ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ (Telangana Chief Minister) ಕೆ. ಚಂದ್ರಶೇಖರ್ ರಾವ್ (K. Chandrasekhar Rao) ಅವರ ಪುತ್ರಿ ಮತ್ತು ಟಿಆರ್‍ಎಸ್ ಎಂಎಲ್‍ಸಿ ಕೆ.ಕವಿತಾ (TRS MLC K. Kavitha) ಅವರು ತಮ್ಮ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುವುದನ್ನು ಮುಂದುವರಿಸಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಬಿಜೆಪಿ ಸಂಸದ ಡಿ.ಅರವಿಂದ್‍ಗೆ (BJP MP D. Arvind) ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಕುರಿತಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕವಿತಾ ಅರವಿಂದ್ ಅವರು, ಅರವಿಂದ್ ಕೆಳಮಟ್ಟಕ್ಕೆ ಇಳಿದಿದ್ದಾರೆ. ನಿಮ್ಮ ಬಗ್ಗೆ ನಿಮಗೆ ಏನನಿಸುತ್ತಿದೆ? ನೀವು ಮತ್ತೆ ಆಧಾರರಹಿತ ಕಾಮೆಂಟ್‍ಗಳನ್ನು ಮಾಡಿದರೆ, ನಾನು ನಿಜಾಮಾಬಾದ್ ಕ್ರಾಸ್‍ರೋಡ್‍ನಲ್ಲಿ ನಿಮಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದರ ಮನೆಗೆ ನುಗ್ಗಿ TRS ಕಾರ್ಯಕರ್ತರಿಂದ ದಾಳಿ
Advertisement
Advertisement
ಗುರುವಾರ ಅರವಿಂದ್ ಅವರು ಸುದ್ದಿಗೋಷ್ಠಿ ವೇಳೆ, ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅವರು ಪಕ್ಷವನ್ನು ಬದಲಾಯಿಸದಿದ್ದರೆ ಅವರ ಮೇಲೆ ಇಡಿ ಮೂಲಕ ದಾಳಿ ನಡೆಸಲಾಗುತ್ತದೆ ಎಂಬ ಬೆದರಿಕೆ ಕುರಿತ ವರದಿಯೊಂದನ್ನು ಉಲ್ಲೇಖಿಸಿ ಮಾತನಾಡುತ್ತಾ, ಸಿಎಂ “ತಮ್ಮ ಮಗಳನ್ನು ವ್ಯಾಪಾರ ಮಾಡುತ್ತಿದ್ದಾರೆ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದರು.
Advertisement
Advertisement
ಈ ವಿಚಾರವಾಗಿ ಕವಿತಾ ಅವರು, ನಾನು ಬಹಳ ದಿನದಿಂದ ಸಂಯಮದಿಂದ ವರ್ತಿಸುತ್ತಿದ್ದೆ. ಆದರೆ ಈಗ ಸುಮ್ಮನಿರುವುದಿಲ್ಲ. ಮೂಖ್ಯಮಂತ್ರಿಯಾಗಿರುವ ಕೆಸಿಆರ್ ಅವರಿಗೆ ಗೌರವ ಕೂಡ ನೀಡಿದೇ, ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. ಅಷ್ಟಕ್ಕೂ ಅರವಿಂದ್ ತೆಲಂಗಾಣಕ್ಕೆ ಏನು ಕೊಡುಗೆ ನೀಡಿದ್ದಾರೆ? ಮುಂದಿನ ಚುನಾವಣೆಯಲ್ಲಿ ಅರವಿಂದ್ ಎಲ್ಲಿ ಸ್ಪರ್ಧಿಸಿದರೂ ಸೋಲಿಸುತ್ತೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್‌ಗೆ ಮಸಾಜ್, ವಿಐಪಿ ಸೌಕರ್ಯ – ವೀಡಿಯೋ ಬಿಡುಗಡೆ
ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕವಿತಾ ಸಂಪರ್ಕಿಸಿದ್ದಾರೆ ಎಂಬ ಅರವಿಂದ್ ಹೇಳಿಕೆಗೆ, ಕಾಂಗ್ರೆಸ್‍ಗೆ ಸೇರಿಕೊಳ್ಳಲು ಆಫರ್ ಬಂದಿತ್ತು ಮತ್ತು ಕೆಲವು ಚರ್ಚೆ ನಡೆಸಲು ಬಿಜೆಪಿಯ ಕೆಲ ಸ್ನೇಹಿತರು ನನ್ನನ್ನು ಸಂಪರ್ಕಿಸಿದ್ದರು. ಆದರೆ ನಾನು ಅದನ್ನು ತಿರಸ್ಕರಿಸಿದ್ದೇನೆ ಎಂದು ತಿಳಿಸಿದ್ದಾರೆ.
ನನಗೆ ಬೇರೆ ಯಾವುದೇ ಪಕ್ಷ ಸೇರಿಕೊಳ್ಳುವ ಆಸಕ್ತಿ ಇಲ್ಲ, ನಮ್ಮ ನಾಯಕರು ಯಾವ ಪಕ್ಷದಲ್ಲಿರುತ್ತಾರೋ ಅದೇ ಪಕ್ಷದಲ್ಲಿ ನನ್ನ ಮನಸ್ಸು ಇರುತ್ತದೆ. ಸಿಎಂ ಕೆಸಿಆರ್ ನಮ್ಮ ನಾಯಕ ಮತ್ತು ಅವರ ಪಕ್ಷದಲ್ಲಿ ನಾನು ಒಬ್ಬಳಾಗಿ ಉಳಿದಿರುತ್ತೇನೆ. ನನ್ನ ಜೀವನ ಮತ್ತು ನನ್ನ ಸಂಪೂರ್ಣ ರಾಜಕೀಯ ಜೀವನ ಅವರೊಂದಿಗೆ ಮಾತ್ರ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.