ಕೋಲ್ಕತ್ತಾ: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ (Classical Singer) ಪಂಡಿತ್ ವಿಜಯ್ ಕುಮಾರ್ ಕಿಚ್ಲು (93) (Vijay Kumar Kichlu) ಉಸಿರಾಟದ ಸಮಸ್ಯೆಯಿಂದ ಶುಕ್ರವಾರ ಸಂಜೆ ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಿಧನರಾದರು.
ಕಿಚ್ಲು ಅವರನ್ನ ಆಸ್ಪತ್ರೆಗೆ ಕರೆತಂದಾಗ ಏದುಸಿರು ಬಿಡುತ್ತಿದ್ದರು. ಚಿಕಿತ್ಸೆ ಪ್ರಾರಂಭಿಸುವ ಮುನ್ನವೇ ಹೃದಯ ಸ್ತಂಭನಕ್ಕೆ ಒಳಗಾಗಿ ಸಂಜೆ 6.20ರ ಸುಮಾರಿಗೆ ನಿಧನರಾದರು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಸದ್ದಿಲ್ಲದೇ ಆದಿಯೋಗಿ ಶಿವನ ದರ್ಶನ ಪಡೆದ ರಜನಿಕಾಂತ್
Advertisement
Advertisement
ಕಿಚ್ಲು ಅವರು ದೀರ್ಘಕಾಲದವರೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಹೃದಯ ವೈಫಲ್ಯತೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದನ್ನೂ ಓದಿ: ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ
Advertisement
Advertisement
1930 ರಲ್ಲಿ ಜನಿಸಿದ ಕಿಚ್ಲು ದಗರ್ ಬ್ರದರ್ಸ್ ಬಳಿ `ದ್ರುಪದ್’ ಮತ್ತು ಲತಾಫತ್ ಹುಸೇನ್ ಖಾನ್ ಅವರೊಂದಿಗೆ `ಖಯಾಲ್’ ಅಧ್ಯಯನ ಮಾಡಿದರು. 25 ವರ್ಷಗಳ ಕಾಲ ಕೋಲ್ಕತ್ತಾದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಸಂಸ್ಥಾಪಕರು ಹಾಗೂ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.
ಇವರು 2018ರಲ್ಲಿ ಕಲೆ ಸಂಗೀತ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೂ (Padma Shri Award) ಭಾಜನರಾಗಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k