂಠ ಪಾಠದಲ್ಲಿ ಸಾನ್ವಿ ಕೋಟ್ಯಾನ್ (7 ನೇ ತರಗತಿ) ದ್ವಿತೀಯ, ಭಕ್ತಿ ಗೀತೆಯಲ್ಲಿ ಶರಣ್ಯ ಎಸ್ ಭಟ್ (6ನೇ ತರಗತಿ), ಇಂಗ್ಲಿಷ್ ಕಂಠ ಪಾಠದಲ್ಲಿ ಖುಷಿ (6ನೇ ತರಗತಿ) ತೃತೀಯ, ಅಭಿನಯ ಗೀತೆಯಲ್ಲಿ ಮೈತ್ರಿ (7ನೇ ತರಗತಿ) ತೃತೀಯ, ಛದ್ಮವೇಷ ಸ್ಪರ್ಧೆಯಲ್ಲಿ ಶರಣ್ಯ ದೇವಿ ಭಟ್ (6ನೇ ತರಗತಿ) ತೃತೀಯ, ಕವನ ವಾಚನದಲ್ಲಿ ದೀಕ್ಷಾ (6ನೇ ತರಗತಿ) ತೃತೀಯ, ಕ್ಲೇ ಮಾಡೆಲಿಂಗ್‍ನಲ್ಲಿ ಅಥರ್ವ ಪಿ. ಆಚಾರ್ಯ (6ನೇ ತರಗತಿ) ತೃತೀಯ ಸ್ಥಾನ ಗಳಿಸಿದ್ದಾರೆ.
ಕಿರಿಯರ ವಿಭಾಗ (1 ರಿಂದ 4)ದಲ್ಲಿ ಇಂಗ್ಲಿಷ್ ಕಂಠ ಪಾಠದಲ್ಲಿ ಮನಾಹಾ (3ನೇ ತರಗತಿ) ಪ್ರಥಮ, ಲಘು ಸಂಗೀತದಲ್ಲಿ ಶಾರ್ವರಿ (4ನೇ ತರಗತಿ) ಪ್ರಥಮ, ಅಭಿನಯ ಗೀತೆಯಲ್ಲಿ ಶ್ರೀಪದ (3ನೇ ತರಗತಿ) ಪ್ರಥಮ, ಚಿತ್ರಕಲೆಯಲ್ಲಿ ಮೋಕ್ಷಿತ್ (4ನೇ ತರಗತಿ) ದ್ವಿತೀಯ, ಛದ್ಮವೇಷದಲ್ಲಿ ಅಧಿತಿ (4ನೇ ತರಗತಿ) ದ್ವಿತೀಯ, ಧಾರ್ಮಿಕ ಪಠಣ (ಸಂಸ್ಕøತ) ದಲ್ಲಿ ಆರ್ಯನ್ (3ನೇ ತರಗತಿ) ತೃತೀಯ ಹಾಗೂ ಕನ್ನಡ ಕಂಠ ಪಾಠದಲ್ಲಿ ಸ್ವಾನ್ವಿ (4ನೇ ತರಗತಿ) ತೃತೀಯ ಸ್ಥಾನ ಗಳಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]