ಬಳ್ಳಾರಿ: ಮಳೆ ಬಂದ್ರೆ ಸೋರುತ್ತದೆ, ಮೇಲ್ಛಾವಣಿಯಿಂದ ಆಗಾಗ ಬೀಳುತ್ತಿದೆ ಸಿಮೆಂಟಿನ ಪದರು – ಸರ್ಕಾರಿ ಶಾಲೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ ಸಿರುಗುಪ್ಪ ತಾಲ್ಲೂಕಿನ ಗಜಗಿನಹಾಳು ಗ್ರಾಮದ ಸರ್ಕಾರಿ ಶಾಲೆ.
ಹೌದು. ಕೊಠಡಿಯ ಮೇಲ್ಛಾವಣಿ ಉದುರಿ ಬೀಳುತ್ತಿದ್ದರೂ ಆತಂಕದಲ್ಲೇ ಪಾಠ ಕೇಳುವ ಅನಿವಾರ್ಯತೆ ಗಜಗಿನಹಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳದ್ದು.
ಮಳೆ ಬಂದರೆ ಶಾಲೆಯ ಮೇಲ್ಚಾವಣಿಯಿಂದ ತಟ್ ತಟ್ ಅಂತಾ ನೀರು ಸೋರುತ್ತೆ. ಅಲ್ಲದೇ ಮೇಲ್ಛಾವಣಿಯ ಸಿಮೆಂಟ್ ಪದರು ಆಗಾಗ ಉದುರಿಯೂ ಬೀಳುತ್ತಿದೆ. ಇದನ್ನೂ ಓದಿ:ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ
ಶಾಲೆಯ ಮೇಲ್ಛಾವಣಿ ಉದುರಿ ಬೀಳುತ್ತಿರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಹಿಂದೇಟು ಹಾಕುತ್ತಿದ್ದಾರೆ. ಕೊಠಡಿ ಸಮಸ್ಯೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ಜೀವಕ್ಕೆ ಅಪಾಯವಾದಾಗಲೇ ಎಚ್ಚೆತ್ತುಕೊಳ್ತಾರಾ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ಸಹಿತ ಕೊಠಡಿಯಲ್ಲಿ ಕುಳಿತುಕೊಳ್ಳುವ ಭಯ ಆಗುತ್ತಿದೆ. ನಮಗೆ ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.