ಭಾರತ (India) ಜೀವವೈವಿಧ್ಯದ ತಾಣವಾಗಿದ್ದು, ವಿದೇಶಿ ಹಕ್ಕಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನೂ ಕರ್ನಾಟಕದಲ್ಲಿ ಗುರುತಿಸಲಾಗಿರುವ 530ಕ್ಕೂ ಹೆಚ್ಚಿನ ಪಕ್ಷಿ ಪ್ರಬೇಧಗಳಲ್ಲಿ ಸುಮಾರು 80ರಷ್ಟು ಪ್ರಬೇಧಗಳು ವಲಸೆ ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಯೂರೋಪ್, ಮಂಗೋಲಿಯಾ, ಸೈಬೀರಿಯಾ, ರಷ್ಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮುಂತಾದ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುವ ಹಕ್ಕಿಗಳ (Migratory Birds) ಸಂಖ್ಯೆ ಹೆಚ್ಚು. ಈ ಹಕ್ಕಿಗಳೆಲ್ಲ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಬರುವ ವಲಸೆ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೇ ವಲಸೆಯ ಅವಧಿ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.
Advertisement
Advertisement
ಆಗಸ್ಟ್ 25 ರಂದು ಸುಮಾರು 30,000 ಪಕ್ಷಿ ವೀಕ್ಷಕರ ದತ್ತಾಂಶವನ್ನು ಆಧರಿಸಿ ಬಿಡುಗಡೆಯಾದ ವರದಿಯ ಪ್ರಕಾರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಿ ಪ್ರಭೇದಗಳು ಕ್ಷೀಣಿಸುತ್ತಿವೆ. ಮೌಲ್ಯಮಾಪನ ಮಾಡಲಾದ 942 ಪಕ್ಷಿ ಪ್ರಭೇದಗಳಲ್ಲಿ 142 ಪಕ್ಷಿಗಳು ಕ್ಷೀಣಿಸುತ್ತಿವೆ ಎಂದು ವರದಿಯಾಗಿದೆ.
Advertisement
ವಲಸೆ ಅಧ್ಯಯನ ಹೇಗೆ ಮಾಡಲಾಗುತ್ತದೆ?
Advertisement
ವಲಸೆ ಹಕ್ಕಿಗಳ ಜೀವನಕ್ರಮವನ್ನು ಅಧ್ಯಯನ ಮಾಡಲು ವಿಶ್ವದಾದ್ಯಂತ ವಿಜ್ಞಾನಿಗಳು ನಿರಂತರ ಪ್ರಯತ್ನದಲ್ಲಿದ್ದಾರೆ. ವಿಶ್ವದ ಹಲವಾರು ವೈಜ್ಞಾನಿಕ ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆಗಳು ವಲಸೆ ಅಧ್ಯಯನಕ್ಕಾಗಿ ಸಂಶೋಧನಾ ಉಪಕರಣಗಳನ್ನು ಅಭಿವೃದ್ಧಿ ಪಡಿಸಿವೆ.
ಇತ್ತೀಚಿನ ವರ್ಷಗಳಲ್ಲಿ ವಲಸೆ ಅಧ್ಯಯನಕ್ಕೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಅದರಲ್ಲಿ ಪ್ರಮುಖವಾದದ್ದು ಉಪಗ್ರಹ-ಆಧಾರಿತ ರೇಡಿಯೋ ಟೆಲಿಮೆಟ್ರಿ. ಇದು ಹಕ್ಕಿಗಳ ಗಾತ್ರ, ಆಕಾರ, ಜೀವನ ಶೈಲಿ, ಹಾರುವ ರೀತಿ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಡೆಸುವ ಅಧ್ಯಯನಕ್ಕೆ ಅನುಕೂಲವಾಗಿದೆ.
ಹಕ್ಕಿಗಳ ಅಧ್ಯಯನಕ್ಕೆ ಕಾಲಿನಲ್ಲಿ ಅಳವಡಿಸುವ ಕಾಲುಂಗುರದಂತಹ ಮೈಕ್ರೋಚಿಪ್, ಕುತ್ತಿಗೆಯಲ್ಲಿ ಅಳವಡಿಸುವ ಪಟ್ಟಿ ಮತ್ತು ಬೆನ್ನಮೇಲೆ ಅಳವಡಿಸುವ ಪುಟ್ಟ ಕ್ಯಾಮೆರಾ ಒಳಗೊಂಡ ಉಪಕರಣಗಳು ಅಭಿವೃದ್ಧಿಗೊಂಡಿವೆ. ಉಪಗ್ರಹಗಳ ಮೂಲಕ ಹಕ್ಕಿಯ ಚಲನವಲನಗಳ ಮಾಹಿತಿ ಪ್ರತಿಕ್ಷಣ ಸಿಗುವಂತಹ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಅಧುನಿಕ ಕಂಪ್ಯೂಟರ್ಗಳನ್ನು ಬಳಸಿ ಹಕ್ಕಿಯ ವಲಸೆಯನ್ನು ಅಭ್ಯಸಿಸಲಾಗುತ್ತಿದೆ. ಭಾರತದಲ್ಲಿ ಉಪಗ್ರಹ ಆಧಾರಿತ ರೇಡಿಯೋ ಟೆಲಿಮೆಟ್ರಿ ವಿಧಾನವನ್ನು ಉಪಯೋಗಿಸಿ ನಡೆಸುವ ಅಧ್ಯಯನ ಬಹಳ ಕಡಿಮೆ.
ವಲಸೆ ಬರುವ ಹಕ್ಕಿಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು?
ಹವಾಮಾನ ವೈಪರೀತ್ಯ (Climate Change), ಭೂ ತಾಪಮಾನ ಏರಿಕೆ. ಮನುಷ್ಯರನ್ನೊಳಗೊಂಡಂತೆ ಬೇಟೆಗಾರ ಪ್ರಾಣಿಗಳು, ಆವಾಸ ಸ್ಥಾನಗಳ ಕೊರತೆ, ಆಹಾರದ ಕೊರತೆ, ಕೃಷಿಭೂಮಿ ಮತ್ತು ಕಾಡನ್ನು ನಾಶ ಮಾಡಿ ನಗರೀಕರಣ, ಕೈಗಾರಿಕೀಕರಣ, ವಲಸೆ ಸಮಯದಲ್ಲಿ ಕೆರೆಗಳಲ್ಲಿ ಮೀನುಗಾರಿಕೆಯಿಂದ ಆಗುವ ತೊಂದರೆಗಳಿಂದ ವಲಸೆ ಬರುವ ಹಕ್ಕಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.
ಸಾಮಾನ್ಯವಾಗಿ 80ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳು ಅಕ್ಟೋಬರ್ ವೇಳೆಗೆ ದೆಹಲಿ ಎನ್ಸಿಆರ್ ಪ್ರದೇಶದ ಜೌಗು ಪ್ರದೇಶಗಳಿಗೆ ಈ ಪ್ರದೇಶಕ್ಕೆ ಆಗಮಿಸುತ್ತವೆ. ಸುಮಾರು 40 ಜಾತಿಯ ವಲಸಿಗ ಹಕ್ಕಿಗಳು ಈ ಪ್ರದೇಶದಲ್ಲಿ ತಂಗುತ್ತವೆ. ಆದರೆ ವಾತಾವರಣದ ಬದಲಾವಣೆಯಿಂದ ವಲಸೆ ಹಕ್ಕಿಗಳು ಬರುವುದು ವಿಳಂಬವಾಗುತ್ತಿದೆ. ನವೆಂಬರ್ನಲ್ಲೂ ಸಹ ಈ ಜಾಗ ಸಾಕಷ್ಟು ಬೆಚ್ಚಗಿರುತ್ತದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದು ವಲಸೆ ಹಕ್ಕಿಗಳ ಮೇಲೆ ಪ್ರಭಾವ ಬೀರಿದೆ.
ಕರ್ನಾಟಕದ ವಲಸೆ ಹಕ್ಕಿಗಳ ತಾಣ
ರಂಗನತಿಟ್ಟು, ಗುಡವಿ, ಅಂಕಸಮುದ್ರ ಪಕ್ಷಿ ಧಾಮಗಳು, ಹಗರಿಬೊಮ್ಮನ ಹಳ್ಳಿಯ ತುಂಗಭದ್ರಾ, ಕಬನಿ, ಅಲಮಟ್ಟಿ ಹಿನ್ನೀರು ಪ್ರದೇಶಗಳು, ಮಂಗಳೂರು, ಉಡುಪಿ, ಮಲ್ಪೆ, ಕಾರವಾರ ಸಮುದ್ರ ತೀರಗಳು ಅಲ್ಲದೇ ಮೈಸೂರು, ದಾವಣಗೆರೆ, ತುಮಕೂರು, ಬೆಂಗಳೂರಿನ ಕೆರೆಗಳಲ್ಲಿ ವಲಸೆ ಹಕ್ಕಿಗಳು ಹೆಚ್ಚಾಗಿ ಕಂಡುಬರುತ್ತವೆ.
