Public TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

Public TV Explainer | ಕಾಲ್ತುಳಿತ ದುರಂತದ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ – ಇನ್ಮುಂದೆ ಸಭೆ, ಸಮಾರಂಭಗಳಿಗೆ ಹೊಸ `SOP’

Public TV
Last updated: July 3, 2025 7:30 pm
Public TV
Share
6 Min Read
Stampede
SHARE

ಅತಿರೇಖದ ಅಭಿಮಾನ ಎಂತಹ ಅನಾಹುತಕ್ಕೀಡುಮಾಡುತ್ತದೆ ಅನ್ನೋದಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಐಪಿಎಲ್‌ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣವೇ (Chinnaswamy Stampede Case) ಸ್ಪಷ್ಟ ನಿದರ್ಶನವಾಗಿದೆ.

18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL) ರಾಯಲ್‌ ಚಾಜೆಂಜರ್ಸ್‌ ಬೆಂಗಳೂರು (RCB) ತಂಡ ಅಭಿಮಾನಿಗಳ ನಿರೀಕ್ಷೆಯಂತೆ 18 ವರ್ಷಗಳ ಕಠಿಣ ತಪಸ್ಸಿನ ಬಳಿಕ ಗೆದ್ದುಕೊಂಡಿತು. ಆ ದಿನ ಇಡೀ ರಾತ್ರಿ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೇಳುತ್ತಿದ್ದರು. ಕೆಲವರಂತೂ ಹುಚ್ಚೆದ್ದು ಕುಣಿಯುತ್ತಿದ್ದರು, ಆದ್ರೆ ಅಭಿಮಾನಿಗಳ ಈ ಖುಷಿ ಒಂದು ದಿನವೂ ಉಳಿಯಲಿಲ್ಲ. ಆರ್‌ಸಿಬಿ ತಂಡವನ್ನು ಸನ್ಮಾನಿಸುವ ಸಂಭ್ರಮಾಚರಣೆ ಕಾರ್ಯಕ್ರಮವು ಸೂತಕವಾಗಿ ಪರಿವರ್ತನೆಯಾಗಿತ್ತು. ಏಕೆಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಇದು ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿತ್ತು. ಪ್ರಧಾನಿ ಮೋದಿ, ರಾಷ್ಟ್ರಪತಿಗಳೂ ಸಂತಾಪ ಸೂಚಿಸಿದ್ದರು. ಇನ್ಮುಂದೆ ಇಂತಹ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿಬಂದಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಹೊಸ ಪ್ರಮಾಣಿಕೃತ ಕಾರ್ಯಾಚರಣೆ ವಿಧಾನ (SOP)ವನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಜನಸಂದಣಿ ನಿರ್ವಹಣೆಗಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.

Chinnaswamy Stampede

ಮಾರ್ಗಸೂಚಿಯ ಮುಖ್ಯ ಉದ್ದೇಶವೇನು?
ಹಬ್ಬಗಳು, ರ‍್ಯಾಲಿಗಳಿಂದ ಹಿಡಿದು ಕ್ರೀಡೆಗಳು, ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿರ್ವಹಣೆಗೆ ಸೂಕ್ತ ಕಾರ್ಯತಂತ್ರದ ಅಗತ್ಯವಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಕಾನೂನು ಮತ್ತು ಸುವ್ಯವಸ್ಥೆ (Law And Order) ಕಾಪಾಡಲು, ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಅಪಾಯಗಳನ್ನು ಕಡಿಮೆ ಮಾಡುವುದು, ಸಮನ್ವಯತೆ ಹೆಚ್ಚಿಸುವುದು, ತುರ್ತು ಪರಿಸ್ಥಿತಿಗಳಿಗೆ ತ್ವರಿತ ಪ್ರತಿಕ್ರಿಯೆಗಳನ್ನು ಖಚಿತಪಡಿಸಿಕೊಳ್ಳುವುದು. ಅಲ್ಲದೇ ದೊಡ್ಡ ದೊಡ್ಡ ಸಭೆಗಳನ್ನು ಒಳಗೊಂಡ ಕಾರ್ಯಕ್ರಮಗಳಿಗೆ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಯೋಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮೊದಲು ಮಾಡಬೇಕಾದ್ದು ಏನು?
* ಯಾವುದೇ ಸಭೆ, ಸಮಾರಂಭ, ರ‍್ಯಾಲಿ, ಮೆರವಣಿಗೆಗೆ ಮುನ್ನ ಜೀವ ಸುರಕ್ಷತೆ, ಮಾನವ ಹಕ್ಕುಗಳ ರಕ್ಷಣೆ, ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟುವಿಕೆ ಹಾಗೂ ಸಂಭಾವ್ಯ ಸಂಘರ್ಷಗಳ ಉಲ್ಬಣ ಕಡಿಮೆ ಮಾಡುವ ಕೆಲಸಗಳಿಗೆ ಆದ್ಯತೆ ನೀಡಬೇಕು.
* ಆಧುನಿಕ ಸಮಾರಂಭಗಳು ಸ್ವಯಂ ಪ್ರೇರಿತ ಮತ್ತು ಸೋಷಿಯಲ್‌ ಮೀಡಿಯಾ ಪ್ರೇರಿತವಾಗಿರುತ್ತವೆ. ಹಾಗಾಗಿ ಹೊಂದಾಣಿಕೆ ತಂತ್ರಗಳು ಅಗತ್ಯವಿರುತ್ತವೆ.
* ಕಾರ್ಯಕ್ರಮದ ಮುಂದಿನ ಯೋಜನೆಗಳೇನು? ಎಂಬುದನ್ನು ಪಾಲುದಾರರೊಂದಿಗೆ ಚರ್ಚಿಸಿ ಎಷ್ಟು ಭದ್ರತೆ ನಿಯೋಜಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

rcb stampede

ಪೂರ್ವ ತಯಾರಿ ಹೇಗಿರಬೇಕು?
* ಯಾವುದೇ ಬೃಹತ್‌ ಸಮಾರಂಭಗಳು ಆಯೋಜನೆಗೊಳ್ಳುತ್ತಿದ್ದಂತೆ ಪೂರ್ವತಯಾರಿ ಮಾಡಿಕೊಳ್ಳುವುದು ಅತ್ಯವಶ್ಯಕ. ಹಾಗಾಗಿ ಅಪಾಯ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ.
* ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಸ್ಥಳವನ್ನ ಸಂಪೂರ್ಣ ಪರಿಶೀಲನೆ ನಡೆಸಬೇಕು. ಆಯೋಜಕರ ಸಹಯೋಗದಿಂದಿಗೆ ವಿವರವಾದ ಯೋಜನೆಗಳನ್ನು ರೂಪಿಸಬೇಕು. ಜನ ಸಮೂಹದ ವರ್ತನೆಯನ್ನು ಪರಿಶೀಲಿಸಬೇಕು. ನಿರ್ಗಮನ ಮಾರ್ಗಗಳನ್ನು ಗುರುತಿಸುವ ಮೂಲಕ ಲಭ್ಯವಿರುವ ಪರಿಕರಗಳನ್ನ ಬಳಸಿಕೊಂಡು ಸಂಭಾವ್ಯ ಅವಘಡ ತಡೆಯಬೇಕು.
* ಸ್ಥಳ ಸಾಮರ್ಥ್ಯದ ಮಿತಿಗಳು, ಪ್ರವೇಶ ನಿರ್ಗಮನ ಮಾರ್ಗಗಳು, ತುರ್ತು ಸ್ಥಳಾಂತರಿಸುವ ಯೋಜನೆಗಳು ಮತ್ತು ಸಂವಹನ ಮೂಲ ಸೌಕರ್ಯ ಸೇರಿ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಬೇಕು.
* ಸುರಕ್ಷತಾ ಪರಿಶೀಲನೆಯಲ್ಲಿ ಸೂಕ್ತವಲ್ಲದ ಸ್ಥಳಗಳಲ್ಲಿ ಬೃಹತ್‌ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ನಿರಾಕರಿಸಬೇಕು.

Chinnaswamy Stadium Stampede

ಆಯೋಜಕರೊಂದಿಗೆ ಸಮನ್ವಯ
* ಪೊಲೀಸರು ಕಾರ್ಯಕ್ರಮದ ನಿರ್ಣಾಯಕ ವಿವರ ಸಂಗ್ರಹಿಸಲು ಆಯೋಜಕರೊಂದಿಗೆ ಸಂಪರ್ಕ ಸಾಧಿಸಬೇಕು.
* ಕಾರ್ಯಕ್ರಮದ ಸ್ವರೂಪ, ದಿನಾಂಕ, ಸಮಯ, ನಿರೀಕ್ಷಿತ ಜನ, ಆಗಮನ ಮತ್ತು ನಿರ್ಗಮನಗಳ ವ್ಯವಸ್ಥೆ ಎಲ್ಲರದ ಬಗ್ಗೆ ಮಾಹಿತಿ ಪಡೆಯಬೇಕು.
* ಜೊತೆಗೆ ಅಗ್ನಿಶಾಮಕ, ಆರೋಗ್ಯ ಸೇರಿ ಇತರೇ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಭೇಕು. ತುರ್ತು ಸೇವೆಗಳು ಮತ್ತು ಪರಸ್ಪರ ಸಹಾಯ ಲಭ್ಯತೆ ಬಗ್ಗೆ ಪರಿಶೀಲಿಸಬೇಕು.

rcb bengaluru stampede

ಜನಸಂದಣಿ ಮತ್ತು ನಿರ್ವಹಣಾ ಯೋಜನೆ ಅಭಿವೃದ್ಧಿ ಹೇಗೆ?
* ಬೃಹತ್‌ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ಅವರ ಜವಾಬ್ದಾರಿ ಸ್ಪಷ್ಟಪಡಿಸಬೇಕು.
* ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಲ್ಲಿ ತರಬೇತಿ ಪಡೆದ ಪೊಲೀಸರನ್ನು ನಿಯೋಜಿಸಬೇಕು. ಅಲ್ಲದೇ ತುರ್ತು ಪ್ರತಿಕ್ರಿಯೆ ಯೋಜನೆಗಳು, ಸ್ಥಳಾಂತರಿಸುವ ಮಾರ್ಗಗಳು ಹಾಗೂ ವೈದ್ಯಕೀಯ ನೆರವಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು.
* ಎಲ್ಲಾ ನಿಯೋಜಿತ ಏಜೆನ್ಸಿಗಳೊಂದಿಗೆ ಸಮನ್ವಯತೆ ಕಾಯ್ದುಕೊಳ್ಳಬೇಕು. ಪ್ರವೇಶವನ್ನು ಸುಗಮಗೊಳಿಸಲು ಡಿಜಿಟಲ್‌ ಟಿಕೆಟಿಂಗ್‌ ಮತ್ತು ಕಾಯ್ದಿರಿಸಿದ ಆಸನಗಳನ್ನು ಬಳಕೆ ಮಾಡಿಕೊಳ್ಳಬೇಕು.

