ಮಳೆ ಬರುತ್ತಿದೆ ಎಂದರೆ ಎಲ್ಲರಿಗೂ ಸ್ಫೈಸಿ ಫುಡ್ ತಿನ್ನಬೇಕು ಅನಿಸುವುದು ಸಹಜ. ಅದರಲ್ಲಿಯೂ ಚಿಕನ್ ಪ್ರಿಯರಿಗೆ ಸ್ಪೈಸಿ ಫುಡ್ ತುಂಬಾ ಇಷ್ಟ. ಚಿಕನ್‍ನಲ್ಲಿ ವಿಶೇಷ ರೆಸಿಪಿ ಟ್ರೈ ಮಾಡಲು ನಾನ್‍ವೆಜ್ ಪ್ರಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹಾಗಾದರೆ ಕ್ಲಾಸಿಕ್ ಚಿಕನ್ ಅಥವಾ ಮುರ್ಘ್ ಅಜ್ಮೇರಿಯನ್ನು ಟ್ರೈ ಮಾಡಿ. ಈ ಚಿಕನ್ ಸಖತ್ ಸ್ಪೈಸಿಯಾಗಿದ್ದು, ಎಲ್ಲರಿಗೂ ಇಷ್ಟವಾಗುತ್ತೆ.
Advertisement
ಬೇಕಾಗಿರುವ ಪದಾರ್ಥಗಳು:
* ಕತ್ತರಿಸಿದ ಚಿಕನ್- 1 ಕೆಜಿ
* ತುಪ್ಪ – 4 ಚಮಚ
* ಕತ್ತರಿಸಿದ ಈರುಳ್ಳಿ – 2 ಕಪ್
* ಕೊತ್ತಂಬರಿ ಪುಡಿ – 2 ಟೇಬಲ್‍ಸ್ಪೂನ್
* ಕೆಂಪು ಮೆಣಸಿನ ಪುಡಿ – 1 ಚಮಚ
* ಗರಂ ಮಸಲಾ ಪುಡಿ – 1 ಚಮಚ
* ತಾಜಾ ಕೆನೆ – 2 ಚಮಚ
* ಗೋಡಂಬಿ – 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಪುದೀನಾ ಎಲೆಗಳು – 3
* ಕೊತ್ತಂಬರಿ ಸೊಪ್ಪು – 1/2 ಕಪ್
* ಮೊಸರು – 1 ಕಪ್
* ಶುಂಠಿ ಪೇಸ್ಟ್ – 2 ಚಮಚ
* ಬೆಳ್ಳುಳ್ಳಿ ಪೇಸ್ಟ್ – 2 ಚಮಚ
* ಹಸಿರು ಮೆಣಸಿನಕಾಯಿ ಪೇಸ್ಟ್ – 1 ಚಮಚ
* ಸಾಸಿವೆ ಎಣ್ಣೆ – 1 ಚಮಚ
* ನಿಂಬೆ ರಸ – 1 ಚಮಚ
Advertisement
Advertisement
ಮಸಾಲೆ ಪದಾರ್ಥಗಳು:
* ಮೆಣಸಿನಕಾಳು – 4
* ಲವಂಗ – 4
* ಏಲಕ್ಕಿ – 2
* 1 ಇಂಚಿನ ದಾಲ್ಚಿನ್ನಿ ಕಡ್ಡಿ
* 1 ಟೀ ಚಮಚ ಮೇಸ್ (ಜಾವಿತ್ರಿ)
* ಅಜ್ವೈನ್ – 1/2 ಚಮಚ
Advertisement
ಮಾಡುವ ವಿಧಾನಗಳು:
* ಚಿಕನ್ ಅನ್ನು ಚೆನ್ನಾಗಿ ತೊಳೆದು ಒಂದು ಬಟ್ಟಲಿನಲ್ಲಿ ಇಟ್ಟುಕೊಳ್ಳಿ.
* ಚಿಕನ್‍ಗೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಪೇಸ್ಟ್, ಸಾಸಿವೆ ಎಣ್ಣೆ, ನಿಂಬೆ ರಸ ಸೇರಿಸಿ 1 ಗಂಟೆ ಕಾಲ ಬಿಡಿ.
* ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ಅದಕ್ಕೆ ಎಲ್ಲ ಮಸಾಲೆ ಪದಾರ್ಥಗಳನ್ನು ಹಾಕಿ ಫ್ರೈ ಮಾಡಿ. ಅದಕ್ಕೆ ರುಬ್ಬಿದ ಈರುಳ್ಳಿಯನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಮತ್ತು ಅದು ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
* ಈ ಮಸಾಲೆಗೆ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಮೊಸರು ನೀರು ಬಿಡುವವರೆಗೆ ಫ್ರೈ ಮಾಡಿ.
* ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಮತ್ತು ಪುದೀನಾ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 10 ರಿಂದ 15 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
* ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಅದಕ್ಕೆ ತಾಜಾ ಕೆನೆ, ಕತ್ತರಿಸಿದ ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಬೇಯಿಸಿ.
* ಚಿಕನ್ ಮಸಲಾ ಚೆನ್ನಾಗಿ ಹುರಿದ ನಂತರ ತುಪ್ಪ ಬೇಕಾದರೆ ಸೇರಿಸಿ. ಮಸಾಲ ರೆಡಿಯಾದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಈ ಕರಿಯನ್ನು ರೋಟಿ, ಚಪಾತಿ, ರೈಸ್ ಜೊತೆ ಸವಿಯಿರಿ.