ಚರಂಡಿ ನೀರಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ- ವೀಡಿಯೋ ನೋಡಿ

Public TV
1 Min Read
bhopal

ಭೋಪಾಲ್: ತರಕಾರಿ ಮಾರಾಟಗಾರನೊಬ್ಬನು ಭೋಪಾಲ್‍ನ ಸಿಂಧಿ ಮಾರ್ಕೆಟ್‍ನ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

coriander leaves 2

ವೀಡಿಯೋದಲ್ಲಿ ಏನಿದೆ?
ತರಕಾರಿ ಮಾರಾಟಗಾರನೊಬ್ಬ ಚರಂಡಿ ನೀರಿನಲ್ಲಿ ತರಕಾರಿ ತೊಳೆಯುತ್ತಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿ ಕೊಳಕು ನೀರಿನಲ್ಲಿ ತಿನ್ನುವ ತರಕಾರಿಗಳನ್ನು ತೊಳೆಯಬೇಡಿ ಎಂದು ವ್ಯಕ್ತಿ ಪದೇ ಪದೇ ಹೇಳುತ್ತಿದ್ದರೂ, ಮಾರಟಗಾರನು ಗಮನ ಕೊಡಲಿಲ್ಲ. ಈ ದೃಶ್ಯ ನೋಡಿದರೆ ನಿನ್ನ ಬಳಿ ಯಾರೂ ತರಕಾರಿ ಖರೀದಿಸುವುದಿಲ್ಲ ಎಂದು ವ್ಯಕ್ತಿ ಹೇಳುತ್ತಿದ್ದರೂ, ಸಹ ಮಾರಾಟಗಾರ ನಿರ್ಲಕ್ಷ್ಯ ಮಾಡುತ್ತಾ ಚರಂಡಿ ನೀರಿನಲ್ಲೇ ಸೊಪ್ಪನ್ನು ತೊಳೆದು ಮಾರಾಟ ಮಾಡಲು ಸಿದ್ಧವಾಗಿಟ್ಟಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಕಡಿಮೆ ಆಹಾರ ತಿನ್ನಿ: ಕಿಮ್ ಜಾಂಗ್ ಉನ್ ಮನವಿ

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಾರಾಟಗಾರನ ವಿರುದ್ಧವಾಗಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೋಪಾಲ್‍ನ ಆಹಾರ ಮತ್ತು ನಾಗರಿಕ ಸರಬರಾಜು, ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಮಾರಾಟಗಾರನ ಬಗ್ಗೆ ತಿಳಿದು ಕಠಿಣ ಕ್ರಮ ಕೈಗೊಳ್ಳಬೇಕು, ನಾಗರಿಕರ ಆರೋಗ್ಯದೊಂದಿಗೆ ಯಾರೂ ಆಟವಾಡುವಂತಿಲ್ಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Share This Article