ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ (Maha Kumbh Mela) ವ್ಯವಸ್ಥೆಗಳ ಬಗ್ಗೆ ರಾಜ್ಯಸಭಾ ಸಂಸದೆ ಸುಧಾಮೂರ್ತಿ (Sudha Murthy) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಹಾ ಕುಂಭಮೇಳ ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್ ಎಂದು ಬಣ್ಣಿಸಿದ್ದಾರೆ. ಮಹಾಕುಂಭ ವ್ಯವಸ್ಥೆಗಳ ಮಾದರಿಯು ಇತರ ಸರ್ಕಾರಗಳು ಅನುಸರಿಸಲು ಮಾನದಂಡವಾಗಿ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನಮ್ಮ ಭಾಗ್ಯ: ಗೌತಮ್ ಅದಾನಿ
ಸೋಮವಾರ ಮಹಾಕುಂಭದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದ ರಾಜ್ಯಸಭಾ ಸಂಸದೆ ಸುಧಾಮೂರ್ತಿ, ಕಾರ್ಯಕ್ರಮದ ವ್ಯವಸ್ಥೆ ಮತ್ತು ಸಂಘಟನೆಯಿಂದ ಪ್ರಭಾವಿತರಾಗಿದ್ದಾರೆ.
ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್ ಆಗಿದೆ. ಇದು ನನ್ನ ಮೊದಲ ಕುಂಭ. ವ್ಯವಸ್ಥೆಗಳು ತುಂಬಾ ಚೆನ್ನಾಗಿವೆ. ಎಲ್ಲಾ ಸರ್ಕಾರಗಳು ಈ ಮಾದರಿಯನ್ನು ಅನುಸರಿಸಬಹುದು. ತುಂಬಾ ಒಳ್ಳೆಯ ಅನುಭವ ನೀಡಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಬರೋಬ್ಬರಿ 10 ಕೋಟಿ ಭಕ್ತರಿಂದ ಪುಣ್ಯಸ್ನಾನ
ಮಹಾ ಕುಂಭಮೇಳ ಆರಂಭವಾದಾಗಿನಿಂದ, 10.2 ಕೋಟಿಗೂ ಹೆಚ್ಚು ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಬೃಹತ್ ಆಧ್ಯಾತ್ಮಿಕ ಕಾರ್ಯಕ್ರಮವು ಅಭೂತಪೂರ್ವ ಭಕ್ತ ಸಮೂಹಕ್ಕೆ ಸಾಕ್ಷಿಯಾಗಿದೆ.