ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಧ್ಯಪ್ರದೇಶದ (Madhya Pradesh) ಅದ್ದೂರಿಯಿಂದ ಸಾಗುತ್ತಿರುವ ಹೊತ್ತಿನಲ್ಲಿಯೇ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಆಪ್ತ ಸಹಾಯಕ ನರೇಂದ್ರ ಸಲೂಜಾ (Narendra Saluj) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕಮಲ್ ನಾಥ್ ಅವರ ಮಾಜಿ ಮಾಧ್ಯಮ ಸಲಹೆಗಾರರಾಗಿರುವ ನರೇಂದ್ರ ಸಲೂಜಾ ಅವರು, ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡರು. ಇದನ್ನೂ ಓದಿ: ಫುಟ್ ಬೋರ್ಡ್‍ನಲ್ಲಿ ವಿದ್ಯಾರ್ಥಿಗಳ ಪ್ರಯಾಣ – ಬಸ್ ಸಿಬ್ಬಂದಿಗೆ 25 ಸಾವಿರ ರೂ. ದಂಡ
ನವೆಂಬರ್ 8 ರಂದು ಇಂದೋರ್‍ನ ಖಾಲ್ಸಾ ಕಾಲೇಜಿನಲ್ಲಿ ನಡೆದ ಸಿಖ್ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಮಲ್ ನಾಥ್ ಅವರನ್ನು ಸಂಘಟಕರು ಸನ್ಮಾನಿಸಿದೇ ಇದ್ದಿದ್ದರಿಂದ ಗದ್ದಲ ಎದ್ದಿತ್ತು. ನಂತರ ಕಮಲ್‍ನಾಥ್ ಸ್ಥಳದಿಂದ ನಿರ್ಗಮಿಸಿದರು. ಬಳಿಕ ಸಲೂಜಾ ಅವರನ್ನು ಆಹ್ವಾನಿಸಿದ್ದಕ್ಕಾಗಿ ಸಂಘಟಕರ ವಿರುದ್ಧ ಖ್ಯಾತ ಕೀರ್ತನ ಗಾಯಕ ಮನ್‍ಪ್ರೀತ್ ಸಿಂಗ್ ಕಾನ್ಪುರಿ ವಾಗ್ದಾಳಿ ನಡೆಸಿದ್ದರು. ಇದರಿಂದ ಇಬ್ಬರ ನಡುವೆ ಬಿರುಕು ಹೆಚ್ಚಾಯಿತು. ಇದನ್ನೂ ಓದಿ: ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹವನ್ನು ಅಂಗೀಕರಿಸಿ: ಸುಪ್ರೀಂಕೋರ್ಟ್‍ಗೆ ಅರ್ಜಿ