ಜನಸಂದಣಿ ನಿಯತ್ರಿಸುವುದು ಹೇಗೆ?
* ಪ್ರಮುಖವಾಗಿ ಜನಸಂದಣಿ ನಿಯಂತ್ರಿಸಲು ಪ್ರವೇಶದ್ವಾರಗಳು, ನಿರ್ಗಮನ ದ್ವಾರಗಳಲ್ಲಿ ತರಬೇತಿ ಪಡೆದ ಪೊಲೀಸ್‌ ಸಿಬ್ಬಂದಿಯನ್ನ ನಿಯೋಜಿಸಬೇಕು. ಅದಕ್ಕೂ ಮುನ್ನ ಜನಸಂದಣಿ, ತುರ್ತು ಸಂವಹನ ಮತ್ತು ಶಿಷ್ಟಾಚಾರಗಳ ಬಗ್ಗೆ ಎಲ್ಲಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
* ಪ್ರವೇಶ ದ್ವಾರಗಳ ಬಳಿ ಲೋಹ ಶೋಧಕಗಳು, ಕ್ಯೂಆರ್‌ ಕೋಡ್‌, ಸ್ಕ್ಯಾನಿಂಗ್‌, ಬಯೋಮೆಟ್ರಿಕ್‌ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು, ಸಿಬ್ಬಂದಿ, ವಿಐಪಿಗಳಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಬೇಕು.
* ನೂಕುನುಗ್ಗಲು ಉಂಟಾಗದಂತೆ ಸರತಿ ಸಾಲು ನಿರ್ವಹಿಸಬೇಕು. ಬ್ಯಾರಿಕೇಡ್‌ಗಳ ಬಳಕೆ, ಸೂಚನಾ ಫಲಕಗಳನ್ನು ಬಳಸಿಕೊಳ್ಳಬೇಕು. ಅಂಬುಲೆನ್ಸ್‌ಗಳ ಪಾರ್ಕಿಂಗ್‌ ವ್ಯವಸ್ಥೆ, ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಕು.
* ವಿಶೇಷ ಚೇತನರು ಪ್ರವೇಶಿಸಬಹುದಾದ ಮಾರ್ಗಗಳನ್ನು ಮೊದಲೇ ಗೊತ್ತುಪಡಿಸಬೇಕು. ಎಲ್ಲಾ ತುರ್ತು ನಿರ್ಗಮನಗಳನ್ನು ಸ್ಪಷ್ಟವಾಗಿ ಗುರುತಿಸಿ ಮತ್ತು ಅಲ್ಲಿ ಯಾವುದೇ ಅಡೆತಡೆಗಳಿಲ್ಲದಂತೆ ನೋಡಿಕೊಳ್ಳಬೇಕು.
* ಸಾರ್ವಜನಿಕ ವಿಳಾಸ ವ್ಯವಸ್ಥೆಗಳು ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

Chinnaswamy Stampede 1

ಜವಾಬ್ದಾರಿ ಹಂಚಿಕೆ ಹೇಗಿರಬೇಕು?
* ಕಾಲ್ತುಳಿತದಂತಹ ಪ್ರಕರಣಗಳನ್ನು ತಪ್ಪಿಸಲು ಜವಾಬ್ದಾರಿ ಹಂಚಿಕೆ ಮತ್ತು ಆಜ್ಞೆಯ ರಚನೆ (ಕಮಾಂಡ್‌ ಸ್ಟ್ರಕ್ಚರ್) ಮುಖ್ಯವಾಗುತ್ತದೆ. ಹಾಗಾಗಿ ಪ್ರವೇಶ, ನಿರ್ಗಮನ ಮತ್ತು ಜನಸಂದಣಿ ಹರಿವು ಹೆಚ್ಚಿರುವ ನಿರ್ದಿಷ್ಟ ವಲಯಗಳಿಗೆ ಅಧಿಕಾರಿಗಳನ್ನು ನಿಯೋಜಿಸಬೇಕು.
* ಸಮಸ್ಯೆಗಳು ಉಲ್ಪಣವಾಗದಂತೆ ಸ್ಪಷ್ಟ ನಿರ್ದೇಶನಗಳನ್ನ ನೀಡಬೇಕು.
* ಪೊಲೀಸ್‌ ಆಯುಕ್ತರು/ಎಸ್ಪಿ ಅನುಮೋದಿಸಿದ ಲಿಖಿತ ಕಾರ್ಯಾಚರಣೆಯ ಯೋಜನೆಯನ್ನು ಅಭಿವೃದ್ಧಿಪಡಿಸಿ ಪ್ರಸಾರ ಮಾಡಬೇಕು.
* ಸಿಬ್ಬಂದಿ ನಿಯೋಜನೆ, ಬಾಹ್ಯ ಸಂಪರ್ಕ, ಹವಾಮಾನ ಮೌಲ್ಯಮಾಪನ, ಸಾರಿಗೆ ಲಾಜಿಸ್ಟಿಕ್ಸ್, ಮಾಧ್ಯಮ ಪ್ರೋಟೋಕಾಲ್‌ಗಳು ಇತ್ಯಾದಿಗಳನ್ನು ಒಳಗೊಂಡಿರಬೇಕು.

ತುರ್ತು ಸಿದ್ಧತೆ ಹೇಗಿರಬೇಕು?
* ಬೆಂಕಿ, ಕಾಲ್ತುಳಿತ ಇನ್ನಿತರ ಅವಘಡಗಳ ನಿಯಂತ್ರಣಕ್ಕೆ ತುರ್ತು ಸಿದ್ಧತೆ ಮಾಡಿಕೊಳ್ಳಬೇಕು, ಇದಕ್ಕಾಗಿ ತರಬೇತಿ ಮತ್ತು ಅಣುಕು ಪ್ರದರ್ಶನ (ಸಿಮ್ಯುಲೇಷನ್ ಡ್ರಿಲ್) ಕೈಗೊಳ್ಳುವ ಮೂಲಕ ರಕ್ಷಣಾ ತಂಡಗಳ ಜವಾಬ್ದಾರಿಗಳನ್ನು ಮೊದಲೇ ಗುರುತಿಸಬೇಕು.
* ಯಾವುದೇ ಘಟನೆಯ ಸಮಯದಲ್ಲಿ ಪೊಲೀಸರು ಅನಗತ್ಯ ತಕರಾರುಗಳನ್ನು ತಪ್ಪಿಸಿ ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡಬೇಕು.

ಜನಸಂದಣಿ ಪ್ರೋಟೋಕಾಲ್‌
* ಹಿಂಸಾತ್ಮಕ ಅಥವಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳನ್ನು ಮಾತ್ರ ಪ್ರತ್ಯೇಕಿಸಿ ಬಂಧಿಸಬೇಕು.
* ತುರ್ತು ನಿರ್ಗಮನ ಮಾರ್ಗಗಳನ್ನು ಸ್ಪಷ್ಟವಾಗಿ ಗುರುತಿಸಬೇಕು ಮತ್ತು ಯಾವುದೇ ಸಂದರ್ಭದಲ್ಲೂ ಲೌಡ್‌ ಸ್ಪೀಕರ್‌ಗಳ ಮೂಲಕ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಹೊಂದಿರಬೇಕು.
* ಪೂರ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ ಮಾತ್ರವೇ ಕನಿಷ್ಠ ಮತ್ತು ಅಗತ್ಯ ಪ್ರಮಾಣದಲ್ಲಿ ಬಲಪ್ರಯೋಗ ಮಾಡಬೇಕು.
* ಜನಸಂದಣಿ ನಿಯಂತ್ರಿಸಲು ಅಥವಾ ಚದುರಿಸಲು 3 ಬಾರಿ ಎಚ್ಚರಿಕೆ ನೀಡಿದ ನಂತರವೇ ಪೊಲೀಸ್‌ ಸಿಬ್ಬಂದಿ ಬಳಸಬೇಕು. ನಂತರ ಕಾನೂನು ರೀತಿಯ ಬಂಧನಕ್ಕೆ ಮುಂದಾಗಬೇಕು.
* ಸಮಯೋಚಿತವಾಗಿ ಕ್ಷೇತ್ರ ಅಧಿಕಾರಿಗಳ ಜೊತೆಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು.

