ಬೆಂಗಳೂರು: ರಾಮೇಶ್ವರ ಕೆಫೆ (Rameshwaram Cafe) ಸ್ಫೋಟಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯಲ್ಲಿ (BMTC) ಶಂಕಿತ ಆರೋಪಿ ಪ್ರಯಾಣಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಬಿಎಂಟಿಸಿಯಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ.
ಶಂಕಿತ ಓಡಾಡಿರುವ ಬಿಎಂಟಿಸಿ ಬಸ್ ಆಧರಿಸಿ ಸಿಸಿಟಿವಿ ವಿಡಿಯೋ ಕೊಡುವಂತೆ ಪೊಲೀಸರಿಂದ ಬಿಎಂಟಿಸಿಯ ಭದ್ರತಾ ವಿಭಾಗಕ್ಕೆ ಮನವಿ ಸಲ್ಲಿಸಲಾಗಿದೆ. ಪೊಲೀಸರು ಮಾಹಿತಿ ಕೇಳುತ್ತಿದ್ದಾರೆ. ಮಾಹಿತಿ ಕೊಡುತ್ತೇವೆ. ಎಲ್ಲಾ ಚೆಕ್ ಮಾಡುತ್ತಿದ್ದೇವೆ ಎಂದು ಬಿಎಂಟಿಸಿ ಭದ್ರತಾ ವಿಭಾಗದ ಅಧಿಕಾರಿ ಶಿವಪ್ರಕಾಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್
Advertisement
Advertisement
ಇನ್ನು ಈ ಕುರಿತು ಬಿಎಂಟಿಸಿ ಎಂಡಿ ರಾಮಚಂದ್ರ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬಿಎಂಟಿಸಿಯಲ್ಲಿ ಶಂಕಿತ ಓಡಾಡಿದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿರಬೇಕಾದರೆ ನಾನು ಮಾತನಾಡೋದು ಸರಿಯಲ್ಲ. ತನಿಖೆ ಮಾಡುತ್ತಿದ್ದಾರೆ, ಮಾಡಲಿ. ಪರೋಕ್ಷವಾಗಿ ಶಂಕಿತನ ಸುಳಿವು ನೀಡಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ಗು ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿಎಂ
Advertisement