ಬೆಂಗಳೂರು: ಕರ್ನಾಟದಲ್ಲಿರುವ ಬಾರ್‍ಗಳಿಗೆ ರಾಜ್ಯ ಸರ್ಕಾರ ದೊಡ್ಡ ಶಾಕ್ ನೀಡಿದ್ದು, ಬಾರ್ ಲೈಸನ್ಸ್ ನವೀಕರಣಕ್ಕೆ ಹೋದ ಮಾಲೀಕರಿಗೆ ಲಕ್ಷಗಟ್ಟಲೆ ದಂಡ ಕಟ್ಟುವಂತೆ ಅಬಕಾರಿ ಇಲಾಖೆ ಸೂಚಿಸಿದೆ.
2003 ರಿಂದ 2014 ರವರೆಗೆ ನಿಯಮ 14ರ ಅಡಿಯಲ್ಲಿ ಪ್ರತಿ ತಿಂಗಳು 50 ಕೇಸ್ ಮದ್ಯ ಮಾರಾಟ ಮಾಡುವಂತೆ ಅಬಕಾರಿ ಇಲಾಖೆ ಟಾರ್ಗೆಟ್ ನೀಡಿತ್ತು. ಇಲ್ಲವಾದಲ್ಲಿ ಪ್ರತೀ ಲೀಟರ್ ಮದ್ಯಕ್ಕೆ 100 ರೂ. ದಂಡ ವಿಧಿಸಲಾಗಿತ್ತು. 2014ರಲ್ಲಿ ಸರ್ಕಾರವೇ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ವಿವಾದಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ದಂಡ ವಿಧಿಸುವುದನ್ನು ಕೈಬಿಡಲಾಗಿತ್ತು.
Advertisement
ಆದರೆ ಈಗ ಬಾರ್ ಮಾಲೀಕರು ಶುಕ್ರವಾರ ಕೊನೆಯ ದಿನವೆಂದು ಲೈಸನ್ಸ್ ರಿನೀವಲ್ ಮಾಡಿಸಲು ಹೋದರೆ, ನಿಮ್ಮ ಹಳೆ ದಂಡದ ಬಾಕಿ ಹಣ ಪಾವತಿಸಿ ಇಲ್ಲದಿದ್ದರೆ ಬೀಗ ಜಡಿದು ನೋಟಿಸ್ ಜಾರಿ ಮಾಡುತ್ತೇವೆ ಎಂದು ಖಡಕ್ ಆಗಿ ಉತ್ತರಿಸಿ ಅಬಕಾರಿ ಇಲಾಖೆ ದೊಡ್ಡ ಶಾಕ್ ನೀಡಿದೆ.
Advertisement
ಬರೋಬ್ಬರಿ 15 ರಿಂದ 60 ಲಕ್ಷ ರೂ.ತನಕ ದಂಡ ಹಾಕಿದ್ದಾರೆ. ಹೆದ್ದಾರಿಗಳಲ್ಲಿರುವ ಬಾರ್ ಬಂದ್ ಮಾಡುವಂತೆ ಸುಪ್ರಿಂಕೋರ್ಟ್ ತೀರ್ಪಿನ ಜೊತೆಗೆ ರಾಜ್ಯ ಸರ್ಕಾರ ಕೂಡಾ ದಂಡ ಪ್ರಯೋಗವನ್ನು ಮಾಡುತ್ತಿದೆ. ಸರ್ಕಾರಕ್ಕೆ ಹೆಚ್ಚು ತೆರಿಗೆಯನ್ನು ನಾವು ಪಾವತಿಸುತ್ತಿದ್ದೇವೆ. ಆದರೆ ಈಗ ಸರ್ಕಾರ ನಮ್ಮ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಕರುಣಾಕರ್ ಹೆಗ್ಡೆ ಪಬ್ಲಿಕ್ ಟಿವಿಗೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.