ಬೆಂಗಳೂರು: ಮುಡಾ ಹಗರಣವೀಗ ಸರ್ಕಾರ (Karnataka Govt.) ವರ್ಸಸ್ ಗೌರ್ನರ್ ಎನ್ನುವಂತಾಗಿದೆ. ನಾವಾ ನೀವಾ.. ನೋಡೇ ಬಿಡೋಣ ಎನ್ನುತ್ತಾ ರಾಜ್ಯಪಾಲರು ಮತ್ತು ವಿಪಕ್ಷಗಳ ವಿರುದ್ಧ ರಾಜ್ಯ ಸರ್ಕಾರ ರಾಜಕಾರಣ ಶುರು ಮಾಡಿಕೊಂಡಂತೆ ಕಾಣುತ್ತಿದೆ. ಆರ್ಟಿಕಲ್ 163ರ ಅಡಿ ಮಂತ್ರಿ ಪರಿಷತ್‌ಗೆ ಇರುವ ಅಧಿಕಾರ ಬಳಸಿಕೊಂಡಿರುವ ಸಿದ್ದರಾಮಯ್ಯ (Siddaramaiah) ಸಂಪುಟ, ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ, ಬಾಕಿ ಉಳಿದಿರುವ ಪ್ರಕರಣದ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
Advertisement
ಗುರುವಾರ ಸಿಎಂ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ (CLP Meeting) ಕಾಂಗ್ರೆಸ್ ಶಾಸಕರು, ಸಚಿವರು ಸಿಎಂಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ನೀವು ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಕಾನೂನು ಹೋರಾಟ ನಡೆಸಿ ಅಂತ ಶಾಸಕರು ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಸಿಎಂ ಸಹ ಧನ್ಯವಾದ ಹೇಳಿದರು. ನನ್ನ ಪರವಾಗಿ ಹೋರಾಡುತ್ತಿದ್ದೀರಿ, ನಿಮಗೆ ಧನ್ಯವಾದ ಅಂತ ಹೇಳಿದ್ದಾರೆ. ನಾಳೆ (ಆ.23) ಹೈಕಮಾಂಡ್ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
Advertisement
ಇವತ್ತು ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ಪೆಂಡಿಂಗ್ ಇರುವ ನಾಲ್ಕು ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಲಹೆ ರೂಪದ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಭ್ರಷ್ಟಚಾರ ತಡೆ ಕಾಯ್ದೆ 1988ರ ಅಡಿ ಪ್ರಮುಖ 4 ಪ್ರಕರಣಗಳ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. As soon as possible ಪ್ರಾಸಿಕ್ಯೂಷನ್ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಿ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣ, ಜನಾರ್ದನ ರೆಡ್ಡಿ ಪ್ರಕರಣ, ಮುರುಗೇಶ್ ನಿರಾಣಿ ಪ್ರಕರಣ, ಶಶಿಕಲಾ ಜೊಲ್ಲೆ ಪ್ರಕರಣಗಳ ಪ್ರಾಸಿಕ್ಯೂಶನ್ ಅನುಮತಿ ಮನವಿ ಅರ್ಜಿಗಳನ್ನ ಇತ್ಯರ್ಥಗೊಳಿಸಬೇಕೆಂದು ಸಲಹೆ ನೀಡಿ ನಿರ್ಣಯ ಕೈಗೊಳ್ಳಲಾಗಿದೆ.
Advertisement
ಈ ಮೂಲಕ ರಾಜ್ಯಪಾಲರಿಗೆ ತಿರುಗೇಟು ಕೊಡುವುದು ಒಂದು ಕಡೆಯಾದ್ರೆ, ಹೆಚ್‌ಡಿಕೆ ಹಾಗೂ ವಿಪಕ್ಷ ನಾಯಕರಿಗೆ ಬಿಸಿ ಮುಟ್ಟಿಸಲು ಸಿದ್ದರಾಮಯ್ಯ ಕ್ಯಾಬಿನೆಟ್ ಯತ್ನಿಸಿದಂತಿದೆ. ಆದ್ರೆ ಈ ಮೊದಲು ಆಗಸ್ಟ್ 1ರಂದು ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ಕ್ಯಾರೇ ಎನ್ನದ ರಾಜ್ಯಪಾಲರು, ಮಂತ್ರಿ ಪರಿಷತ್ ನಿರ್ಣಯ ವಿಶ್ವಾಸಾರ್ಹ ಅಲ್ಲ ಎಂದು ತಿರುಗೇಟು ನೀಡಿ ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದರು. ಹಾಗಾಗಿ ಇವತ್ತಿನ ನಿರ್ಣಯಕ್ಕೆ ರಾಜ್ಯಪಾಲರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿದ್ದು, ರಾಜಭವನ ವರ್ಸಸ್ ಸರ್ಕಾರದ ಸಂಘರ್ಷ ಇನ್ನಷ್ಟು ತಾರಕಕ್ಕೇರುತ್ತಾ ಕಾದುನೋಡಬೇಕಿದೆ.
Advertisement
ಪ್ರಮುಖ ನಿರ್ಣಯಗಳೇನು?
ಅಲ್ಲದೇ ಸಿಎಂ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನೂ ಕೈಗೊಳ್ಳಲಾಯಿತು. ರಾಷ್ಟ್ರಪತಿಗಳ ಮುಂದೆ ಶಾಸಕರ ಪೆರೇಡ್‌ಗೆ ನಿರ್ಧರಿಸಲಾಯಿತು. ಆ.23ರಂದು ಹೈ ಕಮಾಂಡ್ ಬಳಿ ಈ ವಿಚಾರ ಮಾತನಾಡಲು ನಿರ್ಧಾರ ಕೈಗೊಳ್ಳಲಾಯಿತು. ಹೈಕಮಾಂಡ್ ಅನುಮತಿ ಕೊಟ್ಟರೇ, ಅಲ್ಲೇ ದಿನಾಂಕ ನಿಗದಿಪಡಿಸಲಿರುವ ಸಿಎಂ ಹಾಗೂ ಡಿಸಿಎಂ ಎಲ್ಲಾ 135 ಶಾಸಕರನ್ನ ದೆಹಲಿಗೆ ಕರೆದೊಯ್ದು, ರಾಷ್ಟ್ರಪತಿಗಳ ಮುಂದೆ ಪೆರೆಡ್ ಮಾಡಿಸಿ, ರಾಜ್ಯಪಾಲರ ವಿರುದ್ಧ ದೂರು ಕೊಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರದೀಪ್ ಈಶ್ವರ್, ವಿನಯ್ ಕುಲಕರ್ಣಿ, ರಾಜು ಕಾಗೆ, ಮಂಜುನಾಥ್ ಭಂಡಾರಿ, ಸುಧಾಮ್ ದಾಸ್, ಹ್ಯಾರಿಸ್, ಬೋಸರಾಜು, ನಾರಾಯಣಸ್ವಾಮಿ, ಕೆ.ಜೆ ಜಾರ್ಜ್, ಶರಣು ಪ್ರಕಾಶ್ ಪಾಟೀಲ್, ನರೇಂದ್ರ ಸ್ವಾಮಿ, ಶ್ರೀನಿವಾಸ ಮಾನೆ, ಉಮಾಶ್ರೀ, ರಾಜೇಗೌಡ, ರಾಮೋಜಿಗೌಡ, ಜಮೀರ್ ಅಹಮದ್ ಪಾಲ್ಗೊಂಡಿದ್ದರು.
ರಾಜ್ಯಪಾಲರ ಒಪ್ಪಿಗೆಗೆ ಕಾದಿರುವ ಪ್ರಕರಗಳು
1 ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಗಣಿ ಗುತ್ತಿಗೆ ಲೈಸೆನ್ಸ್ ಪ್ರಕರಣ
2. ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ
3. ಮುರುಗೇಶ ನಿರಾಣಿ ವಿರುದ್ಧ `ಇನ್ವೆಸ್ಟ್ ವೀಡಿಯೋ’ ಪ್ರಕರಣ
4. ಮಾಜಿ ಮಂತ್ರಿ ಶಶಿಕಲಾ ಜಿಲ್ಲೆ ವಿರುದ್ಧ ಮೊಟ್ಟೆ ಪ್ರಕರಣ