Mumbai Police 2

ಅರೆಸ್ಟ್‌ ಮಾಡಲು ಯಾರಿಗೆ ಅವಕಾಶ?
* ಇಂತಹ ಸಂದರ್ಭದಲ್ಲಿ ಮುಂಚಿತವಾಗಿಯೇ ನಿಯೋಜಿಸಲಾದ ತಂಡದ ಅಧಿಕಾರಿಗಳಿಗೆ ಮಾತ್ರ ಬಂಧನ ಮಾಡುವ ಅವಕಾಶವಿರುತ್ತದೆ.
* ಬಂಧಿಸಿದ ಬಳಿಕ ಆರೋಪಗಳ ಬಗ್ಗೆ ಬಂಧಿತರಿಗೆ ಮನವರಿಕೆ ಮಾಡಬೇಕು, ಶಸ್ತ್ರಾಸ್ತ್ರಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಬೇಕು.
* ಜೊತೆಗೆ ಬಂಧಿತರನ್ನು ಸುರಕ್ಷಿತವಾಗಿಡಲು ಪ್ರತ್ಯೇಕ ಪ್ರದೇಶ ಗುರುತಿಸಬೇಕು.
* ಬಂಧಿತರಿಂದ ವಶಪಡಿಸಿಕೊಂಡ ಆಸ್ತಿ ಮತ್ತು ಗಾಯಗೊಂಡ ವಿವರಗಳನ್ನು ದಾಖಲಿಸಬೇಕು.

ದಾಖಲೆ ಮತ್ತು ಮೇಲ್ವಿಚಾರಣೆ ಪ್ರಕ್ರಿಯೆ ಅಗತ್ಯವೇ?
* ಭವಿಷ್ಯದ ಸುಧಾರಣೆಗಾಗಿ ಜನಸಂದಣಿಯ ಸಂಚಾರ, ತೆಗೆದುಕೊಂಡ ನಿರ್ಧಾರಗಳು ಮತ್ತು ನೀಡಿದ ಎಚ್ಚರಿಕೆಗಳನ್ನು ಆಡಿಯೋ/ವಿಡಿಯೋ ದಾಖಲೆಗಳ ಮೂಲಕ ದಾಖಲಿಸಬೇಕು.
* ಜೊತೆಗೆ ಭವಿಷ್ಯದ ಕಾರ್ಯಾಚರಣೆಗಳನ್ನು ಸುಧಾರಿಸಲು ನಿಯೋಜಿತ ಕಾರ್ಯಕ್ರಮ ನಂತರ ವಿಮರ್ಷೆ ಮಾಡಬೇಕು.

ಭಾರೀ ಜನಸಂದಣಿ ಸೇರುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ಹಾಗೂ ಸಾವುನೋವಿಗೆ ಕಾರಣವಾಗಬಹುದಾದ ಕಾಲ್ತುಳಿತ ಸಂಭವಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ವಿವಿಧ ಉದ್ದೇಶಗಳಿಂದ ನಡೆಯುವ ಸಮಾವೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದಿದೆ. ಲಕ್ಷಾಂತರ ಮಂದಿ ಸೇರುವ ಜಾತ್ರೆಗಳು ನಾಡಿನ ವಿವಿಧ ಭಾಗಗಳಲ್ಲಿ ನಡೆಯುತ್ತವೆ. ಹೀಗಾಗಿ ಜನಸಂದಣಿ ನಿರ್ವಹಿಸುವುದರ ಜೊತೆಗೆ ದುರ್ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಹೊಸ ʻಎಸ್‌ಒಪಿʼ ಜಾರಿಗೆ ತಂದಿರುವುದು ಮಹತ್ವದ ಕ್ರಮ. ಆದರೆ, ಈ ಮಾರ್ಗಸೂಚಿ ಕಡತದಲ್ಲಷ್ಟೇ ಉಳಿಯದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿಯನ್ನು ಇಲಾಖೆ ಪ್ರದರ್ಶಿಸಬೇಕು ಅನ್ನೋದು ಜನರ ಆಶಯ.

