ನವದೆಹಲಿ: ವಾತಾವರಣದಲ್ಲಿ ಸಾಕಷ್ಟು ತೇವಾಂಶವಿಲ್ಲದ (Insufficient Moisture) ಕಾರಣ ಬುಧವಾರ ದೆಹಲಿಯಲ್ಲಿ ನಡೆಯಬೇಕಿದ್ದ ಮೋಡ ಬಿತ್ತನೆ ಪ್ರಯೋಗವನ್ನು (Cloud Seeding Trial) ಸ್ಥಗಿತಗೊಳಿಸಲಾಗಿದೆ ಎಂದು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT Kanpur) ಪ್ರಕಟಣೆಯಲ್ಲಿ ತಿಳಿಸಿದೆ.
ಕೃತಕವಾಗಿ ಮಳೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿರುವ ಈ ಪ್ರಕ್ರಿಯೆಯು ಸರಿಯಾದ ಮೋಡ ಮತ್ತು ತೇವಾಂಶದ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ದೆಹಲಿ ಸರ್ಕಾರವು ಐಐಟಿ-ಕಾನ್ಪುರದ ಸಹಯೋಗದೊಂದಿಗೆ ಮಂಗಳವಾರ ಬುರಾರಿ, ಉತ್ತರ ಕರೋಲ್ ಬಾಗ್, ಮಯೂರ್ ವಿಹಾರ್ ಮತ್ತು ಬದ್ಲಿ ಸೇರಿದಂತೆ ಎರಡು ಪ್ರದೇಶಗಳಲ್ಲಿ ಮೋಡ ಬಿತ್ತನೆ ನಡೆಸಿತು. ದೆಹಲಿಯಲ್ಲಿ ಯಾವುದೇ ಮಳೆ ದಾಖಲಾಗಿಲ್ಲವಾದರೂ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಕೆಲವು ಭಾಗಗಳಲ್ಲಿ ಲಘು ಮಳೆಯಾಗಿದೆ. ಇದನ್ನೂ ಓದಿ: ಕಾರಿನ ಮಿರರ್‌ಗೆ ಟಚ್ ಆಯ್ತು ಅಂತ ಚೇಸ್ ಮಾಡಿ ಬೈಕ್‌ಗೆ ಗುದ್ದಿಸಿ ಯುವಕನ ಕೊಲೆ; ದಂಪತಿ ಬಂಧನ
ಪ್ರಯೋಗಗಳ ಸಮಯದಲ್ಲಿ ತೇವಾಂಶದ ಮಟ್ಟವು ಕೇವಲ 15-20 ಪ್ರತಿಶತದಷ್ಟಿತ್ತು, ಇದು ಮಳೆಯನ್ನು ಉಂಟುಮಾಡಲು ಸಾಕಾಗಲಿಲ್ಲ. ಮೋಡ ಬಿತ್ತನೆ ಬಳಿಕ ತೇವಾಂಶದ ಮಟ್ಟವು ಕೇವಲ 50-60 ಪ್ರತಿಶತದಷ್ಟಿರಬೇಕು. ಈ ಕಾರಣದಿಂದ ದೆಹಲಿಯಲ್ಲಿ ಮಳೆ ಸಾಧ್ಯವಾಗಿಲ್ಲ. ಹವಾಮಾನ ಪರಿಸ್ಥಿತಿಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪ್ರಯತ್ನಿಸಲಾಗುವುದು ಎಂದು ಐಐಟಿ-ಕೆ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ʻನನ್ನ ಸಾವಿಗೆ ಸಚಿವ ಜಮೀರ್ ಕಾರಣʼ – ರಕ್ತದಲ್ಲಿ ಡೆತ್‌ನೋಟ್ ಬರೆದು ಹೈಡ್ರಾಮಾ!
 


 
		
 
		 
		 
		 
		