ದಾವಣಗೆರೆ: ಸ್ಯಾಂಡಲ್‍ವುಡ್ ನಟ ಮಾಸ್ಟರ್ ಆನಂದ್ ನೇತೃತ್ವದಲ್ಲಿ ನಗರದ ಹರಿಹರ ತಾಲೂಕಿನಲ್ಲಿ ಗ್ರೀನ್ ಗೆಳೆಯರ ತಂಡದಿಂದ ಸ್ವಚ್ಛತಾ ಕಾರ್ಯ ಆಯೋಜಿಸಲಾಗಿದೆ.
ಜಿಲ್ಲೆಯ ಹರಿಹರದ ಪ್ರಮುಖ ರಸ್ತೆಗಳು, ತುಂಗಾ ಭಧ್ರಾ ನದಿಯ ದಡದಲ್ಲಿ ಸ್ವಚ್ಚತಾ ಕಾರ್ಯ ಆಯೋಜಿಸಲಾಗಿದೆ. ಮಾಸ್ಟರ್ ಆನಂದ್ ಅವರು ಇಂದು ಹರಿಹರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಇದನ್ನೂ ಓದಿ: ನೂಪೂರ್ ವಿರುದ್ಧ ಪ್ರತಿಭಟಿಸಿದವರು ಕುವೈತ್‍ನಿಂದ ಗಡಿಪಾರು – ನಮ್ಮಲ್ಲಿ ಕಠಿಣ ಕ್ರಮ ಯಾವಾಗ ಎಂದ ನೆಟ್ಟಿಗರು?
ದೇವಸ್ಥಾನದ ಮುಂಭಾಗ ಇರುವ ರಸ್ತೆ ಸ್ವಚ್ಚತೆ ಮಾಡುತ್ತಿದ್ದು, ಹರಿಹರದ ನಾಗರಿಕರು, ಗ್ರೀನ್ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಇವತ್ತು ಇಡೀ ದಿನ ಗ್ರೀನ್ ಗೆಳೆಯರ ತಂಡ ಹರಿಹರದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆ ಮಾಡಲಿದ್ದಾರೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ – ಇಂಟರ್‌ನೆಟ್ ಸ್ಥಗಿತ, 70 ಮಂದಿ ಅರೆಸ್ಟ್