ಮೈಸೂರು: ದೇಶದ ಸ್ವಚ್ಚನಗರಗಳ (Clean City) ಪೈಕಿ ಟಾಪ್ 10 ರ ಪಟ್ಟಿಯಲ್ಲಿರುತ್ತಿದ್ದ ಸಾಂಸ್ಕೃತಿಕ ನಗರಿ ಮೈಸೂರು ಇದೀಗ 27 ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 7 ನೇ ಸ್ಥಾನದಲ್ಲಿದ್ದ ಮೈಸೂರಿಗೆ (Mysuru) ಸ್ವಚ್ಛನಗರಿ ಪಟ್ಟ ಕೈ ತಪ್ಪಿದ್ದು, ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಬೇಜವಬ್ದಾರಿ, ಅಸಡ್ಡೆಗೆ ಸ್ವಚ್ಛತೆಯಲ್ಲಿ ಮತ್ತೆ ಕುಸಿತಕ್ಕೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ನಗರ ಸರ್ವೇಕ್ಷಣೆ (Swachh Survekshan) ಫಲಿತಾಂಶ ಪ್ರಕಟಗೊಂಡಿದೆ. ದೇಶದ ಸ್ವಚ್ಛನಗರಗಳ ಪೈಕಿ 7 ನೇ ಸ್ಥಾನದಲ್ಲಿದ್ದ ಮೈಸೂರು ಇದೀಗ 27 ನೇ ಸ್ಥಾನಕ್ಕೆ ಕುಸಿತ ಕಂಡಿದೆ. 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವರ್ಗದಲ್ಲಿ ಪ್ರಥಮ ಸ್ಥಾನ ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದನ್ನೂ ಓದಿ: ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ
Advertisement
Advertisement
ರಾಷ್ಟ್ರಮಟ್ಟದಲ್ಲಿ ಈ ಬಾರಿಯೂ ಇಂದೋರ್‌ಗೆ ಮೊದಲ ಸ್ವಚ್ಛನಗರ ಪ್ರಶಸ್ತಿ ಲಭಿಸಿದೆ. ಜನಸಂಖ್ಯೆ ಆಧಾರಿತ ನಗರಗಳಲ್ಲಿ ಆಂಧ್ರಪ್ರದೇಶದ ತಿರುಪತಿ ಮೊದಲ ಸ್ಥಾನಕ್ಕೆರಿದೆ. ಸಿಎನ್‌ಡಿ ವೇಸ್ಟ್ ನಿರ್ವಹಣೆ, ನಗರದಲ್ಲಿ ಹಸಿರೀಕರಣ ಕಡಿಮೆಯಾದ ಹಿನ್ನೆಲೆಯಲ್ಲಿ ಸಮರ್ಥವಾಗಿ ಅಧಿಕಾರಿಗಳು ಕೆಲಸ ಮಾಡದ ಪರಿಣಾಮ ಮೈಸೂರಿಗೆ ಈ ಸ್ಥಾನ ಬಂದಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು. ಆದರೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛತೆ ವಿಚಾರದಲ್ಲಿ ಬದ್ಧತೆಯನ್ನು ಪ್ರದರ್ಶನ ಮಾಡದೇ ಇರುವುದರಿಂದ ಮೈಸೂರಿಗೆ ಈ ಸ್ಥಿತಿ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಪರಮೇಶ್ವರ್
Advertisement
ಈವರೆಗೂ ಸ್ಚಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಕಾಯ್ದುಕೊಂಡು ಬಂದಿತ್ತು. ಆದರೆ ಇದೇ ಮೊದಲ ಬಾರಿ 27ನೇ ಸ್ಥಾನಕ್ಕೆ ಕುಸಿತಕಂಡಿದೆ. ಯಾವ ವಿಭಾಗದಲ್ಲೂ ಮೈಸೂರು ಸ್ಪರ್ಧೆ ಒಡ್ಡದಿರುವುದು ಮೈಸೂರು ನಗರಕ್ಕೆ ಇದೊಂದು ಕಳಂಕವಾಗಿದೆ. 2014 ರಲ್ಲಿ ಮೊದಲ ಸ್ಥಾನದಲ್ಲಿದ್ದ ಮೈಸೂರು ಬಳಿಕ 7ನೇ ಸ್ಥಾನಕ್ಕಿಳಿದಿತ್ತು. ಮೈಸೂರು ಪಾಲಿಕೆಗೆ ಹೊಸದಾಗಿ ಬಂದಿರುವ ಪಾಲಿಕೆ ಆಯುಕ್ತ ಎಂ.ರೆಹಮಾನ್ ಷರೀಫ್, ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.