-ಬಳ್ಳಾರಿಯಲ್ಲಿ ಗಣಿ ಬಳಿಕ ಸೌರಶಕ್ತಿ ಕಾಟ
ಬಳ್ಳಾರಿ: ಗಣಿ ಆಯ್ತು, ಈಗ ಬಿಸಿಲನಾಡು ಬಳ್ಳಾರಿಯಲ್ಲಿ ಸೋಲಾರ್ ಕಂಪೆನಿಯ ಕರ್ಮಕಾಂಡದ ಕಥೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನಕನ್ನಿಹಳ್ಳಿಯಲ್ಲಿ ಕ್ಲೀನ್ ಮ್ಯಾಕ್ಸ್ ಸೋಲಾರ್ ಕಂಪನಿ ವಿದ್ಯುತ್ ಸ್ಥಾವರ ಆರಂಭಿಸಿತ್ತು. ರೈತರಿಂದ ಕಡಿಮೆ ಬೆಲೆಗೆ 460 ಎಕರೆಯಷ್ಟು ಭೂಮಿ ಖರೀದಿಸಿ 60 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಿದ್ದು, ಇದುವರೆಗೆ ಕೈಗಾರಿಕಾ ಘಟಕ ಸ್ಥಾಪನೆಗೆ ಭೂ ಪರಿವರ್ತನೆ (ಎನ್‍ಎ) ಮಾಡಿಕೊಂಡಿಲ್ಲ.
Advertisement
Advertisement
ರೈತರ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಭೂಮಿಯನ್ನೂ ಅಕ್ರಮಿಸಿಕೊಂಡಿದ್ದು, ಅಲ್ಲೆಲ್ಲಾ ವಿದ್ಯುತ್ ಕಂಬಗಳನ್ನು ಹಾಕಿ ಲೈನ್ ಎಳೆದಿದೆ. ಬೃಹತ್ ಗುಂಡಿಗಳನ್ನು ಅಗೆದು ರಸ್ತೆಗಾಗಿ ಮಣ್ಣು ಸರಬರಾಜು ಮಾಡುತ್ತಿದೆ.
Advertisement
ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಸಹ ಕ್ಲೀನ್ ಮ್ಯಾಕ್ಸ್ ಕಂಪೆನಿಯ ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ರು. ಆದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಮಿನಿಸ್ಟರ್ ಪವರ್‍ಫುಲ್ ಆಗಿರೋ ಕಾರಣ ಜಿಲ್ಲಾಡಳಿತ ಸಮ್ಮನಿದೆ ಅನ್ನೋದು ಸ್ಥಳೀಯರ ಆರೋಪ.