TAGGED:bengaluruBengaluru PoliceChinnaswamy Stampede CasePolice Guidelinesಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಪೊಲೀಸ್‌ ಮಾರ್ಗಸೂಚಿಬೆಂಗಳೂರುಬೆಂಗಳೂರು ಪೊಲೀಸ್
Share This Article
Facebook Whatsapp Whatsapp Telegram

Cinema news

DK Shivakumar Rishab Shetty
ನಮ್ಮ ಸಂಸೃತಿಯನ್ನ ಪ್ರಪಂಚಕ್ಕೆ ಪರಿಚಯಿಸಿರುವ ರಿಷಬ್‌ ಶೆಟ್ಟಿ ಕಾರ್ಯವೈಖರಿ ಶ್ಲಾಘನೀಯ: ಡಿಕೆಶಿ
Cinema Latest Sandalwood Top Stories
Samantha
ಬಾಯ್‌ಫ್ರೆಂಡ್ ಜೊತೆ ವಿಮಾನ ಹತ್ತಿದ ಸಮಂತಾ
Cinema Latest South cinema Top Stories
Nandagokula Serial 2
`ನಂದ ಗೋಕುಲ’ ಧಾರಾವಾಹಿಯಲ್ಲಿ ಸಖತ್ ತಿರುವು
Cinema Latest TV Shows
Birth centenary celebrations of Sri Sathya Sai Baba at Puttaparthi Aishwarya Rai touches PM Narendra Modis feet
ಮೋದಿ ಪಾದವನ್ನು ಮುಟ್ಟಿ ನಮಸ್ಕರಿಸಿದ ಐಶ್ವರ್ಯಾ ರೈ ಬಚ್ಚನ್‌
Cinema Latest National Top Stories

You Might Also Like

Bengaluru Health 2
Bengaluru City

ಮೈಸೂರು, ಮಂಡ್ಯ ಬಳಿಕ ಬೆಂಗಳೂರಿಗೂ ಕಾಲಿಟ್ಟ ಭ್ರೂಣಲಿಂಗ ಪತ್ತೆ ಜಾಲ!

Public TV
By Public TV
7 hours ago
ATM Robbed
Bengaluru City

ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್‌ – ಸಿದ್ದಾಪುರ ಠಾಣೆಯಲ್ಲಿ FIR ದಾಖಲು

Public TV
By Public TV
7 hours ago
Navabrindava
Districts

ನವಬೃಂದಾವನ ಗಡ್ಡೆಯ ವಿವಾದ ನಿವಾರಣೆಗೆ ಉಭಯ ಮಠದ ಶ್ರೀಗಳ ಸಮಾಗಮ

Public TV
By Public TV
8 hours ago
AICC MALLIKARJUN KHARGE SONIA GANDHI RAHUL GANDHI
Latest

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ? – ಒಡೆದು ಚೂರಾಯ್ತಾ ʻಇಂಡಿಯಾʼ ಒಕ್ಕೂಟ?

Public TV
By Public TV
8 hours ago
kea
Bengaluru City

ಡಿ.27, 28 ಕೆಪಿಸಿಎಲ್ ಮರುಪರೀಕ್ಷೆ: ಕೆಇಎ

Public TV
By Public TV
8 hours ago
Delhi Blast Umar
Crime

Delhi Blast | ಕಾರಿನಲ್ಲೇ ಕುಳಿತು ಬಾಂಬ್ ರೆಡಿ ಮಾಡಿದ್ದ ಉಗ್ರ ಉಮರ್

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?