ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್‌ಪುರ ಬ್ಲಾಕ್‌ನಲ್ಲಿ ಶನಿವಾರ ನಸುಕಿನ ವೇಳೆ ಮೇಘಸ್ಫೋಟ ಸಂಭವಿಸಿದೆ. ರಕ್ಷಣಾ ಕಾರ್ಯಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ(ಎನ್‌ಡಿಆರ್‌ಎಫ್) ಸ್ಥಳಕ್ಕೆ ಧಾವಿಸಿದೆ.
ಜಿಲ್ಲೆಯ ಸರ್ಖೇತ್ ಗ್ರಾಮದಲ್ಲಿ ಇಂದು ಮುಂಜಾನೆ 2:45 ಕ್ಕೆ ಮೇಘಸ್ಫೋಟವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ಜನರನ್ನು ರಕ್ಷಿಸಲಾಗುತ್ತಿದ್ದು, ಕೆಲವರನ್ನು ಹತ್ತಿರದ ರೆಸಾರ್ಟ್‌ಗೆ ಆಶ್ರಯಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH | River Tamasa in spate near Tapkeshwar Mahadev temple in Dehradun following continuous rains in the area#Uttarakhand pic.twitter.com/Okxa0otY7N
— ANI UP/Uttarakhand (@ANINewsUP) August 20, 2022
ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಡೆಹ್ರಾಡೂನ್‌ನ ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿ ಹರಿಯುವ ತಾಮಸಾ ನದಿ ಭೀಕರ ಸ್ವರೂಪ ಪಡೆದುಕೊಂಡಿದೆ. ಇದರಿಂದಾಗಿ ವೈಷ್ಣೋದೇವಿ ಗುಹೆ ಯೋಗ ದೇವಾಲಯ ಮತ್ತು ತಪಕೇಶ್ವರ ಮಹಾದೇವ ದೇವಾಲಯದ ಸಂಪರ್ಕ ಕಡಿತಗೊಂಡಿದೆ. ಸದ್ಯ ಯಾವುದೇ ಪ್ರಾಣ ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ ಎಂದು ದೇವಸ್ಥಾನದ ಸಂಸ್ಥಾಪಕ ಆಚಾರ್ಯ ಬಿಪಿನ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಮಥುರಾ ದೇವಾಲಯದಲ್ಲಿ ಜನದಟ್ಟಣೆ – ಉಸಿರುಗಟ್ಟಿ ಇಬ್ಬರ ಸಾವು
ಈ ನಡುವೆ ಭಾರೀ ಮಳೆಯಿಂದಾಗಿ ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾ ಪಟ್ಟಣದ ಮಾತಾ ವೈಷ್ಣೋದೇವಿ ದೇಗುಲದ ಬಳಿ ಹಠಾತ್ ಪ್ರವಾಹ ಉಂಟಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಭಕ್ತಾದಿಗಳ ಸಂಚಾರವನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸಲಾಯಿತು. ಇದನ್ನೂ ಓದಿ: ಭಾರತ ನನ್ನ ಕುಟುಂಬದಂತೆ: ಓದಿನ ನೆರವಿಗಾಗಿ ಅಫ್ಘನ್ ಯುವತಿಯಿಂದ ಮೋದಿಗೆ ಮನವಿ