ಕರ್ನಾಟಕದಲ್ಲಿ ದಾಖಲಾಗಿರುವ ವಲಸೆ ಹಕ್ಕಿಗಳೆಂದರೆ ಮಂಗೋಲಿಯಾದ ಪಟ್ಟೆ ಹೆಬ್ಬಾತು, ಯೂರೋಪಿನ ಉಲಿಯಕ್ಕಿಗಳು, ಕಂದು ಬಾತು. ನಾಮದ ಬಾತು. ಬಿಳಿಹುಬ್ಬಿನ ಬಾತು, ಚಲುಕ ಬಾತು, ವಿವಿಧ ಬಗೆಯ ಗೊರವಗಳು, ರಷ್ಯಾದ ಉಲ್ಲಂಕಿಗಳು, ಸೈಬೀರಿಯಾದ ಕಲ್ಲುಚಟಕ ಹಕ್ಕಿ, ಉತ್ತರ ಭಾರತದ ನವರಂಗ, ವಿವಿಧ ನೊಣಹಿಡುಕಗಳು, ಹೆಜ್ಜಾರ್ಲೆ ಮುಂತಾದ ಹಕ್ಕಿಗಳು ಕಂಡು ಬರುತ್ತವೆ.
ವಲಸೆ ಹಕ್ಕಿಗಳಿಗೆ ದಿಕ್ಕು, ಸ್ಥಳ ಗುರುತಿಸೋಕೆ ಇದೆ ಸೂಪರ್ ಪವರ್!
ಹಕ್ಕಿಗಳು ನಕ್ಷತ್ರಗಳು ಕಾಣುವ ದಿಕ್ಕು ಮತ್ತು ಸಮಯವನ್ನು ಅಂದಾಜಿಸಿ ಹಕ್ಕಿಗಳು ಸಂಚರಿಸುತ್ತವೆ. ಕೆರೆ, ನದಿ, ಗುಡ್ಡ, ಬೆಟ್ಟ, ಸಮುದ್ರ ಮುಂತಾದವುಗಳನ್ನು ನೋಡಿ ತಮ್ಮ ಕಣ್ಣಿನ ಅಥವಾ ಮೂಗಿನ ಬುಡದಲ್ಲಿ ವಿಶೇಷವಾದ ಮ್ಯಾಗ್ನಟೈಟ್ ಎಂಬ ಕಬ್ಬಿಣದ ಅಂಶವಿರುವ ಪ್ರೊಟೀನ್ ಅನ್ನು ದಿಕ್ಕೂಚಿಯಂತೆ ಬಳಸಿ ಭೂಮಿಯ ಆಯಸ್ಕಾಂತ ಶಕ್ತಿಯನ್ನು ಗುರುತಿಸಿ ತಾವು ಕ್ರಮಿಸುವ ದಿಕ್ಕನ್ನು ನಿರ್ಧರಿಸುತ್ತವೆ.
ಒಡಿಶಾದ ಪ್ರಮುಖ ಪಕ್ಷಿಧಾಮಗಳಿಗೆ ಬಂದ ವಲಸೆ ಹಕ್ಕಿಗಳ ಅಂಕಿ ಅಂಶ
ಚಿಲಿಕಾ
2024 – 189 ಜಾತಿಗಳ 11,37,759
2023 – 1,844 ಜಾತಿಗಳು 11,31,929
2021-22 – 107 ಜಾತಿಗಳ 10.74 ಲಕ್ಷ
2020-21 – 111 ಜಾತಿಗಳ 12.04 ಲಕ್ಷ
2019-20 – 109 ಜಾತಿಗಳ 10.71 ಲಕ್ಷ
2018-19 – 105 ಜಾತಿಗಳ 10.21 ಲಕ್ಷ
2017-18 – 95 ಜಾತಿಗಳ 8.68 ಲಕ್ಷ
2016-17 – 100 ಜಾತಿಗಳ 9.24 ಲಕ್ಷ
ಭೀತರ್ಕನಿಕಾ
2024 – 13,0123 ಪಕ್ಷಿಗಳು
2023 – 123867
2021-22 – 144 ಜಾತಿಗಳ 1.38 ಲಕ್ಷ
2020-21 – 121 ಜಾತಿಗಳಲ್ಲಿ 1.36 ಲಕ್ಷ
2019-20 – 105 ಜಾತಿಗಳಲ್ಲಿ 1.18 ಲಕ್ಷ
ಹಿರಾಕುಡ್
2021-22 – 104 ಜಾತಿಗಳ 2.08 ಲಕ್ಷ
2020-21 – 41 ಜಾತಿಗಳ 1.03 ಲಕ್ಷ
2019-20 – 93 ಜಾತಿಗಳ 0.98 ಲಕ್ಷ