ಡೆಹ್ರಾಡೂನ್: ನಾಲ್ವರು ಪಿಯು ವಿದ್ಯಾರ್ಥಿಗಳು ಪೋರ್ನ್ ವಿಡಿಯೋ ನೋಡಿ ಬಳಿಕ ಅದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರೆಸಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಡೆಹ್ರಾಡೂನ್ ಬೋರ್ಡಿಂಗ್ ಶಾಲೆಯ ವಿದ್ಯಾರ್ಥಿಗಳು ಈ ನೀಚ ಕೃತ್ಯ ಮಾಡಿದ್ದು, ಈಗ ಅವರನ್ನು ಅತ್ಯಾಚಾರದ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮತ್ತು ಸಂತ್ರಸ್ತೆ ಒಂದೇ ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳು ತಮ್ಮ ಫೋನಿನಲ್ಲಿ ಪೋರ್ನ್ ವಿಡಿಯೋ ನೋಡಿ ಈ ರೀತಿಯ ಕೃತ್ಯ ಮಾಡಿದ್ದಾರೆ ಎಂದು ಡೆಹ್ರಾಡೂನ್ ನ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ನಿವೇದಿತಾ ಕುಕ್ರೆಟ್ಟಿ ಅವರು ತಿಳಿಸಿದ್ದಾರೆ.
Advertisement
Advertisement
ಮೊದಲು ತಮ್ಮ ಮೊಬೈಲ್ ಫೋನಿನಲ್ಲಿ ಪೋರ್ನ್ ಸಿನಿಮಾಗಳನ್ನು ನೋಡಿದ ಬಳಿಕ ಒಬ್ಬನನ್ನು 16 ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡುವಂತೆ ಪ್ರೇರೇಪಿಸಿರುವುದಾಗಿ ವಿದ್ಯಾರ್ಥಿಗಳಲ್ಲಿ ಒಬ್ಬ ತಪ್ಪನ್ನು ಒಪ್ಪಿಕೊಂಡಿದ್ದಾನೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ.
Advertisement
ನಡೆದಿದ್ದೇನು?
ಈ ಘಟನೆ ಆಗಸ್ಟ್ 14 ರಂದು ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಗೆ ತಯಾರು ಮಾಡಿಕೊಳ್ಳುತ್ತಿದ್ದಾಗ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಸ್ಟೋರ್ ರೂಮ್ ಗೆ ಕರೆದುಕೊಂಡು ಹೋಗಿದ್ದಾರೆ. ನಂತರ ನಾಲ್ವರು ಹುಡುಗರು ಸೇರಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಮತ್ತು ಆಕೆಯ ಸೋದರಿ ಹಾಸ್ಟೆಲ್‍ನ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದರು. ಸೋದರಿಯರ ತಂದೆ ಮತ್ತು ತಾಯಿ ನಡುವೆ ಜಗಳ ಉಂಟಾಗಿದ್ದರಿಂದ ಮಕ್ಕಳು ನೋಡಲು ಯಾರು ಬಂದಿರಲಿಲ್ಲ. ಅತ್ಯಾಚಾರದ ಬಳಿಕ ವಿದ್ಯಾರ್ಥಿನಿ ತನ್ನ ದೇಹದಲ್ಲಾದ ಬದಲಾವಣೆ ಮತ್ತು 12ನೇ ಕ್ಲಾಸ್ ಹುಡುಗರು ನಡೆಸಿರುವ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತಂಗಿಯ ಮಾತು ಕೇಳಿದ ಅಕ್ಕ ನೇರವಾಗಿ ಶಿಕ್ಷಕರಿಗೆ ತಿಳಿಸಿದ್ದಾಳೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದ್ದನ್ನು ಇನ್ಸ್ಟಿಟ್ಯೂಟ್ ಸಿಬ್ಬಂದಿ ಮುಚ್ಚಿಹಾಕಲು ಮತ್ತು ಆಕೆ ಗರ್ಭಿಣಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಹುಡುಗರು ಮತ್ತು ಶಾಲಾ ನಿರ್ದೇಶಕ, ಪ್ರಿನ್ಸಿಪಾಲ್ ಸೇರಿದಂತೆ ಐದು ಶಾಲಾ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಅಪ್ರಾಪ್ತರನ್ನು ರಿಮ್ಯಾಂಡ್ ಹೋಂಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಫೋನ್ ಗಳಲ್ಲಿ ಸುಲಭವಾಗಿ ಪೋರ್ನ್ ವಿಡಿಯೋ ಸಿಗುವುದರಿಂದ ಈ ರೀತಿ ಕೃತ್ಯ ಹೆಚ್ಚಾಗುತ್ತಿವೆ. ಅದರಲ್ಲೂ ಅಪ್ರಾಪ್ತರೇ ಅತಿ ಹೆಚ್ಚಾಗಿ ಲೈಂಗಿಕ ಅಪರಾಧಗಳಿಗೆ ತೊಡಗಿದ್ದಾರೆ. ಈ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಲು ಯೋಜನೆಯನ್ನು ಜಾರಿಗೆ ಮಾಡಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಅಲೋಕ್ ಕುಮಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv