ರಾಯಚೂರು: ನಗರದ ಜಲಾಲನಗರದ ಬಳಿ 20 ವರ್ಷಗಳಿಂದ ಅನಧಿಕೃತವಾಗಿ ಶೆಡ್ (Shed), ಗುಡಿಸಲು ಹಾಕಿಕೊಂಡಿದ್ದ ಸುಮಾರು 200 ಕುಟುಂಬಗಳನ್ನ ತಾಲೂಕು ಆಡಳಿತ ಏಕಾಏಕಿ ತೆರವುಗೊಳಿಸಿದೆ. ಇದರಿಂದ ಬೀದಿಗೆ ಬಂದಿರುವ ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ನಗರಸಭೆಗೆ ತೆರಿಗೆ ಕಟ್ಟಿರುವ ಇಲ್ಲಿನ ನಿವಾಸಿಗಳು ಅಕ್ರಮ-ಸಕ್ರಮದಲ್ಲಿ ಜಾಗ ಉಳಿಸಿಕೊಡುವ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಏಕಾಏಕಿ ನಮ್ಮನ್ನ ಬೀದಿಗೆ ತಂದಿದ್ದಾರೆ ಅಂತ ಆರೋಪಿಸಿದ್ದಾರೆ. ಅಲೆಮಾರಿ ಜನಾಂಗ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುವವರು ಅನಧಿಕೃತವಾಗಿ ಶೆಡ್‍ಗಳನ್ನ ಹಾಕಿಕೊಂಡು ಸರ್ಕಾರಿ ಜಾಗ (Government Place) ದಲ್ಲಿ ವಾಸ ಮಾಡುತ್ತಿದ್ದಾರೆ.
Advertisement
Advertisement
ನಗರಸಭೆ ಹಾಗೂ ತಾಲೂಕು ಆಡಳಿತ ರಾತ್ರೋರಾತ್ರಿ ಶೆಡ್‍ಗಳನ್ನ ತೆರವುಗೊಳಿಸಿದೆ. ಬದುಕಲು ನೆಲೆಯಿಲ್ಲ ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಅಂತ ಇಲ್ಲಿನ ಜನ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