ಬೆಂಗಳೂರು: ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ವಾರ ಕಳೆದಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಇರುವ ಇಂದಿರಾ ಕ್ಯಾಂಟೀನ್‍ಗೆ ಇದು ಅನ್ವಯಿಸಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟಿನ್ ಹೆಸರು ಹಾಗೂ ಇಂದಿರಾ ಭಾವಚಿತ್ರ ಮುಚ್ಚುವಂತೆ ಚುನಾವಣಾ ಆಯೋಗಕ್ಕೆ ಸಾರ್ವಜನಿಕರೊಬ್ಬರು ದೂರು ನೀಡಿದ್ದಾರೆ.
ಬೆಂಗಳೂರಿನ ಚಂದ್ರು ಎಂಬವರು ದೂರು ಕೊಟ್ಟಿದ್ದು, ಜ್ಯೋತಿಷ್ಯ ಮಂದಿರದಲ್ಲಿದ್ದ ಹಸ್ತವನ್ನು ಕೂಡ ಮುಚ್ಚಲಾಗುತ್ತಿದೆ. ಅಲ್ಲದೆ ಕುಡಿಯುವ ನೀರಿನ ಘಟಕ, ಸೇರಿದಂತೆ ಎಲ್ಲಡೆ ರಾಜಕೀಯ ಮುಖಂಡರ ಬ್ಯಾನರ್ ತೆರವು ಮಾಡಲಾಗಿದೆ. ಹೀಗಿರುವಾಗ ಒಂದು ಪಕ್ಷವನ್ನು ಸೂಚಿಸುವ ಇಂದಿರಾ ಕ್ಯಾಂಟೀನ್ ಹೆಸರು ಹಾಗೂ ಭಾವಚಿತ್ರವನ್ನು ಮುಚ್ಚಿಲ್ಲ ಯಾಕೆ ಎಂದು ಚಂದ್ರು ಆಯೋಗವನ್ನ ಪ್ರಶ್ನಿಸಿದ್ದಾರೆ.
Advertisement
Advertisement
ಇತ್ತ ಕರವೇ ಅಧ್ಯಕ್ಷ ಜಯರಾಮ್ ನಾಯ್ಡು, ಚಿತ್ರ ನಟರು ಬಹಿರಂಗವಾಗಿ ಒಬ್ಬರ ಪರ ಮತ ಯಾಚಿಸುತ್ತಿದ್ದಾರೆ. ಹಾಗಾಗಿ ಚುನಾವಣಾ ಮುಗಿಯುವವರೆಗೂ ಅವರ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.