ಲಕ್ನೋ: ಕ್ಲಬ್‍ಹೌಸ್ ಆ್ಯಪ್‍ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕ್ಲಬ್‍ಹೌಸ್ ಆ್ಯಪ್‍ನಲ್ಲಿ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಮತ್ತು ನಿಂದನೀಯ ಕಮೆಂಟ್‍ಗಳನ್ನು ಮಾಡುತ್ತಿದ್ದ ಎಂದು ದೆಹಲಿ ಪೊಲೀಸರು ಲಕ್ನೋದ 18 ವರ್ಷದ ಯುವಕನನ್ನು ಬಂಧಿಸಿದ್ದಾರೆ.
Advertisement
Advertisement
ಕ್ಲಬ್‍ಹೌಸ್ ಆ್ಯಪ್ ಚಾಟ್ ಪ್ರಕರಣ ತೀವ್ರವಾಗುತ್ತಿದ್ದಂತೆ ಆರೋಪಿಯನ್ನು ಹುಡುಕಲು ಲಕ್ನೋಗೆ ದೆಹಲಿ ಪೊಲೀಸರು ತೆರಳಿದ್ದರು. ಈ ಆ್ಯಪ್‍ನಲ್ಲಿ ‘ಬಿಸ್ಮಿಲ್ಲಾ’ ಎಂದು ಸುಳ್ಳು ಖಾತೆಯನ್ನು ತೆರೆದಿದ್ದ ಯುವಕ, ಮಹಿಳೆಯರ ಪೋಸ್ಟ್ ಗೆ ಅವಹೇಳನ ಕಮೆಂಟ್ ಮಾಡುತ್ತಿದ್ದನು. ಆದರೆ ಆತನ ನಿಜವಾದ ಹೆಸರು ರಾಹುಲ್ ಕಪೂರ್ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಜರಾಯಿ ತಹಶೀಲ್ದಾರ್ ಅರೆಸ್ಟ್
Advertisement
Advertisement
ಪೊಲೀಸ್ ಉಪ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಈ ಕುರಿತು ಮಾತನಾಡಿದ್ದು, ರಾಹುಲ್ ‘ಸಲ್ಲೋಸ್’ ವ್ಯಕ್ತಿ ಪ್ರೇರಣೆಯ ಮೇರೆಗೆ ಆಡಿಯೋ ಚಾಟ್ ರೂಮ್ ಅನ್ನು ರಚಿಸಿದ್ದ. ನಂತರ ಚಾಟ್ ರೂಮ್‍ನ ಮಾಡರೇಟರ್ ಕೀ ಅನ್ನು ಸಲ್ಲೋಸ್ ಗೆ ಕೊಟ್ಟಿದ್ದಾನೆ. ಕೀ ಬಳಸಿಕೊಂಡು ಆತ ಮಹಿಳೆಯರ ಜೊತೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದ ಎಂದು ತಿಳಿಸಿದರು.
ಪ್ರಸ್ತುತ ರಾಹುಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ತನಿಖೆ ಮಾಡಬೇಕಾಗಿದೆ ಎಂದು ತಿಳಿಸಿದರು.