ಲಂಡನ್: ಹವಾಮಾನ ವೈಪರೀತ್ಯವು ಪಕ್ಷಿಗಳ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತಿದ್ದು ಅವುಗಳ ನಡುವೆ ವಿಚ್ಛೇದನಕ್ಕೆ ಕಾರಣವಾಗುತ್ತಿದೆ ಎಂಬ ಆಘಾತಕಾರಿ ವಿಷಯೊವಂದನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ.
ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ ಪ್ರಕಟಿಸಿದ ಅಧ್ಯಯನದ ಪ್ರಕಾರ ಹವಾಮಾನದ ಬದಲಾವಣೆಯು ದಕ್ಷಿಣ ಅಂಟ್ಲಾಟಿಕ್ ಫಾಕ್ ಲ್ಯಾಂಡ್ ದ್ವೀಪದ ಕಪ್ಪು-ಕಂದು ಕಡಲು ಕೋಳಿಗಳ ಸಂತಾನೋತ್ಪತ್ತಿಯಲ್ಲಿ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ
Advertisement
Advertisement
ಸಾಮಾನ್ಯವಾಗಿ ದೀರ್ಘಕಾಲ ಏಕ ಸಂಗಾತಿ ಸಂಬಂಧ ಹೊಂದುವ ಕಡಲು ಕೋಳಿಗಳು( Albatrosses) ಸಂತಾನೋತ್ಪತ್ತಿಯಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಯಶಸ್ಸು ಪಡೆಯಲು ಹೊಸ ಸಂಗಾತಿಯನ್ನು ಹುಡುಕುತ್ತಿವೆ. ಇದು ಪಕ್ಷಿ ಜೋಡಿಗಳ ನಡುವೆ ವಿಚ್ಛೇದನಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ಅಧ್ಯಯನದಲ್ಲಿ 2003ರಿಂದ ಫಾಕ್‍ಲ್ಯಾಂಡ್ ದ್ವೀಪದಲ್ಲಿ ವಾಸವಾಗಿರುವ ಸುಮಾರು 15,500 ಜೋಡಿ ಕಡಲುಕೋಳಿಗಳ ಸಂತಾನೋತ್ಪತ್ತಿ ನಡುವಳಿಕೆಯನ್ನು ಸಂಗ್ರಹಿಸಲಾಗಿದೆ. ಇದನ್ನೂ ಓದಿ: ಮೃತ ವೃದ್ಧೆಯ ಹೆಬ್ಬೆಟ್ಟನ್ನು ಪೇಪರ್‌ಗೆ ಒತ್ತಿಸಿಕೊಂಡ ಪ್ರಕರಣ – ಎಫ್‍ಐಆರ್ ದಾಖಲು