ಚೆನ್ನೈ: ಶಾಲೆಯಲ್ಲಿ ವಿದ್ಯಾರ್ಥಿನಿಯರು ಕಾಲಿನ ಗೆಜ್ಜೆ ಧರಿಸಿದ್ರೆ, ಹುಡುಗರ ಮನಸ್ಸು ಕದಡುತ್ತೆ ಎಂದು ತಮಿಳುನಾಡು ಶಿಕ್ಷಣ ಮಂತ್ರಿ ಕೆ.ಎ.ಸೆಂಗೌಟಯ್ಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿಕ್ಷಣ ಮಂತ್ರಿಗಳು ತಮ್ಮ ವಿಧಾನಸಭಾ ಕ್ಷೇತ್ರದ ಗೋಬಿಚೆಟ್ಟಿಪಾಲಯಂ ನಲ್ಲಿ ನಡೆದ ಸೈಕಲ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡಿದ ಸಚಿವರು, ವಿದ್ಯಾರ್ಥಿನಿಯರು ಕಾಲಿನಲ್ಲಿ ಗೆಜ್ಜೆ ಹಾಕುವುದರಿಂದ ಅದರ ಸದ್ದಿನಿಂದ ವಿದ್ಯಾರ್ಥಿಗಳ ಪಠ್ಯದಲ್ಲಿನ ಏಕಾಗ್ರತೆ ಹಾಳಾಗುತ್ತದೆ. ಇನ್ನು ಉಂಗರು ಧರಿಸಿದ್ರೆ ಕಳೆದು ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಕಾಲ್ಗೆಜ್ಜೆ ಮತ್ತು ಉಂಗುರ ಎರಡನ್ನು ಶಾಲೆಯಲ್ಲಿ ನಿಷೇಧಿಸಿಬೇಕಿದೆ. ವಿದ್ಯಾರ್ಥಿನಿಯರು ಹೂ ಧರಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಅಂತಾನೂ ಹೇಳಿದರು.
Advertisement
Advertisement
Advertisement
ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹುಡುಗಿಯರಿಗೆ ಮಾತ್ರ ಯಾಕೆ ನಿಯಮಗಳು. ಹುಡುಗರು ಶಾಲೆಗಳಿಗೆ ಉದ್ದ ಕೂದಲು ಬಿಟ್ಟುಕೊಂಡು ಬರುತ್ತಾರೆ. ಸ್ಟೈಲಿಶ್ ಬಟ್ಟೆ ಧರಿಸುತ್ತಾರೆ. ಅವರಿಗಿಲ್ಲದ ನಿಯಮ ನಮಗ್ಯಾಕೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
Advertisement
ಸಚಿವರು ಕೇವಲ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಾಲಗೆಜ್ಜೆ ಧರಿಸದಂತೆ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ತಮಿಳುನಾಡು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv