– ಡಿಕೆ ಮಾತಿನಿಂದಲೇ ರಾದ್ಧಾಂತ ಎಂದ ಸಿದ್ದರಾಮಯ್ಯ
– ಬುಧವಾರ ಹೈಕಮಾಂಡ್ ನಾಯಕರ ಭೇಟಿ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಪವರ್ ಶೇರಿಂಗ್ ಸಂಘರ್ಷ ತಾರಕಕ್ಕೇರಿದೆ. ಕಾಂಗ್ರೆಸ್ ಮನೆಯಲ್ಲಿ ಸೀಟ್ ಫೈಟು, ದೊಡ್ಡ ಘಾಟು ಎಬ್ಬಿಸಿದೆ. ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆ (CLP Meeting) ಮತ್ತು ಸಿಎಂ-ಡಿಸಿಎಂ ಪ್ರತ್ಯೇಕ ಸಭೆಯಲ್ಲಿ ರಣದೀಪ್ ಸುರ್ಜೆವಾಲಾ (Randeep Surjewala) ಮುಂದೆ ಪಕ್ಷದ ಒಳಜಗಳ ಬಹಿರಂಗವಾಗಿದೆ.
ಸಿಎಂ ಬದಲಾವಣೆ ಬಗ್ಗೆ ಯಾರೂ ಬಾಯಿ ಬಿಡುವಂತಿಲ್ಲ ಅಂತ ಹೇಳಿ ಸುರ್ಜೇವಾಲ ಎಚ್ಚರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಪವರ್ ಶೇರಿಂಗ್ ಗದ್ದಲದ ಬಗ್ಗೆ ಸಮಜಾಯಿಷಿ ನೀಡಿದ್ದು, ಡಿಸಿಎಂ ನೀಡಿದ ಹೇಳಿಕೆಯಿಂದ ಎಲ್ಲಾ ಶುರುವಾಯ್ತು ಎಂದು ನೇರಾನೇರ ಆರೋಪ ಮಾಡಿದ್ದಾರೆ.ಸಿಎಂ ಹೇಳುತ್ತಿದ್ದಂತೆ ಹಾಗೇ ನಾನು ಹೇಳಲಿಲ್ಲ ಎಂದು ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾದ್ದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ತೆರಳಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ: ಜೈಲಿನಿಂದ ಬಿಡುಗಡೆ ಬಳಿಕ ದರ್ಶನ್ ಮೊದಲ ಮಾತು
ಬುಧವಾರ ಇಬ್ಬರು ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇತ್ತ ದಲಿತ ಸಚಿವರ ಡಿನ್ನರ್ ಸಭೆ (Dinner Meeting) ಬಗ್ಗೆ ಸುರ್ಜೆವಾಲಾಗೆ ವಿವರಣೆ ಕೊಡುತ್ತೇವೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ತ್ರಿಮೂರ್ತಿ ಸಭೆಯಲ್ಲಿ ಏನಾಯ್ತು?
ಪವರ್ ಶೇರ್ ವಿಚಾರ ಇದ್ದಕ್ಕಿದ್ದಂತೆ ಏಕೆ ಬಂತು ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಶಿವಕುಮಾರ್ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಕ್ಕೆ ನಾನು ಪ್ರತಿಕ್ರಿಯಿಸಿದ್ದೆ. ಅಲ್ಲಿಂದ ಏನೇನೋ ಸೃಷ್ಟಿಯಾಗಿ, ಉಪ್ಪು ಖಾರ ಸೇರಿಸಿದರು. ಇದಕ್ಕೆ ನಾನು ಜವಾಬ್ದಾರಿಯೇ ಎಂದು ಪ್ರಶ್ನಿಸಿದ್ದಾರೆ.
ಮೊನ್ನೆ ಕ್ಯಾಬಿನೆಟ್ ಮುಗಿದ ಬಳಿಕ ನಾವು ಡಿನ್ನರ್‌ಗೆ ಸೇರಿದ್ದೆವು. ಅಲ್ಲಿ ಯಾವ ಗುಂಪು ಇರಲಿಲ್ಲ. ಸಚಿವರು ಸೇರಿ ಐದಾರು ಜನ ಇದ್ವಿ ಅಷ್ಟೇ. ಅದಕ್ಕೂ ಕೆಲವರು ಬಣ್ಣ ಕಟ್ಟಿದ್ರು. ಹೈಕಮಾಂಡ್ ಏನ್ ಹೇಳುತ್ತೋ ಅದಕ್ಕೆ ಬದ್ಧ ಎಂದು ನಾನು ಕ್ಲಿಯರ್ ಆಗಿ ಹೇಳಿದ್ದೀನಿ. ಅದು ಬಿಟ್ಟು ಎಲ್ಲ ಕಡೆ ಯಾರೂ ಮಾತಾಡೋದು ಬೇಡ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಪವರ್ ಶೇರ್ ಒಪ್ಪಂದ ಆಗಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಇಬ್ಬರ ನಡುವೆ ಒಂದು ಅಂಡರ್‌ಸ್ಟ್ಯಾಂಡಿಗ್ ಇದೆ ಎಂದಿದ್ದೆ ಅಷ್ಟೇ. ನೀವು ಹೇಳಿದ್ಮೇಲೆ ಮುಗೀತು ಅಂತಾ ಅವತ್ತೇ ಹೇಳಿದ್ದೇನೆ. ನಾನು ಪಕ್ಷ ಹಾಕಿದ ಗೆರೆ ದಾಟುವುದಿಲ್ಲ ಪವರ್ ಶೇರ್ ವಿಚಾರಕ್ಕೆ ತಲೆ ಹಾಕುವುದಿಲ್ಲ. ಯಾರೇ ಮಾತಾಡಿದ್ರೂ ಹೈಕಮಾಂಡ್ ಇದೆ ಎಂದಷ್ಟೇ ನಾನು ಹೇಳಿದ್ದೇನೆ ಎಂದಿದ್ದಾರೆ.
ಇಬ್ಬರ ಮಾತುಗಳನ್ನು ಕೇಳಿಸಿಕೊಂಡ ಸುರ್ಜೇವಾಲ ಸರಿ ಆಯ್ತು, ಬೆಳಗಾವಿ ಸಮಾವೇಶ, ಬಜೆಟ್ ಕಡೆ ಗಮನ ಕೊಡಿ. ಸಚಿವರ ಆಕ್ಷನ್- ರಿಯಾಕ್ಷನ್ ವಿಚಾರ ನಮಗೆ ಬಿಡಿ ಎಂದು ಹೇಳಿದರು. ಇದಕ್ಕೆ ಸಿಎಂ ನಾನು ಯಾರನ್ನೂ ಎಂಟರ್‌ಟೈನ್ ಮಾಡಿಲ್ಲ, ಮಾಡಲ್ಲ ಎಂದು ಹೇಳಿದ್ದಾರೆ.