ಬೆಂಗಳೂರು: ರಸ್ತೆ ಬದಿ ನಿಂತಿದ್ದ ಗೂಡ್ಸ್ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಗೊರಗುಂಟೆಪಾಳ್ಯ ಸಿಗ್ನಲ್ ನಲ್ಲಿ ನಡದಿದೆ.
ಚನ್ನರಾಯಪಟ್ಟಣದ ನಿವಾಸಿ ಕಿರಣ್(25) ಮೃತ ದುರ್ದೈವಿ. ಕಿರಣ್ ಕ್ಯಾಂಟರ್ ಲಾರಿಯ ಕ್ಲೀನರ್ ಆಗಿದ್ದು, ಮುಂಜಾನೆ ನಾಲ್ಕು ಗಂಟೆ ಸರಿಯಾಗಿ ಈ ಘಟನೆ ಸಂಭವಿಸಿದೆ. ಗೊರಗುಂಟೆ ಪಾಳ್ಯ ಸಿಗ್ನಲ್‍ನ ಡಿವೈಡರ್ ಪಕ್ಕದಲ್ಲಿ ಗೂಡ್ಸ್ ಲಾರಿ ನಿಂತಿತ್ತು. ಈ ವೇಳೆ ಹಿಂದಿನಿಂದ ರಭಸವಾಗಿ ಬಂದ ಕ್ಯಾಂಟರ್ ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ.
Advertisement
ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕ್ಯಾಂಟರ್ ನ ಚಾಲಕ ಮನೋಜ್ ಗೆ ಗಂಭಿರ ಗಾಯಗಳಾಗಿದ್ದು, ಅಪಘಾತ ನಡೆದ ನಿಮಿಷಗಳಲ್ಲೆ ಗೂಡ್ಸ್ ಲಾರಿ ಎಸ್ಕೇಪ್ ಆಗಿದೆ.
Advertisement
ಕಿರಣ್ ಮೃತ ದೇಹವನ್ನು ರಾಮಯ್ಯ ಆಸ್ಫತ್ರೆಗೆ ರವಾನಿಸಲಾಗಿದೆ. ಅಲ್ಲದೇ ಗಾಯಾಳು ಮನೋಜ್ ನನ್ನು ರಾಮಯ್ಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಬಗ್ಗೆ ಯಶವಂತಪುರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv